Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS VS CSK: ಚೆನ್ನೈ ವಿರುದ್ಧ ಪಂಜಾಬ್‌ಗೆ ರೋಚಕ ಗೆಲುವು, ರಾಯುಡು ಹೋರಾಟ ವ್ಯರ್ಥ

CSK VS PBKS

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 11 ರನ್‌ಗಳ ರೋಚಕ ಗೆಲುವು ದಾಖಲಿಸಿದ್ದು, ಈ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಿದೆ.

ಪಂಜಾಬ್ ನೀಡಿದ್ದ 188 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ಆರಂಭದಲ್ಲೇ ಓಪನರ್ ರಾಬಿನ್ ಉತ್ತಪ್ಪ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಿಚೆಲ್ ಸ್ಯಾಂಟ್ನರ್ ಕೇವಲ 9ರನ್‌ಗೆ ಅರ್ಷ್‌ದೀಪ್‌ಗೆ ವಿಕೆಟ್ ಒಪ್ಪಿಸಿದ್ರು. ಪವರ್‌ ಪ್ಲೇ ಓವರ್‌ಗಳಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು ಹೊರತುಪಡಿಸಿ ಯಾವೊಬ್ಬ ಬ್ಯಾಟ್ಸ್‌ಮನ್ ಆಧಾರವಾಗಲಿಲ್ಲ.

ಮಿಚೆಲ್ ಸ್ಯಾಂಟ್ನರ್ ಬೆನ್ನಲ್ಲೇ ಶಿವಂ ದುಬೆ ಕೇವಲ 8 ರನ್‌ಗೆ ರಿಷಿ ಧವನ್ ಗೆ ವಿಕೆಟ್ ಒಪ್ಪಿಸಿದ್ರೆ, ಉತ್ತಮವಾಗಿ ಆಡ್ತಿದ್ದ ಓಪನರ್ ರುತುರಾಜ್ ಗಾಯಕ್ವಾಡ್‌ಗೆ ಕಗಿಸೊ ರಬಾಡ ಮುಕ್ತಾಯ ಹಾಡಿದ್ರು. ಗಾಯಕ್ವಾಡ್ 30 ರನ್ ಕಲೆಹಾಕುವ ಮೂಲಕ ಉತ್ತಮ ಆರಂಭ ನೀಡಿದ್ರು.

ಟಾಪ್ ಆರ್ಡರ್ ವೈಫಲ್ಯದ ನಡುವೆ ಅಂಬಟಿ ರಾಯುಡು ಸ್ಪೋಟಕ ಆಟವಾಡುವ ಮಿಂಚಿದ್ರು. 39 ಎಸೆತಗಳಲ್ಲಿ 78 ರನ್ ಚಚ್ಚಿದ ರಾಯುಡು ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್ ಮತ್ತು ಏಳು ಅಮೋಘ ಬೌಂಡರಿಗಳಿದ್ದವು. ರಾಯುಡು ವಿಕೆಟ್ ಪತನದ ಬಳಿಕ ಗೆಲುವಿನ ದಡ ತಲುಪಿಸುವಲ್ಲಿ ನಾಯಕ ರವೀಂದ್ರ ಜಡೇಜಾ ವಿಫಲರಾದ್ರು. 16 ಎಸೆತಗಳಲ್ಲಿ 21 ರನ್ ಕಲೆಹಾಕಿದ ಜಡೇಜಾ, 12 ರನ್‌ ಕಲೆಹಾಕಿದ ಧೋನಿ ಕೊನೆಯ ಓವರ್‌ನಲ್ಲಿ ತಂಡವನ್ನ ಗೆಲುವಿನ ಗೆರೆ ದಾಟಿಸುವಲ್ಲಿ ವಿಫಲರಾದ್ರು.

ಪರಿಣಾಮ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್‌ಗಳಷ್ಟೇ ಕಲೆಹಾಕಿತು. ಪಂಜಾಬ್ ಕಿಂಗ್ಸ್‌ 11ರನ್ ಗಳಿಂದ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎಂಟನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿದಿದೆ. ಸಿಎಸ್‌ಕೆ ಒಂಭತ್ತನೇ ಸ್ಥಾನದಲ್ಲೇ ಉಳಿದಿದೆ. ಪ್ಲೇ ಆಫ್‌ ಕನಸು ಬಹುತೇಕ ಮುಗಿದಿದೆ.

ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಪರ ಓಪನರ್ ಶಿಖರ್ ಧವನ್ ಅಮೋಘ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್‌ ಸ್ಪರ್ಧಾತ್ಮಕ ಮೊತ್ತವನ್ನ ಕಲೆಹಾಕಿದೆ. ನಾಯಕ ಮಯಾಂಕ್ ಅಗರ್ವಾಲ್ ಕೇವಲ 18 ರನ್‌ಗಳಿಗೆ ಮಹೀಶ್ ತೀಕ್ಷಣಗೆ ವಿಕೆಟ್ ಒಪ್ಪಿಸುವ ಮೂಲಕ ಎಡವಿದ್ರು. ಆದ್ರೆ ನಂತರ ನಡೆದಿದ್ದು ಧವನ್ ಹಾಗೂ ರಾಜಪಕ್ಷೆ ಬೊಂಬಾಟ್ ಜೊತೆಯಾಟ.

ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಧವನ್ ಹಾಗೂ ರಾಜಪಕ್ಷೆ ಸಿಎಸ್‌ಕೆ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ್ರು. ಶಿಖರ್ ಧವನ್ ತನ್ನ 200ನೇ ಐಪಿಎಲ್ ಪಂದ್ಯದಲ್ಲಿ ಸ್ಫೋಟಕ ಆಟವಾಡುವುದುರ ಜೊತೆಗೆ ತಂಡದ ಸ್ಕೋರನ್ನ ಹೆಚ್ಚಿಸಿದ್ರು.

59 ಎಸೆತಗಳಲ್ಲಿ ಅಜೇಯ 88 ರನ್ ಕಲೆಹಾಕಿದ ಶಿಖರ್ ಧವನ್ ಇನ್ನಿಂಗ್ಸ್‌ನಲ್ಲಿ 9 ಅಮೋಘ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳಿದ್ದವು. ಇನ್ನು ಧವನ್‌ಗೆ ಉತ್ತಮ ಸಾಥ್ ನೀಡಿದ ರಾಜಪಕ್ಷ 32 ಎಸೆತಗಳಲ್ಲಿ 42 ರನ್ ಕಲೆಹಾಕಿ ಉತ್ತಮ ಸಾಥ್ ನೀಡಿದ್ರು. ಈತನ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು.

ಕೊನೆಯಲ್ಲಿ ಜಾನಿ ಬೈಸ್ಟ್ರೋವ್ 3 ಎಸೆತಗಳಲ್ಲಿ 6 ರನ್ ಕಲೆಹಾಕಿ ರನೌಟ್ ಆದ್ರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್‌ 187 ರನ್ ಕಲೆಹಾಕಿದೆ.

ಸಿಎಸ್‌ಕೆ ಪರ ದುಬಾರಿಯಾದ್ರೂ ಸಹ ಡ್ವೇನ್ ಬ್ರಾವೋ 2 ವಿಕೆಟ್ ಪಡೆದ್ರೆ, ಮಹೀಶ್ ತೀಕ್ಷಣ 1 ವಿಕೆಟ್ ಪಡೆಯುವಲ್ಲಿ ಸಫಲರಾದ್ರು.

Story first published: Tuesday, April 26, 2022, 9:44 [IST]
Other articles published on Apr 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+