For Quick Alerts
ALLOW NOTIFICATIONS  
For Daily Alerts
 

ಧೋನಿಯ ಆ ಸಿಕ್ಸರ್‌ ನೋಡಿ, ನಾನು ಕ್ರಿಕೆಟ್ ಆಡ್ಬೇಕು ಎಂದು ನಿರ್ಧರಿಸಿದೆ: ಮುಕೇಶ್ ಚೌಧರಿ

Mukesh Choudhary

ಐಪಿಎಲ್ 2022ರ ಸೀಸನ್‌ನಲ್ಲಿ ದೀಪಕ್ ಚಹಾರ್ ಅನುಪಸ್ಥಿತಿಯಲ್ಲಿ ತಡವಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದ ಮುಕೇಶ್ ಚೌಧರಿ, ತಂಡದ ಪ್ರಮುಖ ವಿಕೆಟ್ ಟೇಕರ್ ಆಗಿ ಮಿಂಚುತ್ತಿದ್ದಾರೆ. ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡ ಎಡಗೈ ವೇಗಿ ಅದ್ಭುತ ಸ್ಪೆಲ್‌ಗಳ ಮೂಲಕ ಮಿಂಚುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಬಳಿಸಿದ್ದ ಮುಕೇಶ್ ಚೌಧರಿ, ಪವರ್‌ಫುಲ್ ಯಾರ್ಕರ್ ಮೂಲಕ ಇಶಾನ್ ಕಿಶನ್‌ರನ್ನ ಬೌಲ್ಡ್‌ ಮಾಡಿದ್ದನ್ನ ಯಾರೂ ಮರೆಯುವಂತಿಲ್ಲ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್ ವಿರುದ್ಧ ಗೆದ್ದ ಸಿಎಸ್‌ಕೆ ಪರ ಈತ ಪ್ರಮುಖ ಬೌಲರ್ ಆಗಿದ್ದಾನೆ.

ಎಂ.ಎಸ್ ಧೋನಿಯ ಸಿಕ್ಸರ್ ನೋಡಿ ಕ್ರಿಕೆಟ್ ಆಡ್ಬೇಕು ಅನ್ನಿಸಿತು!

ಎಂ.ಎಸ್ ಧೋನಿಯ ಸಿಕ್ಸರ್ ನೋಡಿ ಕ್ರಿಕೆಟ್ ಆಡ್ಬೇಕು ಅನ್ನಿಸಿತು!

ಸಿಎಸ್‌ಕೆ ಯುವ ವೇಗಿ ಮುಕೇಶ್ ಚೌಧರಿ ಎಂ.ಎಸ್ ಧೋನಿ ಆ ಒಂದು ಸಿಕ್ಸರ್ ನೋಡಿ ಕ್ರಿಕೆಟ್ ಆಡಲೇಬೇಕು ಎಂದು ನಿರ್ಧರಿಸಿದ್ದಾರೆ. ಆತನೇ ಹೇಳುವ ಪ್ರಕಾರ 2011ರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾದ ಕುಲಶೇಖರ ಬೌಲಿಂಗ್‌ನಲ್ಲಿ ಐತಿಹಾಸಿಕ ಸಿಕ್ಸರ್ ಸಿಡಿಸಿ ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟಿದ್ದ ಮಹೇಂದ್ರ ಸಿಂಗ್‌ ಧೋನಿ ಇನ್ನಿಂಗ್ಸ್‌ ಅನ್ನು ಯಾರು ಮರೆಯಲು ಸಾಧ್ಯವಿಲ್ಲ. ಆ ಕೊನೆಯ ಸಿಕ್ಸರ್‌ ಮುಕೇಶ್ ಚೌಧರಿ ಬದುಕನ್ನೇ ಬದಲಿಸಿಬಿಟ್ಟಿದೆ.

"ನಾನು ಆ ಸಿಕ್ಸರ್ ಗೆಲ್ಲುವುದನ್ನು ನೋಡಿದಾಗಲೆಲ್ಲ ನನಗೆ ಮೈನವಿರೇಳಿಸುವಂತೆ ಆಗುತ್ತದೆ. ಧೋನಿ ಸರ್ ಆ ವಿನ್ನಿಂಗ್ ಸಿಕ್ಸರ್ ಹೊಡೆದು ಯುವರಾಜ್ ಸಿಂಗ್ ಅವರನ್ನು ತಬ್ಬಿಕೊಂಡ ಕ್ಷಣ, ನಾನು ಭಾರತಕ್ಕಾಗಿಯೂ ಆಡುತ್ತೇನೆ ಎಂದು ನಿರ್ಧರಿಸಿದೆ. ನಾನು ಕ್ರಿಕೆಟ್ ಆಡುತ್ತಿದ್ದೆ, ಆದರೆ ಆ ಐತಿಹಾಸಿಕ ಕ್ಷಣದ ನಂತರ ನಾನು ಆಟವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದೆ. 2011 ರ ವಿಶ್ವಕಪ್ ತಂಡವು ನನಗೆ ಬಹಳಷ್ಟು ಸ್ಫೂರ್ತಿ ನೀಡಿತು "ಎಂದು ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡುತ್ತಾ ಮುಖೇಶ್ ಹೇಳಿದರು.

IPL 2022: ಟೂರ್ನಿಯಲ್ಲಿ ಕಳಪೆ ಪ್ರದರ್ಶನ, ಟೀಂ ಇಂಡಿಯಾದಿಂದ ಇವರಿಗೆ ಗೇಟ್‌ಪಾಸ್ ಸಾಧ್ಯತೆ

ಧೋನಿ ಸಲಹೆ ನನ್ನನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ!

ಧೋನಿ ಸಲಹೆ ನನ್ನನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ!

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ಒತ್ತಡಕ್ಕೆ ಒಳಗಾಗದಂತೆ ಸಲಹೆ ನೀಡುತ್ತಿದ್ದರು ಎಂದು ಯುವ ವೇಗಿ ಮುಖೇಶ್ ಚೌಧರಿ ಹೇಳಿದ್ದಾರೆ. ಒತ್ತಡಕ್ಕೆ ಮಣಿಯದೆ ಬೌಲಿಂಗ್ ಮಾಡಿ ರನ್ ಮಾಡಿದರೆ, ವಿಕೆಟ್‌ಗಳು ತಾವಾಗಿಯೇ ಬರುತ್ತವೆ ಎಂದು ಧೋನಿ ಯಾವಾಗಲೂ ಹೇಳುತ್ತಿದ್ದರು ಎಂದು ಚೌಧರಿ ಹೇಳಿದರು.

ದೀಪಕ್ ಚಹಾರ್ ಅನುಪಸ್ಥಿತಿಯಲ್ಲಿ ಅಂತಿಮ ತಂಡದಲ್ಲಿ ಸ್ಥಾನ ಪಡೆದ ಮುಖೇಶ್ ಚೌಧರಿ ಆರಂಭದಲ್ಲಿ ವಿಫಲರಾದರೂ ನಂತರ ಲಯ ಕಂಡುಕೊಂಡರು. ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಚೌಧರಿ ಮೊದಲ ಪಂದ್ಯದಲ್ಲಿ ವಿಫಲರಾದರೂ ನಂತರದ ನಾಲ್ಕು ಪಂದ್ಯಗಳಲ್ಲಿ 4 ವಿಕೆಟ್ ಪಡೆದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಈತ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆರ್‌ಸಿಬಿಗೆ ಚೆನ್ನೈ ಸವಾಲು: ಪ್ರಿವ್ಯೂ, ಪಿಚ್ ರಿಪೋರ್ಟ್, ಹವಾಮಾನ ವರದಿ, ಸಂಭಾವ್ಯ ತಂಡ

ಚೆನ್ನೈ ಪರ ನೆಟ್ ಬೌಲರ್ ಆಗಿದ್ದ ಮುಕೇಶ್ ಚೌಧರಿ

ಚೆನ್ನೈ ಪರ ನೆಟ್ ಬೌಲರ್ ಆಗಿದ್ದ ಮುಕೇಶ್ ಚೌಧರಿ

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಯುವ ವೇಗಿ ಉತ್ತಮ ಬೌಲಿಂಗ್ ಮೂಲಕ ಮಿಂಚಿದರು. ಕಳೆದ ವರ್ಷ ಚೆನ್ನೈ ಪರ ನೆಟ್ ಬೌಲರ್ ಆಗಿ ಸೇವೆ ಸಲ್ಲಿಸಿದ್ದ ಮುಖೇಶ್ ಅವರನ್ನು ಚೆನ್ನೈ ಹರಾಜಿನಲ್ಲಿ ಕನಿಷ್ಠ 20 ಲಕ್ಷ ರೂ.ಗೆ ಖರೀದಿಸಿತ್ತು. ಮಹೇಂದ್ರ ಸಿಂಗ್ ಧೋನಿ ಅವರ ಮಾರ್ಗದರ್ಶನದಲ್ಲಿ ಬೌಲಿಂಗ್ ಮಾಡುತ್ತಿರುವ ಚೌಧರಿ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಧೋನಿ ಸರ್ ನಾಯಕತ್ವದಲ್ಲಿ ಆಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದಿದ್ದಾರೆ.

IPL 2022: ಪ್ಲೇಆಫ್, ಫೈನಲ್‌ನ ವೇಳಾಪಟ್ಟಿ, ಸ್ಥಳ ಅಂತಿಮಗೊಳಿಸಿದ ಬಿಸಿಸಿಐ

ಧೋನಿ ಸರ್ ಮಾರ್ಗದರ್ಶನದಲ್ಲಿ ಆಡುತ್ತಿರುವುದು ಅದೃಷ್ಟ ಎಂದ ಚೌಧರಿ

ಧೋನಿ ಸರ್ ಮಾರ್ಗದರ್ಶನದಲ್ಲಿ ಆಡುತ್ತಿರುವುದು ಅದೃಷ್ಟ ಎಂದ ಚೌಧರಿ

'ಧೋನಿ ಸರ್ ಮಾರ್ಗದರ್ಶನ ನನಗೆ ತುಂಬಾ ಉಪಯುಕ್ತವಾಗಿದೆ. ನಾನು ಪವರ್ ಪ್ಲೇನಲ್ಲಿ ಸಖತ್ತಾಗಿ ಬೌಲಿಂಗ್ ಮಾಡಿ ವಿಕೆಟ್ ಕಬಳಿಸುತ್ತಿದ್ದರೆ ಅದಕ್ಕೆ ಧೋನಿ ಸರ್ ಕಾರಣ. ಬ್ಯಾಟ್ಸ್‌ನ್‌ಗೆಗೆ ಚೆಂಡನ್ನು ಸ್ವಿಂಗ್ ಮಾಡುತ್ತೇನೆ. ಅದರೊಂದಿಗೆ ಒತ್ತಡದಲ್ಲಿರುವ ಬ್ಯಾಟ್ಸ್ ಮನ್ ಗಳು ರನ್ ಮಾಡುವ ಆತಂಕದಲ್ಲಿ ವಿಕೆಟ್ ಉರುಳಿಸುತ್ತಿದ್ದಾರೆ. ಡೆತ್ ಓವರ್‌ಗಳಲ್ಲಿಯೂ ಬೌಲಿಂಗ್ ಮಾಡಲು ಸಿದ್ಧರಾಗಿರಬೇಕು ಎಂದು ಧೋನಿ ಸರ್ ಹೇಳಿದ್ದಾರೆ. ಪವರ್ ಪ್ಲೇನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದೀರಿ.. ಸ್ಲಾಗ್ ಓವರ್‌ಗಳಲ್ಲಿಯೂ ಮಿಂಚು ಎಂದು ಹೇಳಿದರು. ಒತ್ತಡದಲ್ಲಿ ರನ್ನಿಂಗ್‌ ಮಾಡದಿದ್ದರೆ ವಿಕೆಟ್‌ಗಳು ತಾವಾಗಿಯೇ ಬರುತ್ತವೆ ಎಂದು ಹೇಳಿದರು. ನಾನು ಧೋನಿ ಸರ್ ನಾಯಕತ್ವದಲ್ಲಿ ಪ್ರತಿದಿನ ಕಲಿಯುತ್ತಲೇ ಇದ್ದೇನೆ'' ಎಂದು ಮುಕೇಶ್ ಚೌಧರಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

KKR vs RR: ಕೆಕೆಆರ್ ತಂಡದಿಂದ ಅಯ್ಯರ್ ಕೈ ಬಿಟ್ಟ ವಿಚಾರ; ಆತ ಏನೂ ಮಾಡಿಲ್ಲ ಎಂದ ಗವಾಸ್ಕರ್

Shubmam Gill ಔಟ್ ಆದ ನಂತರ ಹೀಗೆ ಮಾಡಿದ್ದೇಕೆ | Oneindia Kannada
''ಪಂದ್ಯಕ್ಕೂ ಮೊದಲೇ ಧೋನಿ ಸರ್‌ಗೆ ನನ್ನ ಯೋಜನೆ ತಿಳಿಸುವೆ''

''ಪಂದ್ಯಕ್ಕೂ ಮೊದಲೇ ಧೋನಿ ಸರ್‌ಗೆ ನನ್ನ ಯೋಜನೆ ತಿಳಿಸುವೆ''

''ಪಂದ್ಯಕ್ಕೂ ಮುನ್ನ ನಾನು ಧೋನಿ ಸರ್ ಬಳಿ ಹೋಗಿ ನನ್ನ ಬೌಲಿಂಗ್ ಯೋಜನೆಗಳನ್ನು ಹೇಳುತ್ತೇನೆ. ಅವನು ಇಷ್ಟಪಟ್ಟರೆ ಅದೇ. ಇಲ್ಲದಿದ್ದರೆ ಅವರು ನನ್ನ ಯೋಜನೆಯಲ್ಲಿನ ತಪ್ಪುಗಳನ್ನು ಸರಿಪಡಿಸುತ್ತಾರೆ. ಪಂದ್ಯದ ನಂತರ ನನ್ನ ಪ್ರದರ್ಶನದ ಬಗ್ಗೆ ಧೋನಿ ಸರ್ ಅವರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಖುಷಿಯಿಂದ ಚೌಧರಿ ಹೇಳಿದ್ದಾರೆ. ಧೋನಿ ಸರ್ ಮಾತ್ರ ಯಾವಾಗಲೂ ಹಾಗೆ ಹೇಳುತ್ತಿರುತ್ತಾರೆ. ಒತ್ತಡಕ್ಕೆ ಒಳಗಾಗಬೇಡಿ, ಒತ್ತಡದಿಂದಾಗಿ ಅನೇಕ ತಪ್ಪುಗಳನ್ನು ಮಾಡುತ್ತೀರಿ ಶಾಂತವಾಗಿರಲು ಮತ್ತು ಬೌಲ್ ಮಾಡಲು ಸಲಹೆ ನೀಡುತ್ತಾರೆ'' ಎಂದಿದ್ದಾರೆ.

ಇದರ ಜೊತೆಗೆ ಜಡೇಜಾ, ಬ್ರಾವೋ ಮತ್ತು ರುತುರಾಜ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಉತ್ತಮ ಅನುಭವ ನೀಡುತ್ತದೆ. ಪ್ಲೇ-ಆಫ್ ತಲುಪುವುದು ನಮ್ಮ ಗುರಿಯಾಗಿದೆ ಎಂದು ಮುಖೇಶ್ ಚೌಧರಿ ಹೇಳಿದರು.

Story first published: Wednesday, May 4, 2022, 10:15 [IST]
Other articles published on May 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+