Rashid Khan : ಅಫ್ಘಾನಿಸ್ತಾನದ ಸೂಪರ್‌ಸ್ಟಾರ್ ರಶೀದ್ ಖಾನ್ ಬಹುವರ್ಷದ ಕನಸು ನನಸಾಯ್ತು!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನ ಮುನ್ನಡೆಸಿ ಯಶಸ್ವಿಯಾದ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಕ್ರಿಕೆಟ್ ದಿಗ್ಗಜರಿಂದಲೇ ಬೇಷ್ ಎನಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಆಗುವವರೆಗೂ ಹಾರ್ದಿಕ್ ಪಾಂಡ್ಯ ಆಡುತ್ತಿಲ್ಲ ಎಂದು ತಿಳಿದಿರಲಿಲ್ಲ. ಆದ್ರೆ ಟಾಸ್ ವೇಳೆ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಕಣಕ್ಕಿಳಿದ ರಶೀದ್ ಖಾನ್ ಹಾರ್ದಿಕ್ ಪಾಂಡ್ಯ ತೊಡೆಸಂದು ನೋವಿನಿಂದ ಬಳಲುತ್ತಿದ್ದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ ಎಂದು ಹೇಳಿಕೆಯನ್ನು ನೀಡಿದರು. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಐಪಿಎಲ್‌ನಲ್ಲಿ ರಶೀದ್ ಖಾನ್ ಐಪಿಎಲ್ ತಂಡವನ್ನ ಮುನ್ನಡೆಸಿದ್ದಾರೆ.

ಲೆಕ್ಕಕ್ಕೇ ಇರಲಿಲ್ಲ ಅಫ್ಘಾನಿಸ್ತಾನ ಕ್ರಿಕೆಟ್ ತಂಡ
ಹತ್ತು ವರ್ಷಗಳ ಹಿಂದೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ವಿಶ್ವ ಕ್ರಿಕೆಟ್‌ನಲ್ಲಿ ಲೆಕ್ಕಕ್ಕೇ ಇರದಂತಿತ್ತು. ಆದ್ರೆ ಈ ರಾಷ್ಟ್ರದಿಂದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮುತ್ತಿರುವ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಮಿಂಚುತ್ತಿದ್ದಾರೆ. ಅದ್ರಲ್ಲೂ ರಶೀದ್ ಖಾನ್ ವಿಶ್ವ ಕ್ರಿಕೆಟ್‌ನಲ್ಲಿ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
RR vs KKR: ನಿಮ್ಮ ಡ್ರೀಮ್ ಟೀಮ್‌ನಲ್ಲಿ ಈ ಪ್ಲೇಯರ್ಸ್ ಇದ್ದಾರೆಯೇ? ಮಿಸ್ ಮಾಡದಿರಿ

ಗುಜರಾತ್ ಟೈಟನ್ಸ್ ತಂಡದ ಪರ ರಶೀದ್ ಮಿಂಚು
ಗುಜರಾತ್ ಟೈಟನ್ಸ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ ರಶೀದ್ ಖಾನ್ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಮಿಂಚಿದ್ರು. 4 ಓವರ್ ಬೌಲಿಂಗ್ ಮಾಡಿ ವಿಕೆಟ್ ಪಡೆಯದೇ ಇದ್ದರೂ, 29 ರನ್‌ಗಳನ್ನಷ್ಟೇ ಎದುರಾಳಿಗೆ ಬಿಟ್ಟುಕೊಟ್ಟರು. ಇದಷ್ಟೇ ಅಲ್ಲದೆ ಸಿಎಸ್‌ಕೆ ನೀಡಿದ 170 ರನ್ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟನ್ಸ್ ಪರ ಡೇವಿಡ್ ಮಿಲ್ಲರ್(94) ಅಮೋಘ ಇನ್ನಿಂಗ್ಸ್‌ಗೆ ಜೊತೆಯಾಗಿ ನಿಂತ ಅಫ್ಘಾನಿಸ್ತಾನ ಸ್ಪಿನ್ನರ್ 21 ಎಸೆತಗಳಲ್ಲಿ 40 ರನ್ ಸಿಡಿಸಿದ್ರು. ಈತನ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು.

ತಂಡವನ್ನ ಮುನ್ನಡೆಸುವ ಕನಸು ನನಸಾಯ್ತು ಎಂದ ರಶೀದ್ ಖಾನ್
ಪಂದ್ಯ ಜಯಿಸಿದ ಬಳಿಕ ಮಾತನಾಡಿದ ಗುಜರಾತ್ ಟೈಟನ್ಸ್ ತಾತ್ಕಾಲಿಕ ನಾಯಕ ರಶೀದ್ ಖಾನ್ ಐಪಿಎಲ್‌ನಲ್ಲಿ ''ತಂಡವನ್ನು ಮುನ್ನಡೆಸುವ ಕನಸು'' ನನಸಾಯ್ತು ಎಂದಿದ್ದಾರೆ.
''ಇದು ಐಪಿಎಲ್‌ನಲ್ಲಿ ಅದ್ಭುತ ಫೀಲಿಂಗ್ ಆಗಿದೆ. ತಂಡವನ್ನು ಮುನ್ನಡೆಸುವ ಕನಸು ನನಸಾಗಿದೆ ಮತ್ತು ತಂಡಕ್ಕೆ ಕೊಡುಗೆ ನೀಡುವುದು ವಿಶೇಷವಾಗಿದೆ. ನಾವು ಆಟವನ್ನು ಆಳವಾಗಿ ತೆಗೆದುಕೊಳ್ಳಲು ಬಯಸಿದ್ದೆವು. ನಾವು ಕೊನೆಯ 7 ಓವರ್‌ಗಳಲ್ಲಿ 90 ರನ್‌ಗಳನ್ನು ಬೆನ್ನಟ್ಟುವ ಸಾಮರ್ಥ್ಯವನ್ನು ಹೊಂದಿದ್ದು, ಅದು ನಮ್ಮ ಯೋಜನೆಯಾಗಿತ್ತು. ನಾವು ಆಟವನ್ನು ಸಾಧ್ಯವಾದಷ್ಟು ಆಳವಾಗಿ ತೆಗೆದುಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾದೆವು'' ಎಂದು ರಶೀದ್ ಖಾನ್ ಹೇಳಿದ್ದಾರೆ.
''ನಾನು ಮೊದಲ 5 ಪಂದ್ಯಗಳಲ್ಲಿ ಬ್ಯಾಟ್ ಮಾಡಿಲ್ಲ, ಅದು ಚರ್ಚೆಯಾಗಿತ್ತು, ಆದ್ದರಿಂದ ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಇಬ್ಬರು ಬ್ಯಾಟರ್‌ಗಳು ದೊಡ್ಡ ಸ್ಕೋರ್ ಮಾಡಬೇಕೆಂದು ನಾವು ಬಯಸಿದ್ದೇವೆ, ನಾನು ಮಿಲ್ಲರ್‌ನೊಂದಿಗೆ ಚರ್ಚೆ ನಡೆಸಿದೆ ಮತ್ತು ನಾವು ಚೆಂಡನ್ನು ಬಲವಾಗಿ ಹೊಡೆಯಲು ಪ್ರಯತ್ನಿಸಿದೆವು'' ಎಂದು ಮಾತು ಮುಂದುವರಿಸಿದ ರಶೀದ್ ಪಂದ್ಯದ ಗತಿಯನ್ನ ವಿವರಿಸಿದ್ದಾರೆ.

ಐಪಿಎಲ್‌ನಲ್ಲಿ ತಂಡವನ್ನ ಮುನ್ನಡೆಸಿದ ಅಫ್ಘಾನಿಸ್ತಾನದ ಮೊದಲ ಪ್ಲೇಯರ್
ಐಪಿಎಲ್‌ನ 14 ಆವೃತ್ತಿಯ ಇತಿಹಾಸದಲ್ಲಿ ನಾವು ನೋಡಿದ್ರೆ, ಅಫ್ಘಾನಿಸ್ತಾನ ಪ್ಲೇಯರ್ಸ್ ತಂಡದಲ್ಲಿ ಒಬ್ಬರು ಇದ್ರೆ ಹೆಚ್ಚು. ಹೀಗಿರುವಾಗ ಕ್ರಿಕೆಟ್ ಲೋಕದ ಒಂದೊಂದೆ ಮೆಟ್ಟಿಲನ್ನ ಏರುತ್ತಿರುವ ಅಫ್ಘಾನಿಸ್ತಾನ ಪರ ಇದುವರೆಗೂ ಯಾವೊಬ್ಬ ಪ್ಲೇಯರ್ ಕೂಡ ಐಪಿಎಲ್‌ನಂತಹ ಮಹಾನ್ ಟಿ20 ಟೂರ್ನಿಯಲ್ಲಿ ತಂಡವನ್ನ ಮುನ್ನಡೆಸಿದ ಒಂದು ಉದಾಹರಣೆ ಇರಲಿಲ್ಲ. ಆದ್ರೆ ರಶೀದ್ ಖಾನ್ ಮೊಟ್ಟ ಮೊದಲ ಬಾರಿಗೆ ಐಪಿಎಲ್ ತಂಡವನ್ನ ಮುನ್ನಡೆಸಿದ್ರು. ಗುಜರಾತ್ ಟೈಟನ್ಸ್ ತಂಡದ ಪರ ಐತಿಹಾಸಿಕ ಸಾಧನೆ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications