ಧೋನಿ ವಿಶೇಷ ದಾಖಲೆ: ನಿರ್ದಿಷ್ಟ ಬೌಲರ್ ಎದುರು ವೇಗವಾಗಿ 100 ರನ್ ಸಿಡಿಸಿದ ಬ್ಯಾಟ್ಸ್‌ಮನ್

ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ತಾನೊಬ್ಬ ಗ್ರೇಟ್ ಫಿನಿಷರ್ ಅನ್ನೋದನ್ನ ಕಳೆದ ರಾತ್ರಿ (ಏ.21) ಸಾಬೀತು ಪಡಿಸಿದ್ರು. ಮುಂಬೈ ಇಂಡಿಯನ್ಸ್ ನೀಡಿದ್ದ 156 ರನ್ ಟಾರ್ಗೆಟ್ ಬೆನ್ನತ್ತಿದ ತಲೈವಾ ಟೀಂ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಕಂಡಿತು.
ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಅಭಿಮಾನಿಗಳಿಗೆ ರೋಚಕ ಔತಣ ಬಡಿಸಿದ್ದಂತು ಸುಳ್ಳಲ್ಲ. ಅದ್ರಲ್ಲೂ ಕೊನೆಯ ಓವರ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಕೊನೆಯ ನಾಲ್ಕು ಎಸೆತಗಳಲ್ಲಿ 16 ರನ್‌ಗಳ ಅವಶ್ಯಕತೆಯಿದ್ದಾಗ, ಧೋನಿ ಅಬ್ಬರದ ಆಟವಾಡಿ ಸಿಎಸ್‌ಕೆಗೆ ಗೆಲುವಿನ ದಡ ತಲುಪಿಸಿದ್ರು.
6, 4, 2, 4 ರನ್ ಬಾರಿಸಿ ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆಗೆ ಗೆಲುವು ದಕ್ಕಿಸಿಕೊಟ್ಟಿದ್ದನ್ನ ಕ್ರಿಕೆಟ್ ಲೋಕ ಕಣ್ತುಂಬಿಕೊಂಡಿದೆ. ಜಯದೇವ್ ಉನಾದ್ಕಟ್ ಬೌಲಿಂಗ್‌ನಲ್ಲಿ ಬೌಂಡರಿ-ಸಿಕ್ಸರ್ ಮೂಲಕ ಚೆಂಡನ್ನ ಬೌಂಡರಿಗಟ್ಟಿದ ಧೋನಿ ಕೊನೆಯ ಎಸೆತದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದನ್ನ ಮರೆಯಲು ಸಾಧ್ಯವಿಲ್ಲ.
ಐಪಿಎಲ್‌ನಲ್ಲಿ ಅಂತಿಮ ಓವರ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ದಾಖಲೆ ಹೊಂದಿರುವ ಧೋನಿ ಮತ್ತೊಂದು ವಿಶೇಷ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ನಿರ್ದಿಷ್ಟ ಬೌಲರ್ ಎದುರು ವೇಗವಾಗಿ 100 ರನ್ ಸಿಡಿಸಿದ ಬೌಲರ್
ಮಹೇಂದ್ರ ಸಿಂಗ್ ಧೋನಿ ಓರ್ವ ನಿರ್ದಿಷ್ಟ ಬೌಲರ್ ಎದುರು ವೇಗವಾಗಿ ಐಪಿಎಲ್‌ನಲ್ಲಿ 100 ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ. ಜಯದೇವ್ ಉನಾದ್ಕಟ್ ಎದುರು ಕೇವಲ 42 ಎಸೆತಗಳಲ್ಲಿ 100 ರನ್ ಸಿಡಿಸಿದ್ದಾರೆ. ನಿನ್ನೆ ಮುಂಬೈ ಪರ ಆಡುವ ಉನಾದ್ಕಟ್ ಕೊನೆಯ ಓವರ್‌ನಲ್ಲಿ 16 ರನ್ ಸಿಡಿಸಿದ್ದಾರೆ.

ರೈನಾ ಹೆಸರಿನಲ್ಲಿತ್ತು ವೇಗದ 100 IPL ರನ್
ಸಿಎಸ್‌ಕೆಯ ಮಾಜಿ ಬ್ಯಾಟ್ಸ್‌ಮನ್ ಸುರೈಶ್ ರೈನಾ ಏಕೈಕ ಬೌಲರ್ ಎದುರು ವೇಗವಾಗಿ 100 ರನ್ ಕಲೆಹಾಕಿದ ಸಾಧನೆ ಹೊಂದಿದ್ದರು. ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ ಅಬ್ಬರಿಸುತ್ತಿದ್ದ ರೈನಾ 47 ಎಸೆತಗಳಲ್ಲಿ 100 ರನ್ ಕಲೆಹಾಕಿದ್ದ ಸಾಧನೆ ಮಾಡಿದ್ದರು. ಆದ್ರೀಗ ಮಹೇಂದ್ರ ಸಿಂಗ್ ಧೋನಿ ರೈನಾ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಸಿಂಹ ಎಂದಿಗೂ ಬೇಟೆಯಾಡೋದನ್ನ ಮರೆಯೋದಿಲ್ಲ: 20ನೇ ಓವರ್‌ನಲ್ಲಿ ಧೋನಿಗಿಲ್ಲ ಸರಿಸಾಟಿ

ರೈನಾ ಜೊತೆಗೆ ಎಬಿಡಿ ಹೆಸರಿನಲ್ಲಿದೆ ಜಂಟಿ ದಾಖಲೆ
ಸುರೇಶ್ ರೈನಾ ಇದುವರೆಗೂ ನಿರ್ದಿಷ್ಟ ಬೌಲರ್ ಎದುರು ವೇಗವಾಗಿ 100 ರನ್ ಹಾಕಿದ್ದ ಸಾಧನೆ ಹೊಂದಿದ್ದರು. ಅದೇ ರೀತಿಯಲ್ಲಿ ಎಬಿ ಡಿವಿಲಿಯರ್ಸ್ ಕೂಡ ಅದೇ ಸಂದೀಪ್ ಶರ್ಮಾ ಎದುರು 47 ಎಸೆತಗಳಲ್ಲಿ 100 ರನ್ ಕಲೆಹಾಕುವ ಮೂಲಕ ರೈನಾ ಜೊತೆಗೆ ರೆಕಾರ್ಡ್ ಹಂಚಿಕೊಂಡಿದ್ದಾರೆ.
ರೈನಾ, ಎಬಿಡಿ ಬಳಿಕ ಕಿರಾನ್ ಪೊಲಾರ್ಡ್ ಕೂಡ ಈ ದಾಖಲೆಯನ್ನ ಹೊಂದಿದ್ದು, ಸದ್ಯ ಸಿಎಸ್‌ಕೆ ಕ್ಯಾಪ್ಟನ್ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ 47 ಎಸೆಗಳಿಗೆ 100 ರನ್ ಕಲೆಹಾಕಿದ್ದಾರೆ. ಈ ನಾಲ್ವರು ಆಟಗಾರರು ಐಪಿಎಲ್ ಇತಿಹಾಸದಲ್ಲಿ ಈ ವಿಶೇಷ ದಾಖಲೆಯನ್ನ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications