For Quick Alerts
ALLOW NOTIFICATIONS  
For Daily Alerts
 

GT vs LSG : ಲಕ್ನೋಗೆ ಶಾಕ್ ನೀಡಿದ ಶಮಿ, ಗುಜರಾತ್‌ ಟೈಟನ್ಸ್‌ಗೆ 159 ರನ್ ಗುರಿ

LSG
Deepak Hooda ಹಾಗು Krunal Pandya ನಡುವೆ ನಡೆದಿದ್ದೇನು | Oneindia Kannada

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಡೆಯುತ್ತಿರುವ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ತಂಡವು 158 ರನ್‌ಗಳನ್ನ ಕಲೆಹಾಕಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡಕ್ಕೆ 159 ರನ್‌ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್‌ಗೆ, ಮೊದಲ ಓವರ್‌ನ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ ಆಘಾತ ನೀಡಿದ್ರು. ಲಕ್ನೋ ಸೂಪರ್ ಜೈಂಟ್ಸ್ ಪರ ನಾಯಕ ಕೆ.ಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಓಪನಿಂಗ್ ಬ್ಯಾಟಿಂಗ್ ಇಳಿದರು.

ಗುಜರಾತ್ ಪರ ಮೊದಲ ಓವರ್‌ನಲ್ಲಿ ಬೌಲಿಂಗ್‌ ಇಳಿದ ಅನುಭವಿ ವೇಗಿ ಮೊಹಮ್ಮದ್ ಶಮಿರ ಮೊದಲ ಎಸೆತದ ಚೆಂಡು ಕೆ.ಎಲ್ ರಾಹುಲ್ ಬ್ಯಾಟ್ ಸವರಿಕೊಂಡು ಹೋಗಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಕೈ ಸೇರಿತು. ಆದ್ರೆ ಆನ್‌ಫೀಲ್ಡ್ ಅಂಪೈರ್ ಯಾವುದೇ ತೀರ್ಪು ನೀಡಲಿಲ್ಲ. ಹೀಗಾಗಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಥರ್ಡ್‌ ಅಂಪೈರ್ ರಿವ್ಯೂ ತೆಗೆದುಕೊಂಡರು.

ರಿವ್ಯೂನಲ್ಲಿ ಮೇಲ್ನೋಟಕ್ಕೆ ಚೆಂಡು ಬ್ಯಾಟ್‌ ಸಮೀಪವೇ ಸಾಗಿದ್ದು ಕಂಡುಬಂದಿತು. ನಂತರದಲ್ಲಿ ಅಲ್ಟ್ರಾ ಎಡ್ಜ್‌ನಲ್ಲಿ ಸ್ಪಷ್ಟವಾಗಿ ಚೆಂಡು ಬ್ಯಾಟ್‌ಗೆ ಸವರಿಕೊಂಡು ಹೋಗಿರುವುದು ಕಂಡುಬಂದಿತು. ಪರಿಣಾಮ ಅಂಪೈರ್ ತನ್ನ ತಪ್ಪನ್ನ ಒಪ್ಪಿಕೊಂಡು ಔಟ್ ನೀಡಿದರು. ಪರಿಣಾಮ ಕೆ.ಎಲ್ ರಾಹುಲ್ ಹೊಸ ತಂಡದ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕೌಟ್ ಆದ್ರು.

ಹೀಗೆ ಆರಂಭದಲ್ಲೇ ಶಾಕ್ ನೀಡಿದ್ದ ಶಮಿ ಮೂರನೇ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್‌ರನ್ನ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಲಕ್ನೋಗೆ ಮತ್ತಷ್ಟು ಆಘಾತ ನೀಡಿದ್ದಾರೆ. 9 ಎಸೆತಗಳಲ್ಲಿ 7ರನ್‌ಗೆ ಡಿಕಾಕ್‌ ವಿಕೆಟ್ ಒಪ್ಪಿಸಿದ್ರು.

ಇದ್ರ ಬೆನ್ನಲ್ಲೇ ಎವಿನ್ ಲೂವಿಸ್ (10) ವರುಣ್ ಆ್ಯರೋನ್ ಬೌಲಿಂಗ್‌ನಲ್ಲಿ ಶುಭ್ಮನ್ ಗಿಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಔಟಾದ್ರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಮನೀಶ್ ಪಾಂಡೆ ಕೇವಲ 6ರನ್‌ಗೆ ಶಮಿ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ಕೇವಲ 29ರನ್‌ಗೆ 4 ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್‌ಗೆ ದೀಪಕ್ ಹೂಡ ಹಾಗೂ ಯುವ ಆಟಗಾರ ಆಯುಷ್ ಬದೋನಿ ಭರ್ಜರಿ ಜೊತೆಯಾಟದ ಮೂಲಕ ಕುಸಿದಿದ್ದ ಲಕ್ನೋ ತಂಡವನ್ನ ಮೇಲೆತ್ತಿದ್ರು.

ದೀಪಕ್ ಹೂಡ ಕೇವಲ 36 ಎಸೆತಗಳಲ್ಲಿ ಐಪಿಎಲ್‌ನಲ್ಲಿ 4ನೇ ಅರ್ಧಶತಕ ದಾಖಲಿಸಿದ್ರೆ, ಯುವ ಬ್ಯಾಟರ್ ಆಯುಷ್ ಬದೋನಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ರು.

41 ಎಸೆತಗಳಲ್ಲಿ 55ರನ್ ಕಲೆಹಾಕಿದ್ದ ದೀಪಕ್ ಹೂಡ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್‌ನಲ್ಲಿ ಎಲ್‌ಬಿಡ್ಬ್ಲ್ಯೂ ಬಲೆಗೆ ಬಿದ್ರು. ಹೂಡ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. ಇನ್ನು ಚೊಚ್ಚಲ ಪಂದ್ಯದಲ್ಲಿ ಬೊಂಬಾಟ್ ಆಟವಾಡಿದ ಆಯುಷ್ 41 ಎಸೆತಗಳಲ್ಲಿ 54 ರನ್ ಕಲೆಹಾಕಿ ವರುಣ್ ಆ್ಯರೋನ್‌ಗೆ ವಿಕೆಟ್ ಒಪ್ಪಿಸಿದ್ರು. ಈತನ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಳಿದ್ದವು.

ಕೊನೆಯಲ್ಲಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅಜೇಯ 21, ದುಶ್ಮಾಂತ್ ಚಮೀರ 1 ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನ 150ರ ಗಡಿದಾಟಿಸಿದ್ರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್ ನಷ್ಟಕ್ಕೆ 158ರನ್ ಕಲೆಹಾಕಿತು. ಗುಜರಾತ್ ಪರ ಶಮಿ 3, ವರುಣ್ ಆ್ಯರೋನ್ 2, ರಶೀದ್ 1 ವಿಕೆಟ್ ಪಡೆದಿದ್ದಾರೆ.

Story first published: Tuesday, March 29, 2022, 23:58 [IST]
Other articles published on Mar 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+