Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPLಗೆ ಯಾವುದೇ ಟೂರ್ನಮೆಂಟ್ ಸರಿಸಾಟಿಯಿಲ್ಲ ಎಂದು ಒಪ್ಪಿಕೊಂಡ ಇಂಗ್ಲೆಂಡ್ ಮಾಜಿ ನಾಯಕ

Michael vaghan

ಮನೋರಂಜನ್ ಕಾ ಬಾಪ್ ಖ್ಯಾತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕುರಿತಾಗಿ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ಹಾಡಿ ಹೊಗಳಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನ ಕಾಲೆಳೆಯುವಲ್ಲಿ ನಿಸ್ಸೀಮನಾದ ಮೈಕಲ್ ವಾನ್, ಐಪಿಎಲ್‌ ಗ್ರೇಟ್, ಐಪಿಎಲ್ ಮುಂದೆ ಯಾವುದೇ ಟಿ20 ಟೂರ್ನಮೆಂಟ್ ಇಲ್ಲ ಎಂಬುದನ್ನ ಒಪ್ಪಿಕೊಂಡಿದ್ದಾರೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್‌ ನಡುವಿನ ಪಂದ್ಯವು ರೋಚಕ ಅಂತ್ಯಕ್ಕೆ ಸಾಕ್ಷಿಯಾಯಿತು. ಇನ್ನೇನು ಗುಜರಾತ್ ಟೈಟನ್ಸ್ ಸೋತೆ ಬಿಟ್ಟಿತು ಎನ್ನುವಷ್ಟರಲ್ಲಿ ರಾಹುಲ್ ತೆವಾಟಿಯಾ ಕ್ರೀಸ್‌ಗೆ ಬಂದು ಗೆಲುವಿನ ದಿಕ್ಕನ್ನೇ ಬದಲಿಸಿಬಿಟ್ಟ. ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗುಜರಾತ್‌ ಟೈಟನ್ಸ್‌ಗೆ ರೋಚಕ ಗೆಲುವು ತಂದುಕೊಟ್ಟಿದ್ದಾನೆ.

ರಾಹುಲ್ ತೆವಾಟಿಯ ಅಮೋಘ ಆಟಕ್ಕೆ ಮತ್ತು ಅತ್ಯಂತ ಕ್ಲೋಸ್ ಫಿನಿಷಿಂಗ್ ಕಂಡಂತಹ ಈ ಪಂದ್ಯದ ಬಳಿಕ ವಿಶ್ವದ ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಇದ್ರಿಂದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ಹೊರತಾಗಿಲ್ಲ. ಐಪಿಎಲ್ ಮುಂದೆ ಯಾವುದೇ ಟೂರ್ನಮೆಂಟ್ ಸರಿಸಾಟಿಯಲ್ಲಿ ಎಂದು ಹೊಗಳಿದ್ದಾರೆ.

''ಐಪಿಎಲ್ ಮುಂದೆ ಇತರೆ ಯಾವುದೇ ಟೂರ್ನಮೆಂಟ್ ಇಷ್ಟೊಂದು ನಾಟಕೀಯ ಮತ್ತು ಅಂತ್ಯವನ್ನು ತಂದುಕೊಡುವುದಿಲ್ಲ... ಅದು ನಿಜಕ್ಕೂ ಹಾಸ್ಯಾಸ್ಪದವಾಗಿತ್ತು #Tewatia ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ.

ಪಂಜಾಬ್ ಕಿಂಗ್ಸ್‌ ನೀಡಿದ್ದ 190ರನ್ ಗುರಿ ಬೆನ್ನತ್ತಿದ್ದ ಗುಜರಾತ್ ಟೈಟನ್ಸ್ ಪರ ಓಪನರ್ ಶುಭ್ಮನ್ ಗಿಲ್ ಅಮೋಘ ಆಟ ಪ್ರದರ್ಶಿಸುವ ಮೂಲಕ ತಂಡವನ್ನ ಗೆಲುವಿನ ಸಮೀಪ ಕೊಂಡೊಯ್ದರು. ಕೇವಲ 4 ರನ್‌ಗಳಲ್ಲಿ ಶತಕ ಮಿಸ್ ಮಾಡಿಕೊಂಡ ಶುಭ್ಮನ್ ಗಿಲ್ 96(59) ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.

ಸ್ಟಾರ್ ಕ್ರಿಕೆಟಿಗರ ಹಾಟ್ ಪತ್ನಿಯರು,ಅಫೇರ್ಸ್,ಗರ್ಲ್ ಫ್ರೆಂಡ್ಸ್ ಸ್ಟೋರಿ | Oneindia Kannada

ಅಂತಿಮ ಓವರ್‌ನಲ್ಲಿ 6 ಎಸೆತಗಳಲ್ಲಿ 19 ರನ್‌ಗಳ ಅವಶ್ಯಕತೆ ಇತ್ತು. ಪಂಜಾಬ್ ಪರ ಆಲ್‌ರೌಂಡರ್ ಓಡಿಯನ್ ಸ್ಮಿತ್ ಬೌಲಿಂಗ್‌ ಇಳಿದರು. ಹೀಗಿದ್ದ ವೇಳೆ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ರನೌಟ್‌ಗೆ ಬಲಿಯಾದ್ರು. ಈ ವೇಳೆ ಕ್ರೀಸ್‌ಗಿಳಿದ ತೆವಾಟಿಯ ಕೊನೆಯ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸಿ ಗುಜರಾತ್‌ಗೆ ರೋಚಕ ಗೆಲುವು ತಂದುಕೊಟ್ಟರು.

Story first published: Saturday, April 9, 2022, 13:12 [IST]
Other articles published on Apr 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+