For Quick Alerts
ALLOW NOTIFICATIONS  
For Daily Alerts
 

IPL 2022 Playoffs: ಪಂಜಾಬ್ ಕಿಂಗ್ಸ್‌ ಪ್ಲೇ ಆಫ್ ಜೀವಂತ, RCBಗೆ ಎದುರಾಯ್ತು ಸಂಕಷ್ಟ

PBKS VS RCB
Virat Kohli ಔಟ್ ಆದ ಮೇಲೆ ಮಾಡಿದ್ದೇನು | Oneindia Kannada

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಗೆಲುವನ್ನ ದಾಖಲಿಸಿದ್ದು, ಪ್ಲೇ ಆಫ್ ಕನಸನ್ನ ಜೀವಂತವಾಗಿರಿಸಿಕೊಂಡಿದೆ. ಪಂಜಾಬ್ ನೀಡಿದ್ದ 210ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ 155ರನ್‌ಗೆ ಮುಗ್ಗರಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್‌ ಆರ್‌ಸಿಬಿ ಬೌಲರ್‌ಗಳ ಬೆಂಡೆತ್ತಿದ್ರು. ಜಾನಿ ಬೈಸ್ಟ್ರೋವ್ 66, ಲಿವಿಂಗ್‌ಸ್ಟೋನ್‌ 70 ರನ್‌ಗಳ ಸ್ಫೊಟಕ ಹೊಡೆತಗಳಿಂದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209ರನ್ ಕಲೆಹಾಕಿತು.

210ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹೊರತುಪಡಿಸಿ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಆಧಾರವಾಗಲಿಲ್ಲ. ಕೊಹ್ಲಿ 20, ರಜತ್ ಪಾಟೀದಾರ್ 26, ಗ್ಲೆನ್ ಮ್ಯಾಕ್ಸ್‌ವೆಲ್ 35 ರನ್‌ಗಳಿಸಿದ್ದೇ ತಂಡದ ಪರ ಹೆಚ್ಚು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155ರನ್ ಕಲೆಹಾಕಿದರು. ಪಂಜಾಬ್ 54 ರನ್‌ಗಳ ಗೆಲುವು ದಾಖಲಿಸಿತು.

ಪಾಯಿಂಟ್ಸ್ ಟೇಬಲ್

ಪಾಯಿಂಟ್ಸ್ ಟೇಬಲ್

ಈ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್‌ 54ರನ್‌ಗಳ ಗೆಲುವಿನೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿದೆ. 12 ಪಂದ್ಯಗಳಲ್ಲಿ ತಲಾ ಆರು ಗೆಲುವು ಮತ್ತು ಸೋಲನ್ನ ಕಾಣುವ ಮೂಲಕ ಆರನೇ ಸ್ಥಾನಕ್ಕೆ ಏರಿಕೆಗೊಂಡಿದೆ. ಜೊತೆಗೆ ನೆಟ್ ರನ್‌ ರೇಟ್‌ ಹೆಚ್ಚಿದ್ದು + 0.023 ತಲುಪಿದೆ.

ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಬಳಿಕ ಲಕ್ನೋ (16) ರಾಜಸ್ತಾನ್ ರಾಯಲ್ಸ್ 14 ಪಾಯಿಂಟ್ಸ್‌ನೊಂದಿಗಿದ್ದು, ಆರ್‌ಸಿಬಿ ಪಂಜಾಬ್ ವಿರುದ್ಧ ಸೋತರು ನಾಲ್ಕನೇ ಸ್ಥಾನ ಹಾಗೂ ನಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ರನ್‌ರೇಟ್ ಮೂಲಕ ಐದನೇ ಸ್ಥಾನ ಅಲಂಕರಿಸಿದೆ.

ಇಂಗ್ಲೆಂಡ್ ವಿರುದ್ಧದ ಟೂರ್ನಿಗೆ ಚೇತೇಶ್ವರ ಪೂಜಾರ ಆಯ್ಕೆ ಆಗಬೇಕು: ಸುನಿಲ್ ಗವಾಸ್ಕರ್‌

ಆರೆಂಜ್ ಕ್ಯಾಪ್

ಆರೆಂಜ್ ಕ್ಯಾಪ್

ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 12 ಪಂದ್ಯಗಳಲ್ಲಿ ಬಟ್ಲರ್ 625 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಮೂರು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 459 ರನ್‌ಗಳಿಸಿದ್ದಾರೆ. ನಂತರದಲ್ಲಿ ಡೇವಿಡ್‌ ವಾರ್ನರ್ 427 ರನ್, ಫಾಫ್ ಡುಪ್ಲೆಸಿಸ್ 399 ರನ್, ಶುಭಮನ್ ಗಿಲ್ 384 ರನ್ ಕಲೆಹಾಕಿದ್ದಾರೆ.

ಸಾರ್ವಕಾಲಿಕ ಪ್ಲೇಯಿಂಗ್ 11 ದಿಗ್ಗಜರನ್ನ ತಿಳಿಸಿದ ಸಚಿನ್‌: ಧೋನಿ, ದ್ರಾವಿಡ್‌ ಹೆಸರಿಲ್ಲ!

ಪರ್ಪಲ್ ಕ್ಯಾಪ್‌

ಪರ್ಪಲ್ ಕ್ಯಾಪ್‌

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಹಲ್ ಒಟ್ಟು 23 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.

ಇವರ ಜೊತೆಗೆ ಜಂಟಿ ಸ್ಥಾನದಲ್ಲಿ ಆರ್‌ಸಿಬಿ ಸ್ಪಿನ್ನರ್ ವಹಿಂದು ಹಸರಂಗ ಅಷ್ಟೇ ವಿಕೆಟ್ ಪಡೆದಿದ್ದು 23 ವಿಕೆಟ್ ಉರುಳಿಸಿದ್ದಾರೆ. 13 ಪಂದ್ಯಗಳಲ್ಲಿ ಈ ಲಂಕಾ ಸ್ಪಿನ್ನರ್ 23 ವಿಕೆಟ್ ಕಬಳಿಸಿದ್ದಾರೆ.

ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕುಲ್‌ದೀಪ್ ಯಾದವ್ (18), ಪಂಜಾಬ್ ಕಿಂಗ್ಸ್‌ನ ಕಗಿಸೊ ರಬಾಡ (18) ವಿಕೆಟ್‌ಗಳ ಮೂಲಕ ನಂತರದ ಸ್ಥಾನ ಪಡೆದಿದ್ದಾರೆ.

Story first published: Saturday, May 14, 2022, 9:26 [IST]
Other articles published on May 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+