
ಆ್ರೋನ್ ಫಿಂಚ್ ಗೋಲ್ಡನ್ ಡಕೌಟ್
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನ ಆಸ್ಟ್ರೇಲಿಯಾಗೆ ಬ್ಯಾಟಿಂಗ್ ಆಹ್ವಾನಿಸಿತು. ಆ್ಯರೋನ್ ಫಿಂಚ್ ಮೊದಲ ಎಸೆತದಲ್ಲೇ ಗೋಲ್ಡನ್ ಡಕೌಟ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಆದ್ರೆ ಟ್ರಾವಿಸ್ ಹೆಡ್ 89 ರನ್, ಬೆನ್ ಮೆಕ್‌ಡರ್ಮೋಟ್ 104 ರನ್‌ಗಳ ಕೊಡುಗೆಯಿಂದ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿತು.
ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಜೊತೆಗೆ ಮಾರ್ನಸ್ ಲ್ಯಾಬುಸ್ಚಾಗ್ನೆ 49 ರನ್ ಹಾಗೂ ಕೆಳಕ್ರಮಾಂಕದಲ್ಲಿ ಸೇನ್ ಅಬೋಟ್ 16 ಎಸೆತಗಳಲ್ಲಿ 28 ರನ್ ಸಿಡಿಸುವ ಮೂಲಕ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 348 ರನ್ ಕಲೆಹಾಕಿತು. ಪಾಕ್ ಪರ ಶಾಹಿನ್ ಅಫ್ರಿದಿ ನಾಲ್ಕು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡ್ರು.
ಮುಂಬೈ ಇಂಡಿಯನ್ಸ್‌ಗೆ ಆನೆ ಬಲ: ಕ್ವಾರಂಟೈನ್ ಮುಗಿಸಿದ ಸೂರ್ಯಕುಮಾರ್ ಯಾದವ್

ಫಖಾರ್, ಇಮಾಮ್ ಶತಕದ ಜೊತೆಯಾಟದ ಆರಂಭ
ಈ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ ಅದ್ಭುತ ಆರಂಭ ಪಡೆಯಿತು. ಓಪನಿಂಗ್ ಶತಕದ ಜೊತೆಯಾಟವಾಡಿದ ಫಖಾರ್ ಜಮಾನ್ 67 ರನ್ ಸಿಡಿಸಿದ್ರೆ, ನಾಯಕ ಬಾಬರ್ ಅಜಮ್ ಮತ್ತು ಇಮಾಮ್ ಉಲ್ ಹಕ್ ಸೆಂಚುರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
CSK vs LSG: 211 ರನ್ ಚೇಸ್ ಮಾಡಿದ ಲಕ್ನೋ, CSKಗೆ ಮುಖಭಂಗ

ಶತಕ ಸಿಡಿಸಿದ ಬಾಬರ್, ಇಮಾಮ್ ಉಲಕ್ ಹಕ್
ಇಮಾಮ್ ಉಲ್ ಹಕ್ 97 ಎಸೆತಗಳಲ್ಲಿ 106 ರನ್ ಸಿಡಿಸಿದ್ರೆ, ಬಾಬರ್ ಅಜಮ್ 83 ಎಸೆತಗಳಲ್ಲಿ 114 ರನ್ ಸಿಡಿಸಿ ಮಿಂಚಿದ್ರು. ಇವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.
ಈ ಇಬ್ಬರ ವಿಕೆಟ್ ಪತನದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 23, ಕೌಶ್ದಿಲ್ ಅಜೇಯ 27, ಇಫ್ತಿಕರ್ ಅಹ್ಮದ್ ಅಜೇಯ 11 ರನ್‌ಗಳ ನೆರವಿನಿಂದ ಪಾಕಿಸ್ತಾನ ಇನ್ನೊಂದು ಓವರ್ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 352 ರನ್ ಕಲೆಹಾಕಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
2006ರಲ್ಲಿ ತನ್ನ ಬದುಕನ್ನೇ ಬದಲಾಯಿಸಿದ ಎಸೆತವನ್ನ ನೆನಪಿಸಿಕೊಂಡ ಡ್ವೇನ್ ಬ್ರಾವೋ

ಬಾಂಗ್ಲಾ ವಿರುದ್ಧ 327ರನ್ ಚೇಸ್ ಮಾಡಿದ್ದ ಪಾಕ್
ಪಾಕಿಸ್ತಾನ 2014ರಲ್ಲಿ ಬಾಂಗ್ಲಾದೇಶ ವಿರುದ್ಧ 327 ಟಾರ್ಗೆಟ್ ಚೇಸ್ ಮೂಲಕ ಯಶಸ್ವಿಯಾಗಿತ್ತು. ಇದರ ನಂತರದಲ್ಲಿ 2019ರಲ್ಲಿ ಇಂಗ್ಲೆಂಡ್ ವಿರುದ್ಧ 374 ರನ್ ಟಾರ್ಗೆಟ್ ಚೇಸ್ ಮಾಡುವ ವೇಳೆ 361 ರನ್ ಕಲೆಹಾಕಿದ್ದೇ ಪಾಕ್‌ನ ಗರಿಷ್ಠ ಏಕದಿನ ಸ್ಕೋರ್ ಆಗಿದೆ. ಆದ್ರೀಗ ಆಸೀಸ್ ವಿರುದ್ಧ 349 ರನ್‌ಗಳ ಗುರಿ ಯಶಸ್ವಿಯಾಗಿ ಚೇಸ್ ಮಾಡಿದೆ. ಈ ಮೂಲಕ ಸತತ 10 ಏಕದಿನ ಪಂದ್ಯಗಳ ಸೋಲಿನ ಬಳಿಕ ಪಾಕ್ ಕಾಂಗರೂಗಳ ವಿರುದ್ಧ ಏಕದಿನ ಪಂದ್ಯ ಗೆದ್ದಿದೆ.
ಪಾಕಿಸ್ತಾನ ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಮೆಲ್ಬರ್ನ್‌ನಲ್ಲಿ ಏಕದಿನ ಪಂದ್ಯ ಗೆದ್ದಿತ್ತು.


Click it and Unblock the Notifications
