MYKHEL Exclusive: ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ IPL ಪ್ರೆಡಿಕ್ಷನ್, ಶೇಕಡಾ 90ರಷ್ಟು ಸಕ್ಸಸ್

ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಆವೃತ್ತಿ ಯಶಸ್ವಿಯಾಗಿ 17 ದಿನಗಳನ್ನ ಪೂರೈಸಿದ್ದು, ಒಟ್ಟು 21 ಪಂದ್ಯಗಳು ಮುಕ್ತಾಯಗೊಂಡಿವೆ. ಹಾಲಿ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಯಾರೂ ಊಹಿಸದ ರೀತಿಯಲ್ಲಿ ಆರಂಭಿಕ ನಾಲ್ಕು ಪಂದ್ಯಗಳನ್ನ ಸೋತು ಪಾಯಿಂಟ್ಸ್ ಟೇಬಲ್‌ನಲ್ಲಿ ತಳಭಾಗದಲ್ಲಿವೆ.
ಎರಡು ಹೊಸ ತಂಡಗಳಾದ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿವೆ. ಪ್ರತಿ ಸೀಸನ್‌ನಲ್ಲೂ ಪಾಯಿಂಟ್ಸ್ ಟೇಬಲ್‌ನಲ್ಲಿ ಕೆಳಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ರಾಜಸ್ತಾನ್ ರಾಯಲ್ಸ್ ಈ ಬಾರಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ.
ಹೀಗೆ ಐಪಿಎಲ್ 15ನೇ ಸೀಸನ್‌ನಲ್ಲಿ ಹಲವು ಆಶ್ಚರ್ಯಕರ ಫಲಿತಾಂಶದ ಜೊತೆಗೆ ಮುನ್ನಡೆಯುತ್ತಿದ್ದು, ''ಮೈಖೇಲ್ ಕನ್ನಡ'' ಸಂಪೂರ್ಣ ಐಪಿಎಲ್ ಕವರೇಜ್ ಮೂಲಕ ಓದುಗರನ್ನ ತಲುಪುತ್ತಿದೆ. ಇದರ ಜೊತೆಗೆ ಭಾರತದ ಮಾಜಿ ಕ್ರಿಕೆಟಿಗರಾದ ದೊಡ್ಡ ಗಣೇಶ್ ನೇರ ಫೇಸ್‌ಬುಕ್ ಸಂವಾದದ ಮೂಲಕ ನೋಡುಗರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

''ಕ್ರಿಕ್‌ಹಂಟ್ ವಿತ್ ದೊಡ್ಡ ಗಣೇಶ್'' ಎಂಬ ಕಾರ್ಯಕ್ರಮವು ಕ್ರಿಕೆಟ್ ಪ್ರಿಯರನ್ನ ತಲುಪುವಲ್ಲಿ ಯಶಸ್ವಿಯಾಗಿದ್ದು, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಮಾಡಿದ ಐಪಿಎಲ್ ಪ್ರೆಡಿಕ್ಷನ್ ಬಹುತೇಕ ಯಶಸ್ವಿಯಾಗಿದೆ. ಇಲ್ಲಿಯವರೆಗೆ ನಡೆದ 21 ಐಪಿಎಲ್ ಪಂದ್ಯಗಳಲ್ಲಿ ದೊಡ್ಡ ಗಣೇಶ್ ಪ್ರೆಡಿಕ್ಟ್ ಮಾಡಿದ ಶೇಕಡಾ 90ರಷ್ಟು ತಂಡಗಳು ಪಂದ್ಯ ಜಯಿಸಿವೆ. ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಪಂದ್ಯ ಜಯಿಸಲಿದೆ ಎಂಬ ಪ್ರೆಡಿಕ್ಷನ್ ಸೇರಿದಂತೆ, ಗುಜರಾತ್ ಟೈಟನ್ಸ್ ವಿರುದ್ಧ ಸನ್‌ರೈಸರ್ಸ್ ಹೈದ್ರಾಬಾದ್ ಗೆಲ್ಲಲಿದೆ ಎಂಬ ಪ್ರೆಡಿಕ್ಷನ್ ನಿಜವಾಗಿದೆ.
ಹೀಗೆ ಮೈಖೇಲ್ ಫೇಸ್‌ಬುಕ್ ಪೇಜ್‌ನಲ್ಲಿ ಪ್ರತಿ ದಿನ ಪ್ರಸಾರವಾಗುವ ಐಪಿಎಲ್ ಪಂದ್ಯಗಳ ಪೂರ್ವ ವಿಶ್ಲೇಷಣೆಯ ನೇರ ಸಂವಾದವು ಕ್ರೀಡಾ ಅಭಿಮಾನಿಗಳನ್ನ ತಲುಪುತ್ತಿದೆ. ಈ ಮೂಲಕ ಪಂದ್ಯದ ಕುರಿತಾಗಿ, ಆಟಗಾರರ ಕುರಿತಾಗಿ, ತಂಡದ ಸ್ಟ್ರೆಂಥ್, ವೀಕ್ನೆಸ್ ಜೊತೆಗೆ, ಗೆಲುವಿನ ಸರಾಸರಿ ಸೇರಿದಂತೆ ಸಾಕಷ್ಟು ಮಾಹಿತಿಗಳನ್ನ ದೊಡ್ಡ ಗಣೇಶ್ ಹಂಚಿಕೊಳ್ಳುತ್ತಿದ್ದಾರೆ.
ಐಪಿಎಲ್ 2022ರ ಪಂದ್ಯಗಳ ಲೈವ್ ಫೇಸ್‌ಬುಕ್ ಸಂವಾದವು ವಾರದ ದಿನಗಳಲ್ಲಿ ಸಂಜೆ 4 ಗಂಟೆಗೆ, ವಾರಾಂತ್ಯದಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಪ್ರೆಡಿಕ್ಷನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಐಪಿಎಲ್ ಪಂದ್ಯಗಳ ಕುರಿತಾಗಿ ನಿಮ್ಮ ಪ್ರಶ್ನೆಗಳಿದ್ದರೆ, ಮೈಖೇಲ್ ಕನ್ನಡ ಫೇಸ್‌ಬುಕ್ ಪೇಜ್‌ನಲ್ಲಿ ಕಾಮೆಂಟ್ ಮಾಡಿ, ದೊಡ್ಡ ಗಣೇಶ್‌ರಿಂದ ಆಯ್ದ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications