KKR vs LSG: ಕೆಕೆಆರ್ ವಿರುದ್ಧ ಭರ್ಜರಿಯಾಗಿ ಗೆದ್ದು ಅಗ್ರ ಸ್ಥಾನಕ್ಕೇರಿದ ಲಕ್ನೋ ಸೂಪರ್‌ಜೈಂಟ್ಸ್

ಐಪಿಎಲ್ 2022ರ ಸೀಸನ್‌ನ 52ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್‌ಜೈಂಟ್ಸ್ ಬೃಹತ್ ಗೆಲುವು ದಾಖಲಿಸಿದೆ. ಲಕ್ನೋ ನೀಡಿದ್ದ 177 ರನ್ ಬೆನ್ನಟ್ಟಿದ ಕೆಕೆಆರ್ ಬ್ಯಾಟಿಂಗ್ ವೈಫಲ್ಯದಿಂದಾಗಿ ಕೇವಲ 101 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಕೆ.ಎಲ್ ರಾಹುಲ್ ಟೀಂ ಬರೋಬ್ಬರಿ 75ರನ್‌ಗಳ ಭಾರೀ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಕೆಕೆಆರ್ ತಂಡವು ಆರಂಭದಲ್ಲೇ ಕೆ.ಎಲ್ ರಾಹುಲ್‌ನನ್ನು ಶೂನ್ಯಕ್ಕೆ ರನೌಟ್ ಮಾಡುವ ಆರಂಭಿಕ ಆಘಾತ ನೀಡಿತು. ಆದ್ರೆ ಕ್ವಿಂಟನ್ ಡಿಕಾಕ್ ಮತ್ತು ದೀಪಕ್ ಹೂಡ 2ನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದ್ರು.
ಕ್ವಿಂಟನ್ ಡಿಕಾಕ್ ಅರ್ಧಶತಕ ದಾಖಲಿಸಿ ಔಟಾದ್ರೆ, ದೀಪಕ್ ಹೂಡಾ 41 ರನ್ ಸಿಡಿಸಿ ಮಿಂಚಿದ್ರು. ಕೃನಾಲ್ ಪಾಂಡ್ಯ 25, ಆಯುಷ್ ಬದೋನಿ ಅಜೇಯ 15, ಸ್ಟೊಯ್ನಿಸ್ 28, ಜೇಸನ್ ಹೋಲ್ಡರ್ 13 ರನ್ ಸಿಡಿಸಿ ವಿಕೆಟ್ ತಂಡದ ಸ್ಕೋರ್ ಹೆಚ್ಚಿಸಲು ಸಹಾಯವಾದ್ರು. ಲಕ್ನೋ ಈ ಮೂಲಕ 7 ವಿಕೆಟ್ ಕಳೆದುಕೊಂಡು 176ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಕೆಕೆಆರ್, ಎದುರಾಳಿ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಒಬ್ಬರ ಹಿಂದೆ ಮತ್ತೊಬ್ಬ ಬ್ಯಾಟ್ಸ್‌ಮನ್ ಪೆವಿಲಿಯನ್ ಪರೇಡ್ ನಡೆಸಿದ್ರು. ಆ್ಯಂಡ್ರ್ಯೂ ರಸೆಲ್ 19 ಎಸೆತಗಳಲ್ಲಿ 45 ರನ್, ಸುನಿಲ್ ನರೈನ್ 22 ರನ್ ಗಳಿಸಿದ್ದು ಬಿಟ್ಟರೆ, ಬೇರೆ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ತಂಡಕ್ಕೆ ಆಧಾರವಾಗಲಿಲ್ಲ. ಪರಿಣಾಮ ಕೆಕೆಆರ್ 14.3 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್ ಆಗಿದೆ. ಜೊತೆಗ ಪ್ಲೇ ಆಫ್ ಕನಸು ಬಹುದೂರವಾಗಿದೆ.

ಪಾಯಿಂಟ್ಸ್ ಟೇಬಲ್
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭಾರೀ ಗೆಲುವಿನ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಪಾಯಿಂಟ್ಸ್‌ಗಳ ಜೊತೆಗೆ ಭಾರೀ ನೆಟ್ ರನ್‌ರೇಟ್ +0.703 ದಾಖಲಿಸುವ ಮೂಲಕ ಅಗ್ರಸ್ಥಾನಕ್ಕೇರಿದೆ. ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಮತ್ತು 3 ಪಂದ್ಯಗಳ ಸೋಲಿನ ಮೂಲಕ ನಂಬರ್ ಒನ್ ತಂಡವಾಗಿದೆ.
ಮೊದಲ ಮೂರು ಸ್ಥಾನದಲ್ಲಿ ಲಕ್ನೋ ಬಳಿಕ ಗುಜರಾತ್ ಟೈಟನ್ಸ್ (16) ರಾಜಸ್ತಾನ್ ರಾಯಲ್ಸ್ 14 ಪಾಯಿಂಟ್ಸ್‌ನೊಂದಿಗಿದ್ದು, ಆರ್‌ಸಿಬಿ ನಾಲ್ಕು ಹಾಗೂ ನಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ರನ್‌ರೇಟ್ ಮೂಲಕ ಐದನೇ ಸ್ಥಾನ ಅಲಂಕರಿಸಿದೆ.
ಭಾರತದ ಅತ್ಯಂತ ಮೌಲ್ಯಯುತ ಬ್ಯಾಟರ್ ಈತ: ಕನ್ನಡಿಗನ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದ ಇರ್ಫಾನ್ ಪಠಾಣ್

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 11 ಪಂದ್ಯಗಳಲ್ಲಿ ಬಟ್ಲರ್ 618 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಮೂರು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 451 ರನ್‌ಗಳಿಸಿದ್ದಾರೆ. ನಂತರದಲ್ಲಿ ಶಿಖರ್ ಧವನ್ 381 ರನ್ , ಡೇವಿಡ್ ವಾರ್ನರ್ 356ರನ್‌ಗಳ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಕ್ವಿಂಟನ್ ಡಿಕಾಕ್ 344 ರನ್‌ಗಳ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಹಲ್ ಒಟ್ಟು 22 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ ಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್, ಎರಡನೇ ಸ್ಥಾನದಲ್ಲಿದ್ದು 18 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸಿದ್ದಾರೆ. 18 ವಿಕೆಟ್‌ಗಳ ಮೂಲಕ ಪಂಜಾಬ್ ಕಿಂಗ್ಸ್‌ನ ಕಗಿಸೊ ರಬಾಡ ಮತ್ತು ಎಸ್‌ಆರ್‌ಎಚ್‌ನ ಟಿ. ನಟರಾಜನ್(17) ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. 16 ವಿಕೆಟ್‌ಗಳೊಂದಿಗೆ ಆರ್‌ಸಿಬಿಯ ವಹಿಂದು ಹಸರಂಗ ಐದನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications