IPL 2022: ದೀಪಕ್ ಚಹಾರ್ ಬದಲು ಇಶಾಂತ್ ಶರ್ಮಾಗೆ ಮಣೆ ಹಾಕಲು CSK ಸಿದ್ಧತೆ: ವರದಿ

ಐಪಿಎಲ್ 15ನೇ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಮುಖ ಬೌಲರ್ ದೀಪಕ್ ಚಹಾರ್ ಗಾಯಾಳುವಾಗಿ ಹೊರಗುಳಿದಿದ್ದು ಸಿಎಸ್‌ಕೆಗೆ ಈ ಸೀಸನ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದು ಸುಳ್ಳಲ್ಲ. ಹೀಗಿರುವಾಗ ದೀಪಕ್ ಚಹಾರ್ ಇಡೀ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಕಾರಣ ಎನ್‌ಸಿಎ ಶಿಬಿರದಲ್ಲಿ ಚಹಾರ್ ಬೆನ್ನಿಗೆ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಹೀಗಿರುವಾಗ ಚಹಾರ್‌ನ ಕಾಯುತ್ತಾ ಕುಳಿತಲ್ಲಿ ಎಡವಟ್ಟು ಆಗುವುದು ಎಂದು ಅರಿತ ಸಿಎಸ್‌ಕೆ ಫ್ರಾಂಚೈಸಿ ಬದಲಿ ಬೌಲರ್‌ನ ಹುಡುಕಾಟದಲ್ಲಿದೆ. ಅನುಭವಿ ಬೌಲರ್ ಇಶಾಂತ್ ಶರ್ಮಾಗೆ ಚೆನ್ನೈ ಸೂಪರ್ ಕಿಂಗ್ಸ್ ಮಣೆ ಹಾಕುವ ಸಾಧ್ಯತೆ ಇದೆ.
ಐಪಿಎಲ್ ಮೆಗಾ ಹರಾಜಿನಲ್ಲಿ 14 ಕೋಟಿ ರೂ.ಗೆ ದೀಪಕ್ ಸಹರ್ ಅವರನ್ನು CSK ಖರೀದಿಸಿತು. ಆದ್ರೆ ಚಹಾರ್ ಗಾಯದಿಂದಾಗಿ ಆಡಲು ಸಾಧ್ಯವಾಗಲಿಲ್ಲ. ಹೀಗಿರುವಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿ ಉಳಿದಿರುವ ಅನುಭವಿ ವೇಗಿ ಇಶಾಂತ್ ಶರ್ಮಾಗೆ ಅವಕಾಶ ನೀಡಲು ಸಿಎಸ್‌ಕೆ ಚಿಂತಿಸಿದೆ.
ಭಾರತ ತಂಡದ ಸ್ಟಾರ್ ಆಟಗಾರ ಇಶಾಂತ್ ಶರ್ಮಾ ಪ್ರಸಕ್ತ ಐಪಿಎಲ್ ಸರಣಿಯಲ್ಲಿ ಗೆಸ್ಟ್ ಬಾಕ್ಸ್ ಆಗಿ ತೆರೆಗೆ ಬಂದು ಅಭಿಮಾನಿಗಳಿಗೆ ಶಾಕ್ ನೀಡಲಿದ್ದಾರೆ.
ಐಪಿಎಲ್‌ನಲ್ಲಿ ಆಡಿದ ಅನುಭವವಿದೆ
ಇಶಾಂತ್‌ಗೆ ಟಿ20 ಕ್ರಿಕೆಟ್‌ನ ಅನುಭವವೂ ಇದೆ. ಗಾಯದ ಸಮಸ್ಯೆಯಿಂದಾಗಿ ಇಶಾಂತ್ ಭಾರತದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ನಂತರ ಚೇತರಿಸಿಕೊಳ್ಳುವ ಅವಕಾಶ ಸಿಗಲಿಲ್ಲ. ಹೀಗಾಗಿ ಹತಾಶರಾಗಿರುವ ಇಶಾಂತ್ ಶರ್ಮಾ ಸದ್ಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪ್ರಸ್ತುತ ಸಿಎಸ್‌ಕೆ ಮೂಲಕ ಕಂಬ್ಯಾಕ್ ಮಾಡುವ ಅವಕಾಶವಿದೆ.
2010 ರಲ್ಲಿ ಬೋಲಿಂಗರ್ ಆಗಮಿಸಿದಾಗ ಚೆನ್ನೈ ಗೆಲುವಿನ ಹಾದಿಗೆ ಮರಳಿದಂತೆಯೇ, ಇಶಾಂತ್ ಶರ್ಮಾ ಸಿಎಸ್‌ಕೆಗೆ ಆಗಮಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದನ್ನು ಬಿಸಿಸಿಐ ಅನುಮೋದಿಸಬೇಕು. ಮುಂದಿನ ವರ್ಷ ಮತ್ತೆ ದೀಪಕ್ ಚಹಾರ್ ಬೇಕಾಗುವುದರಿಂದ ಬಿಸಿಸಿಐ ಇಶಾಂತ್ ಶರ್ಮಾ ಅವರಿಗೆ ತಾತ್ಕಾಲಿಕವಾಗಿ ಸಿಎಸ್‌ಕೆ ಪರ ಆಡಲು ಅವಕಾಶ ನೀಡಬೇಕು.
NCAನಲ್ಲಿ ಮತ್ತೆ ಗಾಯಗೊಂಡ ದೀಪಕ್ ಚಹಾರ್: ವರದಿ
ಪ್ರಸ್ತುತ ಸೀಸನ್‌ನಲ್ಲಿ ದೀಪಕ್ ಚಹಾರ್ ಮತ್ತೆ ಕಂಬ್ಯಾಕ್ ಮಾಡಬಹುದೆಂದು ಸಿಎಸ್‌ಕೆ ಕಾದು ಕುಳಿತಿತ್ತು. ಆದ್ರೆ ವರದಿ ಪ್ರಕಾರ ಬೆಂಗಳೂರು ಎನ್‌ಸಿಎ ಅಕಾಡೆಮಿಯ ಪುನರ್ವಸತಿ ಶಿಬಿರದಲ್ಲಿ ಭಾಗಿಯಾಗಿದ್ದ ದೀಪಕ್ ಚಹಾರ್ ಬೆನ್ನಿನ ಗಾಯಕ್ಕೆ ತುತ್ತಾಗಿದ್ದು, ಚೇತರಿಸಿಕೊಳ್ಳುವ ಅವಧಿ ಮತ್ತಷ್ಟು ಹೆಚ್ಚಾಗಿದೆ.
ಇಎಸ್‌ಪಿಎನ್ ವರದಿ ಪ್ರಕಾರ ಇಂಜ್ಯುರಿ ಪ್ರಮಾಣ ಹಾಗೇ ಇದ್ದು, ಚೇತರಿಸಿಕೊಳ್ಳುವ ಸಮಯ ಮತ್ತಷ್ಟು ದೂರ ಸಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications