IPL ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವಿನ ಸರಾಸರಿ ಹೊಂದಿರುವ ಕ್ಯಾಪ್ಟನ್ಸ್: ರೋಹಿತ್‌ಗೆ 5ನೇ ಸ್ಥಾನ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 8 ತಂಡಗಳಿಂದ ಪ್ರಾರಂಭಗೊಂಡು 15ನೇ ಸೀಸನ್‌ನಲ್ಲಿ 10 ತಂಡಗಳಿಗೆ ಹೋಗಿ ತಲುಪಿದೆ. ಹೊಸ ಹೊಸ ನಾಯಕರು ಹೊಸ ತಂಡದ ಪರ ನಾಯಕತ್ವ ವಹಿಸಿದ್ದಾರೆ. ನಾಲ್ಕು ಬಾರಿಯ ಚಾಂಪಿಯನ್ ಸಿಎಸ್‌ಕೆ ನಾಯಕ ಧೋನಿಯೇ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ರೆ, ಆರ್‌ಸಿಬಿಯ ಪಿಲ್ಲರ್ ವಿರಾಟ್ ಕೊಹ್ಲಿ ಕೂಡ ನಾಯಕತ್ವ ಸಾಕು ಎಂದು ದೂರ ಉಳಿದಿದ್ದಾರೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ 15ನೇ ಸೀಸನ್‌ನಲ್ಲಿ ಇನ್ನೂ ಒಂದು ಗೆಲುವು ದಾಖಲಿಸಿಲ್ಲ ಎಂಬುದು ಟೂರ್ನಿಯ ಪ್ರಬಲ ಸ್ಪರ್ಧೆ, ಹೊಸ ತಂಡಗಳ ಪ್ರದರ್ಶನ ಹಾಗೂ ಆಟಗಾರರು ವಿಭಜನೆಯಾಗಿರುವುದು ಸಹ ಕಾರಣವಾಗಿದೆ. ಹೀಗಿರುವಾಗಿ ಐಪಿಎಲ್ ಇತಿಹಾಸವನ್ನ ಗಮನಿಸಿದ್ರೆ, ಐಪಿಎಲ್‌ನ ಅತ್ಯಂತ ಯಶಸ್ವಿ ಕಪ್ತಾನ ಅಂದ್ರೆ ಅದು ಈಗಲೂ ಕೂಡ ಒನ್ ಅಂಡ್ ಓನ್ಲಿ ಮಹೇಂದ್ರ ಸಿಂಗ್ ಧೋನಿ ಆಗಿದ್ದಾರೆ.

ಐಪಿಎಲ್ 2022 ಸೀಸನ್‌ಗೂ ಮುನ್ನವೇ ನಾಯಕತ್ವ ಬಿಟ್ಟ ಧೋನಿ
ಐಪಿಎಲ್ 15ನೇ ಸೀಸನ್‌ಗೆ ಇನ್ನೇನು ಹತ್ತಿರವಾಗುತ್ತಿದ್ದಂತೆ ಎಂ.ಎಸ್ ಧೋನಿ ನಾಯಕತ್ವ ತ್ಯಜಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಅಷ್ಟೇ ಅಲ್ಲದೆ ಐಪಿಎಲ್ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ರವೀಂದ್ರ ಜಡೇಜಾಗೆ ನಾಯಕತ್ವ ಪಟ್ಟ ಕಟ್ಟಿದ ಧೋನಿ ಸಿಎಸ್‌ಕೆ ಭವಿಷ್ಯಕ್ಕೆ ನಾಂದಿ ಹಾಡಿದರು. ಆದ್ರೆ ದುರಾದೃಷ್ಟ ಅಂದ್ರೆ ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಸೋಲನ್ನ ಕಂಡಿತು. ಆದ್ರೆ ಕಳೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೀಸನ್‌ನ ಮೊದಲ ಜಯ ದಾಖಲಿಸಿತು.
IPL 2022: ಧೋನಿ ಎದುರೇ ಹೆಲಿಕಾಪ್ಟರ್ ಶಾಟ್ ಹೊಡೆದ ಮೊಹಮ್ಮದ್ ಸಿರಾಜ್

ರೋಹಿತ್ ಶರ್ಮಾ ಐದು ಬಾರಿ ಕಪ್ ಗೆದ್ದರೂ ಸಹ ಧೋನಿಯೇ ಟಾಪ್
ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅಂದ್ರೆ ಐದು ಟ್ರೋಫಿಗಳನ್ನ ಮುಂಬೈ ಇಂಡಿಯನ್ಸ್‌ಗೆ ಗೆದ್ದುಕೊಟ್ಟಿದ್ದಾರೆ. ಹೀಗಿದ್ದರೂ ಸಹ ರೋಹಿತ್ ಶರ್ಮಾಗಿಂತ ಮಹೇಂದ್ರ ಸಿಂಗ್ ಧೋನಿಯೇ ಮುಂದಿದ್ದಾರೆ. ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ನಾಯಕರ ಪಟ್ಟಿಯಲ್ಲಿ ಮಾಹಿ ಮೊದಲ ಸ್ಥಾನದಲ್ಲಿದ್ದಾರೆ.
ಧೋನಿ 204 ಐಪಿಎಲ್ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದು, 121 ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಇವರ ಗೆಲುವಿನ ಸರಾಸರಿ 59.60ರಷ್ಟಿದೆ ಅಂದ್ರೆ ನಿಜಕ್ಕೂ ಮೆಚ್ಚಲೇಬೇಕಾಗಿದೆ. ಧೋನಿ ಚೆನ್ನೈ ಸೂಪರ್ ಜೈಂಟ್ಸ್ ಅಷ್ಟೇ ಅಲ್ಲದೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ನಾಯಕತ್ವವನ್ನು ಸಹ ವಹಿಸಿದ್ದರು

ಧೋನಿ ನಂತರದಲ್ಲಿದ್ದಾನೆ ಸ್ಟೀವ್ ಸ್ಮಿತ್
ಕುತೂಹಲಕಾರಿ ವಿಷಯ ಏನಂದ್ರೆ ಧೋನಿ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಇರೋದು ಎಲ್ಲರನ್ನ ಆಶ್ಚರ್ಯಗೊಳಿಸುತ್ತದೆ. 43 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಸ್ಮಿತ್ 25 ಪಂದ್ಯಗಳನ್ನ ಜಯಿಸಿದ್ದಾರೆ. ಇವರ ನಾಯಕತ್ವದಲ್ಲಿ 59.60ರಷ್ಟು ಗೆಲುವಿನ ಸರಾಸರಿ ಹೊಂದಿದೆ.
ಸ್ಟೀವ್ ಸ್ಮಿತ್ ಪುಣೆ ವಾರಿಯರ್ಸ್ ಇಂಡಿಯಾ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿದ್ದಾರೆ.
RR vs GT Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

ಐದು ಬಾರಿ ಕಪ್ ಗೆದ್ದ ರೋಹಿತ್‌ಗೆ ಐದನೇ ಸ್ಥಾನ
ಟ್ರೋಫಿಗಳ ಗೆದ್ದ ವಿಷಯದಲ್ಲಿ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ, ಆದರೆ ಅವರು ಅತಿ ಹೆಚ್ಚು ಪಂದ್ಯ ಗೆದ್ದ ನಾಯಕರ ಶೇಕಡಾವಾರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ಯಾಮರೂನ್ ವೈಟ್ ಶೇಕಡಾ 58.33 ಗೆಲುವಿನೊಂದಿಗೆ ಟಾಪ್-5 ರಲ್ಲಿ ಅಚ್ಚರಿಯ ಹೆಸರಾಗಿದೆ.
ಸಚಿನ್ ತೆಂಡೂಲ್ಕರ್ 51 ಪಂದ್ಯಗಳಲ್ಲಿ 30 ಗೆಲುವಿನೊಂದಿಗೆ 58.22 ಗೆಲುವಿನ ಸರಾಸರಿ ಹೊಂದಿದ್ದಾರೆ. ಕ್ಯಾಮರೂನ್ ವೈಟ್(ಡೆಕ್ಕನ್ ಚಾರ್ಜಸ್) 12 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ ಶೇಕಡಾ 58.33 ಸರಾಸರಿ ಮತ್ತು ರೋಹಿತ್ ಶರ್ಮಾ 133 ಪಂದ್ಯಗಳಲ್ಲಿ 75 ಪಂದ್ಯಗಳ ಗೆಲುವಿನೊಂದಿಗೆ 57.89ರ ಗೆಲುವಿನ ಸರಾಸರಿ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications