MI vs CSK: ಫ್ಯಾಂಟೆಸಿ ಡ್ರೀಮ್ ಟೀಂ, ಯಾವ ಆಟಗಾರರಿಗೆ ಹೆಚ್ಚಿನ ಬೇಡಿಕೆ? ನಾಯಕ, ಉಪನಾಯಕನ ಆಯ್ಕೆ!

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮತ್ತು ಮಾಜಿ ಚಾಂಪಿಯನ್ ಮೊದಲ ಬಾರಿಗೆ ಈ ಸೀಸನ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಐಪಿಎಲ್ 2022ರ 32ನೇ ಪಂದ್ಯದಲ್ಲಿ ಐಪಿಎಲ್‌ನ ಬಹುಯಶಸ್ವಿ ತಂಡಗಳ ಫೈಟ್ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಸದ್ಯ ಪಾಯಿಂಟ್ಸ್ ಟೇಬನಲ್‌ನಲ್ಲಿ ಅತ್ಯಂತ ಕೆಳಸ್ಥಾನದಲ್ಲಿದ್ದಾರೆ. ಆಡಿರುವ ಆರು ಪಂದ್ಯಗಳಲ್ಲಿ ಸೋತಿರುವ ರೋಹಿತ್ ಪಡೆ ಗೆಲುವಿಗಾಗಿ ಎದುರು ನೋಡುತ್ತಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಏಕೈಕ ಪಂದ್ಯ ಜಯಿಸಿದ್ದು, ಆರ್‌ಸಿಬಿ ವಿರುದ್ಧ ಮಾತ್ರ ಗೆಲುವು ಕಂಡಿದೆ. ಉಳಿದಂತೆ ಐದು ಪಂದ್ಯಗಳನ್ನ ಸೋತು 9ನೇ ಸ್ಥಾನದಲ್ಲಿದೆ.

ಕಳೆದ ಪಂದ್ಯದಲ್ಲಿ ಉಭಯ ತಂಡಗಳು ಸೋಲು
ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 18 ರನ್‌ಗಳಿಂದ ಸೋಲನ್ನ ಕಂಡಿತು. ಸತತ ಬೌಲಿಂಗ್ ವೈಫಲ್ಯದಿಂದಾಗಿ ಮುಂಬೈ ಇಂಡಿಯನ್ಸ್ ಈ ಸೀಸನ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಡೆವಾಲ್ಡ್ ಬ್ರೆವಿಸ್ 31, ಸೂರ್ಯಕುಮಾರ್ ಯಾದವ್ 37ರನ್ ಗಳಿಸಿದ್ರು ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಿಲ್ಲ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಆರ್‌ಸಿಬಿ ವಿರುದ್ಧ ಗೆದ್ದ ಬಳಿಕ ಗೆಲುವಿನ ಓಟ ಮುಂದುವರಿಸಲಿಲ್ಲ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 3 ವಿಕೆಟ್‌ಗಳ ಸೋಲನ್ನ ಕಂಡಿತು. ರುತುರಾತ್ ಗಾಯಕ್ವಾಡ್ 73, ಅಂಬಟಿ ರಾಯುಡು 46ರನ್‌ಗಳ ಕೊಡುಗೆ ಗೆಲುವಿನ ಹಂತಕ್ಕೆ ಕೊಂಡೊಯ್ಯಲಿಲ್ಲ.

ಹವಾಮಾನ ಮತ್ತು ಪಿಚ್ ರಿಪೋರ್ಟ್
ಮುಂಬೈನ ಉಷ್ಣಾಂಶ ಇಂದು ಕೊಂಚ ಹೆಚ್ಚು ದಾಖಲಾಗಿದ್ದು, 33-34 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು. ಹ್ಯುಮಿಡಿಟಿ 57 ರಿಂದ 59 ಪರ್ಸೆಂಟ್ ನಷ್ಟಿದ್ದು, 21-24 ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಪಿಚ್‌ನಲ್ಲಿ 160 ರಿಂದ 170ರಷ್ಟು ಸ್ಕೋರ್ ಅಂದಾಜಿಸಬಹುದು, ಸರಾಸರಿ ಮೊದಲ ಇನ್ನಿಂಗ್ಸ್ ರನ್ 175ರಷ್ಟಿದೆ.
ಇಲ್ಲಿ ರನ್ ಚೇಸಿಂಗ್ ಮಾಡಿದ ಗೆಲುವಿನ ಪ್ರಮಾಣ ಹೆಚ್ಚಿದ್ದು, 60 ಪರ್ಸೆಂಟ್‌ನಷ್ಟು ಗೆಲುವಿನ ದಾಖಲೆ ಹೊಂದಿದೆ.
CSK vs MI Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

ಮುಂಬೈ ಇಂಡಿಯನ್ಸ್ , ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಕಿರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್, ಜಯದೇವ್ ಉನಾದ್ಕತ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಶಿವಂ ದುಬೆ, ಅಂಬಟಿ ರಾಯುಡು, ಎಂಎಸ್ ಧೋನಿ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ನಾಯಕ), ಡ್ವೇನ್ ಬ್ರಾವೋ, ಡ್ವೈನ್ ಪ್ರಿಟೋರಿಯಸ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ

ಫ್ಯಾಂಟೆಸಿ ಡ್ರೀಮ್ ಟೀಂ 1
ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮಹೇಶ್ ತೀಕ್ಷಣ ಫ್ಯಾಂಟೆಸಿ ಡ್ರೀಮ್ ಟೀಂ್‌ನ ಪ್ರಮುಖ ಪ್ಲೇಯರ್ಸ್ ಆಗಿದ್ದಾರೆ. ಇನ್ನುಳಿದಂತೆ ಹೆಚ್ಚು ಆಯ್ಕೆಯ ಆಟಗಾರರು ಈ ಕೆಳಗಿದ್ದಾರೆ.
ನಾಯಕ- ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ
ಉಪ ನಾಯಕ - ಮಹೇಶ್ ತೀಕ್ಷಣ, ಇಶಾನ್ ಕಿಶನ್
ಕೀಪರ್ - ಇಶಾನ್ ಕಿಶನ್
ಬ್ಯಾಟ್ಸ್‌ಮನ್‌ಗಳು - ಡೆವಾಲ್ಡ್ ಬ್ರೆವಿಸ್, ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್ (ನಾಯಕ), ಸೂರ್ಯಕುಮಾರ್ ಯಾದವ್
ಆಲ್ ರೌಂಡರ್‌ಗಳು - ಮೊಯಿನ್ ಅಲಿ, ರವೀಂದ್ರ ಜಡೇಜಾ
ಬೌಲರ್‌ಗಳು - ಮಹೇಶ್ ತೀಕ್ಷಣ (ಉಪನಾಯಕ), ಡ್ವೇನ್ ಬ್ರಾವೋ, ಜಯದೇವ್ ಉನದ್ಕತ್, ಜಸ್ಪ್ರೀತ್ ಬುಮ್ರಾ
DC vs PBKS: ಕೆಟ್ಟದಾಗಿ ಸೋತ ಪಂಜಾಬ್: ಹತ್ತೇ ಓವರ್‌ಗೆ ಮ್ಯಾಚ್ ಮುಗಿಸಿದ ಡೆಲ್ಲಿ ದಾಖಲೆ

ಫ್ಯಾಂಟೆಸಿ ಡ್ರೀಮ್ ಟೀಂ 2
ಕೀಪರ್ - ಇಶಾನ್ ಕಿಶನ್ (ಉಪನಾಯಕ)
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ರಾಬಿನ್ ಉತ್ತಪ್ಪ (ನಾಯಕ), ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್
ಆಲ್ ರೌಂಡರ್‌ಗಳು - ಮೊಯಿನ್ ಅಲಿ, ರವೀಂದ್ರ ಜಡೇಜಾ, ಕೀರಾನ್ ಪೊಲಾರ್ಡ್
ಬೌಲರ್‌ಗಳು - ಮಹೇಶ್ ತೀಕ್ಷಣ, ಡ್ವೇನ್ ಬ್ರಾವೋ, ಮುರುಗನ್ ಅಶ್ವಿನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications