For Quick Alerts
ALLOW NOTIFICATIONS  
For Daily Alerts
 

DC vs PBKS: ಕೆಟ್ಟದಾಗಿ ಸೋತ ಪಂಜಾಬ್: ಹತ್ತೇ ಓವರ್‌ಗೆ ಮ್ಯಾಚ್ ಮುಗಿಸಿದ ಡೆಲ್ಲಿ ದಾಖಲೆ

Delhi capitals
Punjab Kings ತಂಡವನ್ನು ಸಕತ್ ಸುಲಭವಾಗಿ ಸೋಲಿಸಿದ DC | Oneindia Kannada

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಕಲೆಹಾಕಿದ ಪಂಜಾಬ್ ಕಿಂಗ್ಸ್, ಹೀನಾಯ ಸೋಲನ್ನ ಕಂಡಿದ್ದು ಒಂದು ಕಡೆಯಾದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರದ ಆಟವಾಡಿ ಹತ್ತು ಓವರ್‌ಗಳಲ್ಲಿ ಪಂದ್ಯ ಮುಗಿಸಿಬಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್‌ ಬ್ಯಾಟರ್ಸ್ ಬ್ಯಾಟಿಂಗ್ ಮರೆತುಹೋದಂತೆ ಬಹುಬೇಗನೆ ಪೆವಿಲಿಯನ್ ಸೇರಿಕೊಂಡ್ರು. ನಾಯಕ ಮಯಾಂಕ್ 24, ಜಿತೇಶ್ ಶರ್ಮಾ 32 ರನ್‌ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

100 ರನ್‌ಗಳೊಳಗೆ 8 ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್ ಕುಂಟುತ್ತಾ 20 ಓವರ್‌ಗಳಲ್ಲಿ ಪಡೆದಿದ್ದು 115ರನ್‌ಗಳು. ಕೊನೆಯ ಎಸೆತದಲ್ಲೂ ರನ್ ಪಡೆಯದೇ ವಿಕೆಟ್ ಒಪ್ಪಿಸಿದ್ದು ಕೂಡ ದೊಡ್ಡ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಯಿತು.

ಅತಿ ಸುಲಭವಾಗಿ 116ರನ್ ಟಾರ್ಗೆಟ್‌ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌

ಅತಿ ಸುಲಭವಾಗಿ 116ರನ್ ಟಾರ್ಗೆಟ್‌ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌

ರಿಷಭ್ ಪಂತ್ ನಾಯಕತ್ವದಲ್ಲಿ , ಕೋವಿಡ್-19 ಕೇಸ್‌ಗಳ ಕಾಟದ ನಡುವೆ ಬೊಂಬಾಟ್ ಆಟವಾಡಿದ ಡೆಲ್ಲಿ ಕ್ಯಾಪಿಟಲ್ಸ್ 10.3 ಓವರ್‌ಗಳಲ್ಲಿಯೇ ಪಂದ್ಯಕ್ಕೆ ಮುಕ್ತಾಯ ಹಾಡಿತು. ಪೃಥ್ವಿ ಶಾ ಅಬ್ಬರದ 41 ರನ್, ಡೇವಿಡ್ ವಾರ್ನರ್ 30 ಎಸೆತಗಳಲ್ಲಿ ಅಜೇಯ 60 , ಸರ್ಫರಾಜ್ 12ರನ್‌ಗಳ ಕೊಡುಗೆಯಿಂದ 9 ವಿಕೆಟ್‌ಗಳ ಭಾರೀ ಜಯ ಸಾಧಿಸಿತು. ನೆಟ್‌ ರನ್‌ರೇಟ್ ವಿಚಾರದಲ್ಲಂತೂ ಡೆಲ್ಲಿ ಕ್ಯಾಪಿಟಲ್ಸ್‌ ಈ ಗೆಲುವಿನಿಂದ ಬೆಟ್ಟದಂತ ಪಾಯಿಂಟ್ಸ್ ಬಾಚಿಕೊಂಡಿದೆ.

ಒಟ್ಟಾರೆ 6 ಪಾಯಿಂಟ್ಸ್‌ನೊಂದಿಗೆ + 0.942 ನೆಟ್ ರನ್‌ರೇಟ್ ಮೂಲಕ ಆರನೇ ಸ್ಥಾನದಲ್ಲಿದೆ.

IPL 2022: ದಿಕ್ಕೆಟ್ಟ ಮುಂಬೈ ಇಂಡಿಯನ್ಸ್‌ಗೆ ಬಲ ತುಂಬಲಿದ್ದಾನೆ ಈ ಅನುಭವಿ ಬೌಲರ್

ಪವರ್‌ಪ್ಲೇ ಓವರ್‌ಗಳಲ್ಲಿ ಅತಿ ಹೆಚ್ಚು ರನ್‌: ಡೆಲ್ಲಿ ನಂಬರ್ 1

ಪವರ್‌ಪ್ಲೇ ಓವರ್‌ಗಳಲ್ಲಿ ಅತಿ ಹೆಚ್ಚು ರನ್‌: ಡೆಲ್ಲಿ ನಂಬರ್ 1

ಇವತ್ತಿನ ಪಂದ್ಯದ ಹೈಲೈಟ್ಸ್ ಅಂದ್ರೆ ಅದು ಡೆಲ್ಲಿ ಕ್ಯಾಪಿಟಲ್ಸ್‌ನ ಪವರ್‌ಪ್ಲೇ ಓವರ್ಸ್‌. ಎದುರಾಳಿ ಪಂಜಾಬ್ ಬೌಲರ್‌ಗಳಿಗೆ ಸ್ವಲ್ಪವೂ ಕರುಣೆ ತೋರದ ಪೃಥ್ವಿ ಶಾ ಹಾಗೂ ಡೇವಿಡ್‌ ವಾರ್ನರ್ ಸಿಡಿಲಬ್ಬರದ ಆಟವಾಡಿದ್ರು. ಇದಕ್ಕೆ ಸಾಕ್ಷಿಯೆಂಬಂತೆ ಡೆಲ್ಲಿ ಕ್ಯಾಪಿಟಲ್ಸ್ ಈ ಸೀಸನ್‌ನಲ್ಲಿ ಪವರ್‌ ಪ್ಲೇ ಓವರ್‌ಗಳಲ್ಲಿ ಅತಿ ಹೆಚ್ಚು ರನ್‌ಗಳಿಸಿದ ತಂಡವಾಗಿ ಹೊರಹೊಮ್ಮಿದೆ.

ಒಂದು ಕಡೆ ಸೀಸನ್‌ನ ಕನಿಷ್ಠ ಸ್ಕೋರ್ ದಾಖಲಾದ್ರೆ, ಮತ್ತೊಂದೆಡೆ ಡೆಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆ ಬರೆದಿದೆ. ವಿಕೆಟ್ ನಷ್ಟವಿಲ್ಲದೆ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 6 ಓವರ್‌ಗೆ ಗಳಿಸಿದ್ದು 81 ರನ್‌ಗಳು. ಇದು ಕೇವಲ ಸೀಸನ್‌ ಅಷ್ಟೇ ಅಲ್ಲದೆ, ಇಡೀ ಐಪಿಎಲ್ ಇತಿಹಾಸದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್‌ನ ಗರಿಷ್ಠ ಪವರ್‌ಪ್ಲೇ ರನ್ ಆಗಿದೆ. ಇದಕ್ಕೂ ಮೊದಲು 2008ರ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ ವಿರುದ್ಧ ವಿಕೆಟ್ ನಷ್ಟವಿಲ್ಲದೆ 71ರನ್‌ ಸಿಡಿಸಿದ್ದೇ ದಾಖಲೆಯಾಗಿತ್ತು.

ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ: ವಾರ್ನಿಂಗ್ ಕೊಟ್ಟ ರವಿಶಾಸ್ತ್ರಿ

ಪಂಜಾಬ್ ವಿರುದ್ಧ 1000 ರನ್ ಸರದಾರ ಡೇವಿಡ್ ವಾರ್ನರ್

ಪಂಜಾಬ್ ವಿರುದ್ಧ 1000 ರನ್ ಸರದಾರ ಡೇವಿಡ್ ವಾರ್ನರ್

ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 1000ರನ್ ಕಲೆಹಾಕಿದ ಎರಡನೇ ಆಟಗಾರನಾಗಿ ಡೇವಿಡ್ ವಾರ್ನರ್ ಹೊರಹೊಮ್ಮಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ವಾರ್ನರ್ 1005 ರನ್ ಕಲೆಹಾಕಿದ್ದಾರೆ. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಕೆಕೆಆರ್ ವಿರುದ್ಧ 1018 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ.

ಅದೇ ಕೆಕೆಆರ್ ವಿರುದ್ಧವೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಡೇವಿಡ್ ವಾರ್ನರ್ 976 ರನ್ ಕಲೆಹಾಕಿದ್ದಾರೆ. ಸಿಎಸ್‌ಕೆ ವಿರುದ್ಧ ಕೊಹ್ಲಿ 949 ರನ್ ದಾಖಲೆ ಹೊಂದಿದ್ದಾರೆ.

Story first published: Wednesday, April 20, 2022, 23:52 [IST]
Other articles published on Apr 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+