Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈ ವಿರುದ್ಧ RCB ಗೆದ್ದೇ ಗೆಲ್ಲುತ್ತೆ ಎಂದಿದ್ದ ದೊಡ್ಡ ಗಣೇಶ್‌: ಪ್ರೆಡಿಕ್ಷನ್ ಸಕ್ಸಸ್

Dodda Ganesh

ಪುಣೆಯ ಎಂಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ದಾಖಲಿಸಿತು. ಆರ್‌ಸಿಬಿ ನೀಡಿದ್ದ 174 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ ಉತ್ತಮ ಆರಂಭ ಪಡೆಯಿತಾದ್ರೂ ಸಹ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಸೋಲಿಗೆ ಶರಣಾಗಬೇಕಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಓಪನರ್‌ಗಳಾದ ವಿರಾಟ್ ಕೊಹ್ಲಿ 30, ಡುಪ್ಲೆಸಿಸ್ 38 ರನ್‌ಗಳ ನೆರವಿನಿಂದ ಅರ್ಧಶತಕದ ಜೊತೆಯಾಟ ಸಾಧಿಸಿತು. ಆದ್ರೆ ನಂತರದಲ್ಲಿ ಮ್ಯಾಕ್ಸ್‌ವೆಲ್ ಬಹುಬೇಗನೆ ಔಟಾದ್ರೂ ಸಹ ಮಹಿಪಾಲ್ ಲೊಮ್ರಾರ್ 42, ದಿನೇಶ್ ಕಾರ್ತಿಕ್ ಅಜೇಯ 26 ರನ್‌ಗಳ ನೆರವನಿಂದ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು.

ಸಿಎಸ್‌ಕೆ ಪರ ಡೆವೊನ್ ಕಾನ್ವೆ 56, ರುತುರಾಜ್ ಗಾಯಕ್ವಾಡ್ 28 ರನ್‌ಗಳ ಕೊಡುಗೆಯಿಂದ ಉತ್ತಮ ಜೊತೆಯಾಟ ಪಡೆಯಿತು. ಆದ್ರೆ ರಾಬಿನ್ ಉತ್ತಪ್ಪ, ರಾಯುಡು ವೈಫಲ್ಯದಿಂದಾಗಿ ಸೋಲನ್ನ ಒಪ್ಪಿಕೊಳ್ಳಬೇಕಾಯಿತು. ಪರಿಣಾಮ ಆರ್‌ಸಿಬಿ 13ರನ್‌ಗಳಿಂದ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ 11 ಪಂದ್ಯಗಳಲ್ಲಿ 6 ಗೆಲುವು ಮತ್ತು 5 ಪಂದ್ಯಗಳಲ್ಲಿ ಸೋಲನ್ನ ಕಾಣುವ ಮೂಲಕ 12 ಪಾಯಿಂಟ್ಸ್‌ಗಳಿಸಿದೆ.

ವಿಶೇಷ ಅಂದ್ರೆ ಎಂದಿನಂತೆ ಐಪಿಎಲ್ ಪ್ರತಿ ಪಂದ್ಯಕ್ಕೂ ಮೊದಲು ಮೈಖೇಲ್ ಎಕ್ಲ್‌ಕ್ಲೂಸಿವ್ ಕಾರ್ಯಕ್ರಮ ''ಕ್ರಿಕ್‌ಹಂಟ್ ವಿತ್‌ ದೊಡ್ಡಗಣೇಶ್‌'' ನಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ ತಂಡವು ಗೆದ್ದೇ ಗೆಲ್ಲಲ್ಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ದೊಡ್ಡಗಣೇಶ್ ಭವಿಷ್ಯ ನುಡಿದಿದ್ದರು. 10 ಅಂಕಗಳಲ್ಲಿ 9 ಅಂಕಗಳನ್ನ ನೀಡುವ ಮೂಲಕ ಆರ್‌ಸಿಬಿ ಮೇಲುಗೈ ಸಾಧಿಸಲಿದೆ ಎಂದಿದ್ದರು. ಈ ಮೂಲಕ ಮತ್ತೊಮ್ಮೆ ದೊಡ್ಡ ಗಣೇಶ್ ಪ್ರೆಡಿಕ್ಷನ್ ಸಕ್ಸಸ್ ಆಗಿದ್ದು, ಆರ್‌ಸಿಬಿ ಗೆಲುವು ಸಾಧಿಸಿದೆ.

''ಕ್ರಿಕ್‌ಹಂಟ್ ವಿತ್ ದೊಡ್ಡ ಗಣೇಶ್‌'' ಎಂಬ ಕಾರ್ಯಕ್ರಮವು ಕ್ರಿಕೆಟ್ ಪ್ರಿಯರನ್ನ ತಲುಪುವಲ್ಲಿ ಯಶಸ್ವಿಯಾಗಿದ್ದು, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್‌ ಮಾಡಿದ ಐಪಿಎಲ್ ಪ್ರೆಡಿಕ್ಷನ್ ಬಹುತೇಕ ಯಶಸ್ವಿಯಾಗಿದೆ. ಹೀಗೆ ಮೈಖೇಲ್ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರತಿ ದಿನ ಪ್ರಸಾರವಾಗುವ ಐಪಿಎಲ್ ಪಂದ್ಯಗಳ ಪೂರ್ವ ವಿಶ್ಲೇಷಣೆಯ ನೇರ ಸಂವಾದವು ಕ್ರೀಡಾ ಅಭಿಮಾನಿಗಳನ್ನ ತಲುಪುತ್ತಿದೆ. ಈ ಮೂಲಕ ಪಂದ್ಯದ ಕುರಿತಾಗಿ, ಆಟಗಾರರ ಕುರಿತಾಗಿ, ತಂಡದ ಸ್ಟ್ರೆಂಥ್, ವೀಕ್ನೆಸ್ ಜೊತೆಗೆ, ಗೆಲುವಿನ ಸರಾಸರಿ ಸೇರಿದಂತೆ ಸಾಕಷ್ಟು ಮಾಹಿತಿಗಳನ್ನ ದೊಡ್ಡ ಗಣೇಶ್‌ ಹಂಚಿಕೊಳ್ಳುತ್ತಿದ್ದಾರೆ.

Story first published: Thursday, May 5, 2022, 16:38 [IST]
Other articles published on May 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+