ಅತಿ ಹೆಚ್ಚು ಬಾರಿ ಪ್ಲೇ ಆಫ್ ತಲುಪಿರುವ ಐಪಿಎಲ್ ತಂಡಗಳು: ಆರ್‌ಸಿಬಿಗೆ ಎಷ್ಟನೇ ಸ್ಥಾನ?

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಗುಜರಾತ್ ಟೈಟನ್ಸ್, ರಾಜಸ್ತಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್‌ಗೆ ಅರ್ಹತೆ ಪಡೆದಿವೆ.
ಪ್ಲೇ ಆಫ್‌ಗೆ ತಲುಪಿರುವ ನಾಲ್ಕು ತಂಡಗಳಲ್ಲಿ ಮೂರು ತಂಡಗಳು ಈ ಬಾರಿ ಚೊಚ್ಚಲ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಂಡರೆ, ಒಂದು ಬಾರಿ ಕಪ್ ಗೆದ್ದಿರುವ ರಾಜಸ್ತಾನ್ ಟೀಂ ಕೂಡ ಟ್ರೋಫಿಯನ್ನ ಮುಡಿಗೇರಿಸಲು ಎದುರು ನೋಡುತ್ತಿವೆ.
ಇದೆಲ್ಲಾ ಒಂದೆಡೆಯಾದ್ರೆ, ಹಾಲಿ ಚಾಂಪಿಯನ್ ಸಿಎಸ್‌ಕೆ ಮತ್ತು ಐದು ಬಾರಿಯ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಲೀಗ್ ಹಂತದಲ್ಲೇ ಹೊರಬಿದ್ದಿರೋದು ನಿಜಕ್ಕೂ ಈ ಸೀಸನ್‌ನ ಬಹುದೊಡ್ಡ ಆಶ್ಚರ್ಯಕ್ಕೆ ಕಾರಣವಾಗಿದೆ. ಆದ್ರೂ ಕೂಡ ಪ್ಲೇ ಆಫ್ ಹಂತಕ್ಕೇರುವುದರಲ್ಲಿ ಕೆಲವು ತಂಡಗಳು ಎಲ್ಲರಿಗಿಂತ ಮುಂದಿವೆ. ಆ ತಂಡಗಳು ಯಾವುವು ಎಷ್ಟು ಬಾರಿ ಎಂಬುದನ್ನ ಈ ಕೆಳಗೆ ಕಾಣಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪ್ಲೇ ಆಫ್ ತಲುಪಲು ಕಾತುರಗೊಂಡಿದ್ದ ಆರ್‌ಸಿಬಿ ತಂಡವು, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನ ಎದುರು ನೋಡುತ್ತಿತ್ತು. ಡೆಲ್ಲಿ ವಿರುದ್ಧ ಮುಂಬೈ ಗೆದ್ದಿದ್ದೇ ತಡ ಕುಣಿದು ಕುಪ್ಪಳಿಸಿದ ಆರ್‌ಸಿಬಿ ಆಟಗಾರರು ಪ್ಲೇ ಆಫ್‌ಗೆ ತಲುಪಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 8ನೇ ಬಾರಿಗೆ ಪ್ಲೇ ಆಫ್ ತಲುಪಿರುವ ಸಾಧನೆ ಆಗಿದೆ.
ಮೇ 25ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆರ್‌ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಕಾದಾಟ ನಡೆಸಲಿದ್ದು, ಗೆದ್ದ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯವನ್ನ ಆಡಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದ ಜೊತೆಗೆ ಪಂದ್ಯವನ್ನಾಡಲಿದೆ.
ದ.ಆಫ್ರಿಕಾ ವಿರುದ್ಧ ಟಿ20 ಸರಣಿ: ಟೀಂ ಇಂಡಿಯಾ ಸೆಲೆಕ್ಷನ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

ಮುಂಬೈ ಇಂಡಿಯನ್ಸ್
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಕಪ್ ಗೆದ್ದಿರುವ ಮುಂಬೈ ಇಂಡಿಯನ್ಸ್, ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್ ತಲುಪಿರುವ ಎರಡನೇ ತಂಡವಾಗಿದೆ. ಐಪಿಎಲ್‌ನಲ್ಲಿ ಒಟ್ಟು 9 ಬಾರಿ ಪ್ಲೇ ಆಫ್ ತಲುಪಿರುವ ರೋಹಿತ್ ಪಡೆ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿರುವುದು ವಿಶೇಷ.
ಐಪಿಎಲ್ 2022ರ ಸೀಸನ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ಸತತ 8 ಪಂದ್ಯಗಳನ್ನ ಸೋತು ಭಾರೀ ಮುಖಭಂಗ ಅನುಭವಿಸಿತು. ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ಆಡಿದ 14 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲೇ ಟೂರ್ನಿ ಅಂತ್ಯಗೊಳಿಸಿದೆ.
IPL 2022: ತಂಡಗಳ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿ ಔಟ್; ಆರ್‌ಸಿಬಿ ಪರ ಯಾರು?

ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್ 15ನೇ ಸೀನಸ್‌ನಲ್ಲಿ ನಾಯಕತ್ವ ಬದಲಾವಣೆಯಿಂದಾಗಿ ಕೈ ಸುಟ್ಟಿಕೊಂಡಿದ್ದರ ಜೊತೆಗೆ, ಪ್ರಮುಖ ಬೌಲರ್ ಅನುಪಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ತೀವ್ರವಾಗಿ ಕಾಡಿತು. ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನ ಗಿಟ್ಟಿಸಿರುವ ಸಿಎಸ್‌ಕೆ ಮುಂಬೈನಷ್ಟೇ ಪಾಯಿಂಟ್ಸ್ ಹೊಂದಿದ್ದರೂ ನೆಟ್ ರನ್‌ರೇಟ್ ಮೂಲಕ ಈ ಸ್ಥಾನ ಪಡೆದಿದೆ.
ಐಪಿಎಲ್ ಇತಿಹಾಸದಲ್ಲಿ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್ ತಲುಪಿರುವ ತಂಡವಾಗಿದೆ. ಸಿಎಸ್‌ಕೆ ಇದುವರೆಗೂ 15 ಐಪಿಎಲ್ ಸೀಸನ್‌ನಲ್ಲಿ ಬರೋಬ್ಬರಿ 11 ಬಾರಿ ಪ್ಲೇ ಆಫ್ ತಲುಪಿದ್ದು, ಅತ್ಯಂತ ಯಶಸ್ವಿ ಐಪಿಎಲ್ ಫ್ರಾಂಚೈಸಿ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications