ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಷಲ್, ಹಸರಂಗ ಅಲ್ಲ: ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಬಲ್ಲ ಬೌಲರ್ ಈತ ಎಂದು ಕೊಂಡಾಡಿದ ಕೈಫ್

RCB vs LSG: Mohammad Kaif praises RCB pacer Josh Hazlewood said RCB require such a bowler

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಒಂದರ ನಂತರ ಮತ್ತೊಂದು ಗೆಲುವು ಸಾಧಿಸುತ್ತಾ ಮುನ್ನುಗ್ಗುತ್ತಿದೆ. ಟೂರ್ನಿಯ ಮತ್ತೊಂದು ಬಲಿಷ್ಠ ತಂಡ ಎನಿಸಿಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಎಲ್‌ಎಸ್‌ಜಿ ತಂಡಕ್ಕಿಂತ ಮೇಲುಗೈ ಸಾಧಿಸಿದ ಆರ್‌ಸಿಬಿ ಪಡೆ ಅರ್ಹ ಗೆಲುವು ಸಂಪಾದಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಎರಡನೇ ಸ್ಥಾನಕ್ಕೇರಿದೆ.

ಇನ್ನು ಆರ್‌ಸಿಬಿ ತಂಡದ ಈ ಗೆಲುವಿನ ಬಗ್ಗೆ ಅಭಿಮಾನಿಗಳು ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಆರ್‌ಸಿಬಿ ಗೆಲುವಿನ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೈಫ್ ಆರ್‌ಸಿಬಿ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವ ಓರ್ವ ವೇಗಿಯನ್ನು ಕೈಫ್ ವಿಶೇಷವಾಗಿ ಕೊಂಡಾಡಿದ್ದಾರೆ.

IPL 2022: ಸೋಲಿನ ಬೆನ್ನಲ್ಲೆ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಿಸಿದ ಕೆ.ಎಲ್ ರಾಹುಲ್IPL 2022: ಸೋಲಿನ ಬೆನ್ನಲ್ಲೆ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಿಸಿದ ಕೆ.ಎಲ್ ರಾಹುಲ್

ಹಾಗಾದರೆ ಕೈಫ್ ಪ್ರಶಂಸೆ ವ್ಯಕ್ತಪಡಿಸಿರುವ ಆ ಬೌಲರ್ ಯಾರು? ಆ ಬೌಲರ್ ಬಗ್ಗೆ ಕೈಡಿರುವ ಮಾತುಗಳೇನು? ಮುಂದೆ ಓದಿ..

"ಆರ್‌ಸಿಬಿ ಟ್ರೋಫಿ ಗೆಲುವು ಸಾಧ್ಯವಾಗಿಸಬಲ್ಲ ಬೌಲರ್ ಆತ"

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಿದ್ದು ಆಸ್ಟ್ರೇಲಿಯಾ ಮೂಲದ ಜೋಶ್ ಹೇಜಲ್‌ವುಡ್. ಮೊಹಮ್ಮದ್ ಕೈಫ್ ಆರ್‌ಸಿಬಿ ತಂಡದ ವೇಗಿಯ ಪ್ರದರ್ಶನಕ್ಕೆ ಸಂಪೂರ್ಣ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಜೋಶ್ ಹೇಜಲ್‌ವುಡ್ ಆರ್‌ಸಿಬಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಬೌಲರ್ ಆಗಿದ್ದಾರೆ ಎಂದು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮೊಹಮ್ಮದ್ ಕೈಫ್.

ಹೇಜಲ್‌ವುಡ್‌ನಂತಾ ಬೌಲರ್ ಆರ್‌ಸಿಬಿಗೆ ಅಗತ್ಯವಿತ್ತು

ಹೇಜಲ್‌ವುಡ್‌ನಂತಾ ಬೌಲರ್ ಆರ್‌ಸಿಬಿಗೆ ಅಗತ್ಯವಿತ್ತು

ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವಿನ ಪಂದ್ಯದ ನಂತರ ವಿಶೇಷಣೆ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಂಡದ ಸಾಮರ್ರ್ಥಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ಆರ್‌ಸಿಬಿಗೆ ನಿಜಕ್ಕೂ ಹೇಜಲ್‌ವುಡ್ ಅವರಂತಾ ಬೌಲರ್‌ನ ಅಗತ್ಯವಿತ್ತು. ಅವರಲ್ಲಿ ಬ್ಯಾಟಿಂಗ್ ಸಾಮರ್ಥ್ಯ ಯಾವಾಗಲೂ ಇತ್ತು. ಅದನ್ನು ನಾವು ಸುದೀರ್ಘ ಕಾಲದಿಂದ ಗಮನಿಸಿಕೊಂಡು ಬಂದಿದ್ದೇವೆ. ಕ್ರಿಸ್‌ ಗೇಲ್, ಎಬಿ ಡಿವಿಲಿಯರ್ಸ್ ಅವರಂತಾ ಬ್ಯಾಟರ್‌ಗಳನ್ನು ಆರ್‌ಸಿಬಿ ಹೊಂದಿತ್ತು. ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. ಆದರೆ ಅವರು ಅತ್ಯುತ್ತಮ ಬೌಲರ್‌ಗಳನ್ನು ಹೊಂದಿದ್ದರೆ ಅವರು ಐಪಿಎಲ್ ಟ್ರೋಫಿ ಗೆಲ್ಲು ಸಾಧ್ಯವಿದೆ" ಎಂದಿದ್ದಾರೆ ಮೊಹಮ್ಮದ್ ಕೈಫ್.

4 ವಿಕೆಟ್ ಪಡೆದ ಜೋಶ್ ಹೇಜಲ್‌ವುಡ್

4 ವಿಕೆಟ್ ಪಡೆದ ಜೋಶ್ ಹೇಜಲ್‌ವುಡ್

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಆಡುತ್ತಿರುವ ಜೋಶ್ ಹೇಜಲ್‌ವುಡ್ ಕಳೆದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂರು ಪಂದ್ಯಗಳಲ್ಲಿಯೂ ಹೇಜಲ್‌ವುಡ್ ಅವರಿಂದ ಅತ್ಯುತ್ತಮ ಪ್ರದರ್ಶನ ಬಂದಿರುವುದು ಗಮನಾರ್ಹ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹೇಜಲ್‌ವುಡ್ 4 ವಿಕೆಟ್ ಸಂಪಾದಿಸಿ ತಂಡದ ಗೆಲುವಿಗೆ ಕಾರಣವಾದರು. ಈ ಮೂಲಕ ಆರ್‌ಸಿಬಿ ತಂಡಕ್ಕೆ ಹೇಜಲ್‌ವುಡ್ ಹೊಸ ಭರವಸೆಯಾಗಿದ್ದಾರೆ.

ಫ್ರಾಂಚೈಸಿ ಮಾಡಿಕೊಂಡ ದೊಡ್ಡ ತಪ್ಪು | Oneindia Kannada
2ನೇ ಸ್ಥಾನದಲ್ಲಿ ಆರ್‌ಸಿಬಿ

2ನೇ ಸ್ಥಾನದಲ್ಲಿ ಆರ್‌ಸಿಬಿ

ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಆರ್‌ಸಿಬಿ 18 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆಡಿದ 7 ಪಂದ್ಯಗಳ ಪೈಕಿ 5 ಗೆಲುವು ಸಾಧಿಸಿದ್ದು 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಆರ್‌ಸಿಬಿ ಪ್ರಸ್ತುತ 2ನೇ ಸ್ಥಾನದಲ್ಲಿದೆ. ಹೀಗಾಗಿ ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಿದ್ದು ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೊಡಬೇಕಿದೆ.

Story first published: Wednesday, April 20, 2022, 16:31 [IST]
Other articles published on Apr 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X