ಸಿಂಹ ಎಂದಿಗೂ ಬೇಟೆಯಾಡೋದನ್ನ ಮರೆಯೋದಿಲ್ಲ: 20ನೇ ಓವರ್‌ನಲ್ಲಿ ಧೋನಿಗಿಲ್ಲ ಸರಿಸಾಟಿ

ಮಹೇಂದ್ರ ಸಿಂಗ್ ಧೋನಿ ಇಡೀ ವಿಶ್ವ ಕ್ರಿಕೆಟ್‌ಗೆ ತಾನೆಷ್ಟರ ಮಟ್ಟಿಗೆ ಗ್ರೇಟ್ ಫಿನಿಷರ್ ಎಂಬುದನ್ನ ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಕೊನೆಯ ಓವರ್‌ನಲ್ಲಿ, ಅದ್ರಲ್ಲೂ ನಾಲ್ಕು ಎಸೆತಗಳಲ್ಲಿ 16 ರನ್‌ಗಳನ್ನ ಸಿಡಿಸುವ ಮೂಲಕ ಧೋನಿ ಸಿಎಸ್‌ಕೆಗೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ.
ಧೋನಿ ಕ್ರೀಸ್‌ಗಿಳಿಯುವ ಮುನ್ನ ಗೆಲುವು ಯಾರದ್ದೂ ಎಂಬುದು ಪ್ರಶ್ನೆಯಾಗಿತ್ತು. ಆದ್ರೆ ಮಾಹಿ ಕ್ರೀಸ್‌ನಲ್ಲಿ ಇರುವವರೆಗೂ ಗೆಲುವು ಸಿಎಸ್‌ಕೆಯದ್ದೇ ಎಂದು ಅಭಿಮಾನಿಗಳು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದರು. ಧೋನಿ ಮೇಲಿಟ್ಟಿರುವ ಅಭಿಮಾನಿಗಳ ನಂಬಿಕೆ ಮತ್ತು ತಂಡದ ವಿಶ್ವಾಸ ಮತ್ತೊಮ್ಮೆ ನಿಜವಾಗಿದೆ. ಚೆನ್ನೈಗೆ ಅಮೋಘ ಗೆಲುವನ್ನ ಧೋನಿ ತಂದುಕೊಟ್ಟಿದ್ದಾರೆ.

ಕೊನೆಯ ಓವರ್‌ನಲ್ಲಿ ಧೋನಿಗೆ, ಧೋನಿಯೇ ಸರಿಸಾಟಿ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿ ಮ್ಯಾಚ್ ಫಿನಿಷ್ ಮಾಡಿದ್ದಷ್ಟು ಮತ್ತೊಬ್ಬ ಬ್ಯಾಟ್ಸ್‌ಮಮನ್ ಅನ್ನು ನೋಡಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆ. ಇದ್ರಿಂದ ಐಪಿಎಲ್ ಕೂಡ ಹೊರತಾಗಿಲ್ಲ.
ಇಂಡಿಯನ್ ಪ್ರೀಮಿಯಲ್ ಲೀಗ್‌ನಲ್ಲಿ 20ನೇ ಓವರ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಆಟಗಾರ ಅಂದ್ರೆ ಅದು ಧೋನಿ ಒಬ್ಬರೆ. 246.36 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಧೋನಿ 51 ಸಿಕ್ಸರ್, 48 ಬೌಂಡರಿ ಸಹಿತ 643 ರನ್ ಸಿಡಿಸಿದ್ದಾರೆ. ಇಷ್ಟು ರನ್ ಕಲೆಹಾಕಲು ಧೋನಿ ಎದುರಿಸಿದ್ದು ಕೇವಲ 261 ಎಸೆತಗಳು.
ಚೆನ್ನೈ ಆಟಗಾರ ಔಟ್ ಇದ್ದರೂ ನಾಟ್ಔಟ್ ಕೊಟ್ಟ ಅಂಪೈರ್; ಮುಂಬೈ ಸೋಲಿಗೆ ಇದೇ ಪ್ರಮುಖ ಕಾರಣವಾಯ್ತಾ?

ಮುಂಬೈ ವಿರುದ್ಧ ಕೊನೆಯ 4 ಎಸೆತಗಳಲ್ಲಿ 16 ರನ್
ಮುಂಬೈ ಇಂಡಿಯನ್ಸ್ ವಿರುದ್ಧದ ಕಳೆದ ಪಂದ್ಯದಲ್ಲೂ ಸಹ ಧೋನಿ ಕೊನೆಯ ನಾಲ್ಕು ಎಸೆತಗಳಲ್ಲಿ 16 ರನ್ ಸಿಡಿಸಿದ್ರು. ಜಯದೇವ್ ಉನಾದ್ಕಟ್ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಪ್ರಿಟೋರಿಯಸ್ ಔಟಾದ ಬಳಿಕ, ಡ್ವೇನ್ ಬ್ರಾವೋ ಎರಡನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಆ ನಂತರ ಅಬ್ಬರಿಸಿದ ಮಾಹಿ ಮೂರನೇ ಎಸೆತದಲ್ಲಿ ಸಿಕ್ಸರ್, ನಾಲ್ಕನೇ ಎಸೆತದಲ್ಲಿ ಬೌಂಡರಿ, ಐದನೇ ಎಸೆತದಲ್ಲಿ ಎರಡು ರನ್ ಗಳಿಸಿದ್ರು. ಕೊನೆಯ ಎಸೆತಕ್ಕೆ ಬೌಂಡರಿ ಬೇಕಿತ್ತು. ಕ್ರೀಸ್‌ನಲ್ಲಿರೋದು ಮಹೇಂದ್ರ ಸಿಂಗ್ ಧೋನಿ ಅಂದ್ಮೇಲೆ ಬೌಲರ್ ಮೇಲೆ ಅತಿ ಹೆಚ್ಚು ಒತ್ತಡವಿರುತ್ತದೆ ಅನ್ನೋದು ಮತ್ತೊಮ್ಮೆ ಸಾಬೀತಾಯಿತು.
ಲೋ ಫುಲ್‌ಟಾಸ ಎಸೆತವನ್ನ ಫೈನ್ ಲೆಗ್‌ನತ್ತ ಬೌಂಡರಿ ದಾಖಲಿಸಿದ ಧೋನಿ ಅತ್ಯಂತ ತಾಳ್ಮೆಯಿಂದ ತನ್ನ ಬ್ಯಾಟ್ ಅನ್ನು ಮೇಲಕ್ಕೆತ್ತಿ ಗೆಲುವನ್ನ ಸಂಭ್ರಮಿಸಿದರು.

ಕೊನೆಯ ಎಸೆತದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದಿರುವ CSK
ಐಪಿಎಲ್ ಇತಿಹಾಸದಲ್ಲಿ ಚೇಸಿಂಗ್‌ನಲ್ಲಿ ಕೊನೆಯ ಎಸೆತದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದಿರುವ ದಾಖಲೆಯು ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಎಸೆತದಲ್ಲಿ 8 ಬಾರಿ ಪಂದ್ಯವನ್ನ ಗೆದ್ದು ಬೀಗಿದೆ. ಉಳಿದಂತೆ ಮುಂಬೈ ಇಂಡಿಯನ್ಸ್ 6 ಬಾರಿ, ರಾಜಸ್ತಾನ್ ರಾಯಲ್ಸ್ 4 ಬಾರಿ, ಪಂಜಾಬ್ ಮತ್ತು ಆರ್‌ಸಿಬಿ 3 ಬಾರಿ ಪಂದ್ಯ ಜಯಿಸಿದೆ.
ಸತತ 7 ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶಿಸಲು ಉಳಿದಿರೋದು ಇದೊಂದೇ ಮಾರ್ಗ!

ಸತತ 7 ಪಂದ್ಯ ಸೋತ ಮೊದಲ ತಂಡ ಮುಂಬೈ ಇಂಡಿಯನ್ಸ್
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್ ಐಪಿಎಲ್ 2022ರ ಸೀಸನ್‌ನಲ್ಲಿ ಇಷ್ಟರ ಮಟ್ಟಿಗೆ ಕಳಪೆ ಪ್ರದರ್ಶನ ನೀಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆರಂಭಿಕ ಏಳು ಪಂದ್ಯಗಳನ್ನ ಸೋಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ ತಂಡ ಏಳು ಪಂದ್ಯ ಸೋತ ಹೀನಾಯ ದಾಖಲೆ ತನ್ನದಾಗಿಸಿಕೊಂಡಿದೆ.
ಈ ಮೊದಲು 2013ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆರು ಪಂದ್ಯಗಳಲ್ಲಿ ಸೋಲನ್ನ ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications