MI vs LSG: ಫ್ಯಾಂಟೆಸಿ ಡ್ರೀಮ್ ಟೀಮ್ ಮತ್ತು ಕೀ ಪ್ಲೇಯರ್ ತಿಳಿದುಕೊಳ್ಳಿ

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಕಾಳಗದಲ್ಲಿ ಉಭಯ ತಂಡಗಳು ಗೆಲುವಿಗಾಗಿ ರಣತಂತ್ರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿವೆ. ಈಗಾಗಲೇ ಐದಕ್ಕೆ ಐದು ಪಂದ್ಯ ಸೋತು ಪ್ಲೇ ಆಫ್ ಹಾದಿಯನ್ನ ಬಹುತೇಕ ಕಳೆದುಕೊಂಡಿರುವ ರೋಹಿತ್ ಪಡೆಗೆ, ಬಲಿಷ್ಠ ಕೆ.ಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಸವಾಲೆಸೆಯಲು ಸಜ್ಜಾಗಿದೆ.
ಮಧ್ಯಾಹ್ನ 3.30ಕ್ಕೆ ಪ್ರಾರಂಭಗೊಳ್ಳಲಿರುವ ಇವತ್ತಿನ ಪಂದ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನ ಎದುರಿಸುತ್ತಿದ್ದು, ಇದು ಟಾಟಾ ಐಪಿಎಲ್ 2022ರ 26ನೇ ಪಂದ್ಯವಾಗಿದೆ.

ಪಾಯಿಂಟ್ಸ್ ಟೇಬಲ್‌ನಲ್ಲಿ ಅಜಗಜಾಂತರ ವ್ಯತ್ಯಾಸ
ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ಈ ಬಾರಿಯ ಸೀಸನ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ತಳಮುಟ್ಟಿದೆ. ಐದಕ್ಕೆ ಐದು ಪಂದ್ಯ ಸೋತಿರುವ ರೋಹಿತ್ ಪಡೆ ಈ ಮಟ್ಟಿಗೆ ಕೆಟ್ಟ ಪ್ರದರ್ಶನ ಎಂದು ತೋರಿಲ್ಲ.
ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 12ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು. ಡೆವಾಲ್ಡ್ ಬ್ರೆವಿಸ್ (49) ತಿಲಕ್ ವರ್ಮಾ 36ರನ್‌ಳ ಹೊರತಾಗಿಯೂ ಸೋಲನ್ನ ಕಂಡಿತು.
ಆದ್ರೆ ಮತ್ತೊಂದೆಡೆ ಲಕ್ನೋ ಸೂಪರ್‌ಜೈಂಟ್ಸ್ ಮೂರು ವಿಭಾಗದಲ್ಲಿ ಬಲಿಷ್ಠವಾಗಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಲಕ್ನೋ ಕೂಡ ಕಳೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ 3 ರನ್‌ಗಳ ಅಂತರದಲ್ಲಿ ಸೋಲನ್ನಪ್ಪಿತು.

ಹವಾಮಾನ ವರದಿ
ಪಂದ್ಯದ ದಿನದಂದು ತಾಪಮಾನವು 50-55% ಹ್ಯುಮಿಡಿಟಿ ಮತ್ತು 13-15 km/hr ಗಾಳಿಯ ವೇಗದೊಂದಿಗೆ 34-36 ° ಸೆಲ್ಸಿಯಷ್ಟು ಉಷ್ಟಾಂಣವನ್ನ ನಿರೀಕ್ಷಿಸಲಾಗಿದೆ. ಆಟದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ.
IPL 2022: ಸಾಲು ಸಾಲು ಸೋಲಿನಿಂದ ಕಂಗಾಲಾಗಿರುವ ರೋಹಿತ್ ಶರ್ಮಾಗೆ ಬ್ಯಾನ್ ಸಂಕಷ್ಟ!

ಮುಂಬೈ ಮತ್ತು ಲಕ್ನೋ ಸಂಭಾವ್ಯ ಪ್ಲೇಯಿಂಗ್ 11
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಜಯದೇವ್ ಉನಾದ್ಕತ್, ಮುರುಗನ್ ಅಶ್ವಿನ್, ಟೈಮಲ್ ಮಿಲ್ಸ್, ಜಸ್ಪ್ರೀತ್ ಬುಮ್ರಾ, ಬೆಸಿಲ್ ಥಂಪಿ
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಅವೇಶ್ ಖಾನ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್
RCB vs DC Head to Head : ಇತ್ತಂಡಗಳ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಸೋತಿರುವ ಕಳಪೆ ತಂಡ ಯಾವುದು?

ಡ್ರೀಮ್ ಟೀಂ 1
ಫ್ಯಾಂಟೆಸಿ ಡ್ರೀಂನಲ್ಲಿ ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿಕಾಕ್, ಕೆ.ಎಲ್ ರಾಹುಲ್, ದೀಪಕ್ ಹೂಡಾ ಪ್ರಮುಖ ಆಯ್ಕೆಯಾಗಿದ್ದಾರೆ. ಉಳಿದಂತೆ ಡ್ರೀಂ ಟೀಂ ಕುರಿತಾದ ವಿವರ ಕೆಳಗಿದೆ.
ನಾಯಕ- ಕೆಎಲ್ ರಾಹುಲ್, ಇಶಾನ್ ಕಿಶನ್
ಉಪನಾಯಕ- ಸೂರ್ಯಕುಮಾರ್ ಯಾದವ್, ಕ್ವಿಂಟನ್ ಡಿ ಕಾಕ್
ಕೀಪರ್‌ಗಳು - ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್
ಬ್ಯಾಟ್ಸ್‌ಮನ್‌ಗಳು- ಸೂರ್ಯಕುಮಾರ್ ಯಾದವ್ (ಉಪನಾಯಕ), ರೋಹಿತ್ ಶರ್ಮಾ, ತಿಲಕ್ ವರ್ಮಾ, ದೀಪಕ್ ಹೂಡಾ
ಆಲ್ ರೌಂಡರ್ - ಡೆವಾಲ್ಡ್ ಬ್ರೆವಿಸ್
ಬೌಲರ್‌ಗಳು - ರವಿ ಬಿಷ್ಣೋಯ್, ಅವೇಶ್ ಖಾನ್, ಜಸ್ಪ್ರೀತ್ ಬುಮ್ರಾ

ಡ್ರೀಮ್ ಟೀಂ 2
ಕೀಪರ್‌ಗಳು - ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್ (ಉಪನಾಯಕ), ಇಶಾನ್ ಕಿಶನ್ (ನಾಯಕ)
ಬ್ಯಾಟ್ಸ್‌ಮನ್‌ಗಳು- ಸೂರ್ಯಕುಮಾರ್ ಯಾದವ್, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ
ಆಲ್ ರೌಂಡರ್ಸ್ - ಡೆವಾಲ್ಡ್ ಬ್ರೆವಿಸ್, ಜೇಸನ್ ಹೋಲ್ಡರ್
ಬೌಲರ್‌ಗಳು- ರವಿ ಬಿಷ್ಣೋಯ್, ಅವೇಶ್ ಖಾನ್, ಮುರುಗನ್ ಅಶ್ವಿನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications