
ಹಲವು ಐತಿಹಾಸಿಕ ಪಂದ್ಯ ಗೆಲುವಿನಲ್ಲಿ ಒಟ್ಟಾಗಿದ್ದ ಧೋನಿ-ಗಂಭೀರ್
ಗೌತಮ್ ಗಂಭೀರ್ ಮತ್ತು ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಹಲವಾರು ಐತಿಹಾಸಿಕ ಪಂದ್ಯಗಳ ಗೆಲುವಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಹಲವಾರು ವರ್ಷಗಳ ಬಳಿಕ ಧೋನಿ ಮತ್ತು ಗಂಭೀರ್ ಮೈದಾನದಲ್ಲಿ ಎದುರು ಬದುರಾಗಿದ್ದಾರೆ.
ಗಂಭೀರ್ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಲಿಷ್ಠ ಸವಾಲೊಡ್ಡುವಲ್ಲಿ ಕೆಕೆಆರ್ ಯಶಸ್ವಿಯಾಗಿತ್ತು. ಧೋನಿ ಇನ್ನೂ ಕೂಡ ಸಿಎಸ್‌ಕೆ ತಂಡದಲ್ಲಿದ್ದು ಅವರ ಅಪಾರ ಅನುಭವ ಮತ್ತು ಸಾಮರ್ಥ್ಯವನ್ನ ಪ್ರದರ್ಶಿಸಿದೆ.
ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ದಾಖಲೆ ಮುರಿದ ಪಾಕಿಸ್ತಾನ: ಆಸ್ಟ್ರೇಲಿಯಾ ವಿರುದ್ಧ ಬೃಹತ್ ಜಯ

ಧೋನಿಯ ಹ್ಯಾಟ್ರಿಕ್ ಕಪ್ ಗೆಲ್ಲುವ ಕನಸಿಗೆ ತಡೆಯೊಡ್ಡಿದ್ದೇ ಗಂಭೀರ್
2010 ಮತ್ತು 2011ರ ಐಪಿಎಲ್ ಸೀಸನ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. 2012ರಲ್ಲಿ ಸಿಎಸ್‌ಕೆ ಹ್ಯಾಟ್ರಿಕ್ ಟ್ರೋಫಿ ಗೆಲ್ಲಬೇಕೆಂದು ಪಣತೊಟ್ಟಿತು. ಆದ್ರೆ ಈ ಸೀಸನ್‌ನಲ್ಲಿ ಗೌತಮ್ ಗಂಭೀರ್ ನಾಯಕತ್ವದ ಕೆಕೆಆರ್ ಟ್ರೋಫಿ ಗೆಲ್ಲುವ ಮೂಲಕ ಮಾಹಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ರು.
ಐಪಿಎಲ್‌ನಲ್ಲಿ ಮುಖಾಮುಖಿಯಾಗಿದ್ದಷ್ಟೇ ಅಲ್ಲದೆ 2007 ಮತ್ತು 2011ರ ವಿಶ್ವಕಪ್‌ನಲ್ಲಿ ಭಾರತ ವಿರ್ಶವಕಪ್ ಗೆಲ್ಲಲು ಗೌತಮ್ ಗಂಭೀರ್ ಉತ್ತಮ ಪ್ರದರ್ಶನ ಪ್ರಮುಖ ಪಾತ್ರವಹಿಸಿತು.
Ayush Badoni : ರಣಜಿ ತಂಡಕ್ಕೂ ಬೇಡವಾಗಿದ್ದ ಬದೋನಿ ಈಗ ಐಪಿಎಲ್ ಹೀರೋ: ಮೆಚ್ಚುಗೆಯ ಸುರಿಮಳೆಗೈದ ನಾಯಕ ರಾಹುಲ್
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ ಗೌತಿ
ಇನ್‌ಸ್ಟಾಗ್ರಾಮ್‌ನಲ್ಲಿ ಧೋನಿ ಜೊತೆಗಿನ ಫೋಟೋವನ್ನ ಶೇರ್ ಮಾಡಿರುವ ಗೌತಮ್ ಗಂಭೀರ್ ''ಇಟ್ ವಾಸ್ ನೈಸ್ ಕ್ಯಾಚಿಂಗ್ ಅಪ್ ಸ್ಕಿಪ್ಪರ್'' ಎಂದು ಶೀರ್ಷಿಕೆ ನೀಡಿದ್ದಾರೆ.
ಇನ್ನು ಈ ಫೋಟೊಗಳಿಗೆ ಕಮೆಂಟ್ ಮಾಡಿರುವ ಅಭಿಮಾನಿಗಳು 2011ರ ವಿಶ್ವಕಪ್ ಗೆಲುವಿನ 11ನೇ ವಾರ್ಷಿಕೋತ್ಸವದ ಒಂದು ದಿನದ ಮುಂಚಿತವಾಗಿ ಇಬ್ಬರು ಲೆಜೆಂಡ್‌ಗಳು ಒಂದಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧ 275ರನ್‌ಗಳ ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾ ಪರ ಧೋನಿ ಮತ್ತು ಗಂಭೀರ್ ಜೊತೆಯಾಟ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇಬ್ಬರು ಆಟಗಾರರು ಶತಕ ಸಿಡಿಸದಿದ್ದರೂ ಸಹ ಕ್ರಿಕೆಟ್ ಇತಿಹಾಸದಲ್ಲಿ ಇವರಿಬ್ಬರ ಇನ್ನಿಂಗ್ಸ್‌ಗಳು ಮಾತ್ರ ಶಾಶ್ವತವಾಗಿ ಉಳಿದಿದೆ.
Gautam Gambhir & MS Dhoni 😭❤️
— Arth Vaishnav EF (ArthVaishnav) March 31, 2022
That's the tweet#MSDhoni𓃵 #CSKvsLSG pic.twitter.com/KcyNHoS8Pd
ಇತ್ತೀಚೆಗಷ್ಟೇ ಧೋನಿ ಕುರಿತಾಗಿ ಹೇಳಿಕೆ ನೀಡಿದ್ದ ಗಂಭೀರ್
ಮಹೇಂದ್ರ ಸಿಂಗ್ ಧೋನಿ ಅಂದ್ರೆ ಸಾಕು ಅತ್ಯಂತ ತೀಕ್ಷ್ಣವಾಗಿ, ಹರಿತವಾಗಿ ಕಾಮೆಂಟ್‌ಗಳನ್ನ ನೀಡುತ್ತಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ದಿಢೀರ್ ಯೂ ಟರ್ನ್ ಹೊಡೆದಿದ್ದರು.
ಎಂ.ಎಸ್ ಧೋನಿ ಕಂಡ್ರೆ, ಗೌತಮ್ ಗಂಭೀರ್‌ಗೆ ಏಕೆ ಆಗುವುದಿಲ್ಲ ಎಂದು ಜನರು ಭಾವಿಸುತ್ತಾರೆ ಎಂದು ಕ್ರೀಡಾ ಪತ್ರಕರ್ತ ಜತಿನ್ ಸಪ್ರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗೌತಮ್ ಗಂಭೀರ್ ಇದೊಂದು ಸುಳ್ಳು ಸುದ್ದಿ, ತನಗೆ ಧೋನಿ ಕುರಿತಾಗಿ ಸಾಕಷ್ಟು ಪರಸ್ಪರ ಗೌರವವಿದೆ. ಧೋನಿ ಭಾರತ ಕ್ರಿಕೆಟ್‌ಗೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎಂದು ತಿಳಿದಿದೆ ಎಂದಿದ್ದಾರೆ.

138 ಕೋಟಿ ಜನರ ಮುಂದೆ ಹೇಳಬಲ್ಲೇ, ಧೋನಿ ಮೇಲೆ ನನಗೆ ದ್ವೇಷವಿಲ್ಲ!
"ಇದು ಅಸಂಬದ್ಧ, ನೋಡಿ ನನಗೆ ಅವರ ಬಗ್ಗೆ ತುಂಬಾ ಪರಸ್ಪರ ಗೌರವವಿದೆ ಮತ್ತು ಅದು ಯಾವಾಗಲೂ ಇರುತ್ತದೆ . ನಾನು ಈಗಾಗಲೇ ಲೈವ್‌ನಲ್ಲಿ ಹೇಳಿದ್ದೇನೆ, ಮತ್ತು ನಿಮ್ಮ ಚಾನೆಲ್‌ನಲ್ಲೂ ಹೇಳಬಲ್ಲೇ, ನಾನು ಅದನ್ನು 138 ಕೋಟಿ ಜನರ ಮುಂದೆ ಎಲ್ಲಿ ಬೇಕಾದರೂ ಹೇಳಬಲ್ಲೆ, ಎಂದಾದರೂ ಅಗತ್ಯವಿದ್ದರೆ, ಅವರಿಗೆ ಎಂದಿಗೂ ಅಗತ್ಯಬರಲ್ಲ ಎಂದು ನಾನು ಭಾವಿಸುತ್ತೇನೆ, ಜೀವನದಲ್ಲಿ ಎಂದಾದರೂ ಅಗತ್ಯವಿದ್ದಲ್ಲಿ, ನಾನು ಅವರ ಮುಂದೆ ನಿಲ್ಲುವವರಲ್ಲಿ ಮೊದಲಿಗನಾಗುತ್ತೇನೆ. ಏಕೆಂದರೆ ಭಾರತೀಯ ಕ್ರಿಕೆಟ್‌ಗಾಗಿ ಅವರು ಏನು ಮಾಡಿದ್ದಾರೆ ಎಂದು ತಿಳಿದಿದೆ'' ಎಂದು ಗೌತಮ್ ಗಂಭೀರ್ ಹೇಳಿದ್ದರು.


Click it and Unblock the Notifications
