ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾರ್ವಕಾಲಿಕ ಪ್ಲೇಯಿಂಗ್ 11 ದಿಗ್ಗಜರನ್ನ ತಿಳಿಸಿದ ಸಚಿನ್‌: ಧೋನಿ, ದ್ರಾವಿಡ್‌ ಹೆಸರಿಲ್ಲ!

Sachin all time 11

ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್ ದಿಗ್ಗಜರನ್ನ ಹೆಸರಿಸಿದ್ದಾರೆ. ಆಶ್ಚರ್ಯ ಏನಪ್ಪಾ ಅಂದ್ರೆ, ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿ ಆಗಲಿ, ರನ್‌ ಚೇಸಿಂಗ್ ಮಶಿನ್ ವಿರಾಟ್ ಕೊಹ್ಲಿ ಹೆಸರಿಲ್ಲ.

100 ಅಂತರರಾಷ್ಟ್ರೀಯ ಶತಕಗಳ ಸರದಾರ ಸಚಿನ್ ತೆಂಡೂಲ್ಕರ್‌ ರನ್‌ ಪರ್ವತವನ್ನೇ ನಿರ್ಮಿಸಿರುವ ಬ್ಯಾಟ್ಸ್‌ಮನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 15,921 ರನ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 18,426 ರನ್‌ ಕಲೆಹಾಕಿದ್ದಾರೆ. ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳ ಜೊತೆಗೆ 201 ವಿಕೆಟ್‌ಗಳು ಸಹ ಸೇರಿವೆ.

ಸಚಿನ್‌ರ ದಾಖಲೆ ಯಾರಾದ್ರೂ ಮುರಿಯಲು ಸಾಧ್ಯವಿರುವ ಏಕೈಕ ಕ್ರಿಕೆಟಿಗ ಅಂದ್ರೆ ಅದು ವಿರಾಟ್ ಕೊಹ್ಲಿ ಮಾತ್ರ. ಹೀಗಿರುವ ಕೊಹ್ಲಿ, ನಾಯಕ ಧೋನಿ ಹೆಸರು ಇವರ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್‌ನ ಹೆಸರಲ್ಲಿಲ್ಲ.

ಧೋನಿ ಬದಲು ಗಿಲ್‌ಕ್ರಿಸ್ಟ್‌ಗೆ ಸ್ಥಾನ

ಧೋನಿ ಬದಲು ಗಿಲ್‌ಕ್ರಿಸ್ಟ್‌ಗೆ ಸ್ಥಾನ

ಸಚಿನ್‌ನ ಕ್ರಿಕೆಟ್ ಕೆರಿಯರ್‌ನ ಬಹುದೊಡ್ಡ ಆಸೆಯಾಗಿದ್ದ ಐಸಿಸಿ ವಿಶ್ವಕಪ್ ಗೆಲುವನ್ನ ನನಸಾಗಿದ ಕ್ಯಾಪ್ಟನ್ ಧೋನಿ ಹೆಸರನ್ನು ಸಚಿನ್ ಕೈ ಬಿಟ್ಟಿದ್ದಾರೆ. ಇವರ ಬದಲು ಆಸ್ಟ್ರೇಲಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಂ ಗಿಲ್‌ಕ್ರಿಸ್ಟ್‌ ಹೆಸರನ್ನು ಸಚಿನ್ ಪ್ರಸ್ತಾಪಿಸಿದ್ದಾರೆ. ಗಿಲ್‌ಕ್ರಿಸ್ಟ್‌ ವೈಟ್ ಬಾಲ್ ಕ್ರಿಕೆಟ್ ಅಷ್ಟೇ ಅಲ್ಲದೆ ರೆಡ್ ಬಾಲ್ ಕ್ರಿಕೆಟ್‌ನಲ್ಲೂ ಅಬ್ಬರಿಸಿದ ವಿಕೆಟ್ ಕೀಪರ್ ಆಗಿದ್ದು, ಸಚಿನ್‌ ಫೇವರಿಟ್ ಅವರೇ ಎಂದು ಇದ್ರಿಂದ ತಿಳಿದುಬರುತ್ತದೆ.

IPL 2022: ಈತ ಶೀಘ್ರದಲ್ಲೇ ಟೀಂ ಇಂಡಿಯಾ ಪರ 3 ಫಾರ್ಮೆಟ್ ಆಟಗಾರನಾಗುತ್ತಾನೆ: ರೋಹಿತ್ ಶರ್ಮಾ

ರಾಹುಲ್‌ ದ್ರಾವಿಡ್‌ರನ್ನ ಮರೆತ್ರಾ ತೆಂಡೂಲ್ಕರ್!

ರಾಹುಲ್‌ ದ್ರಾವಿಡ್‌ರನ್ನ ಮರೆತ್ರಾ ತೆಂಡೂಲ್ಕರ್!

ಟೀಂ ಇಂಡಿಯಾದ ಗೋಡೆ ಖ್ಯಾತಿ ರಾಹುಲ್‌ ದ್ರಾವಿಡ್‌ ಟೆಸ್ಟ್‌ ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ಗೆ ಸರಿಸಮಾನವಾಗಿ ಬ್ಯಾಟ್ ಬೀಸಿದ ಅಗ್ರಗಣ್ಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಂತೂ ದ್ರಾವಿಡ್‌ಗಿಂತ ಮತ್ತೊಬ್ಬ ಪ್ಲೇಯರ್ ಇಲ್ಲ ಎಂಬಂತೆ ಆಟವಾಡುತ್ತಿದ್ರು. ಆದ್ರೆ ಸಚಿನ್ ತೆಂಡೂಲ್ಕರ್‌ ಎಂಬ ಮೇರು ಪರ್ವತದಡಿಯ ನೆರಳಿನಲ್ಲಿ ದ್ರಾವಿಡ್‌ನಂತಹ ಅತ್ಯಮೂಲ್ಯ ದಿಗ್ಗಜ ಆಟಗಾರನು ಸ್ವಲ್ಪ ಮರೆಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಹೀಗಿರುವಾಗ ಸಚಿನ್‌ ತೆಂಡೂಲ್ಕರ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ರಾಹುಲ್‌ಗೆ ಸ್ಥಾನ ನೀಡದೇ ಇರುವುದು ದ್ರಾವಿಡ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

ತನ್ನಿಬ್ಬರು ಬೆಸ್ಟ್ ಫ್ರೆಂಡ್ಸ್‌ರನ್ನ ಬಿಡಲಿಲ್ಲ ತೆಂಡೂಲ್ಕರ್

ತನ್ನಿಬ್ಬರು ಬೆಸ್ಟ್ ಫ್ರೆಂಡ್ಸ್‌ರನ್ನ ಬಿಡಲಿಲ್ಲ ತೆಂಡೂಲ್ಕರ್

ಕ್ರಿಕೆಟ್‌ ವಲಯದಲ್ಲಿ ಅದ್ರಲ್ಲೂ ವಿದೇಶಿ ತಂಡದಲ್ಲಿ ಸಚಿನ್‌ ನೆಚ್ಚಿನ ಆಟಗಾರ ಹಾಗೂ ಸ್ನೇಹಿತರಲ್ಲಿ ಪ್ರಮುಖರಾದ ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಸಚಿನ್ ತೆಂಡೂಲ್ಕರ್‌ರ ಬೆಸ್ಟ್ 11 ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇವರ ಜೊತೆಗೆ ಲೆಜೆಂಡರಿ ಆಟಗಾರ ವಿವಿಯನ್ ರಿಚರ್ಡ್ಸ್‌ ಸಚಿನ್ ಲಿಸ್ಟ್‌ನಲ್ಲಿದ್ದಾರೆ. ಇನ್ನು ತನ್ನ ಅತ್ಯಂತ ನಿಕಟ ಸ್ನೇಹಿತ ಹಾಗೂ ಆಟಗಾರ ಭಾರತದ ದಾದಾ ಖ್ಯಾತಿಯ ಸೌರವ್ ಗಂಗೂಲಿ ಹೆಸರನ್ನ ಸಚಿನ್ ಕೈ ಬಿಟ್ಟಿಲ್ಲ. ಜೊತೆಗೆ ತನ್ನ ಜೊತೆಗಿನ ಓಪನಿಂಗ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ರನ್ನು ಸಚಿನ್ ಹೆಸರಿಸಿದ್ದಾರೆ.

ಟೀಮ್ ಇಂಡಿಯಾಗಿದು ಕಹಿ ಸುದ್ದಿ: ಕಳವಳ ಮೂಡಿಸಿದೆ ಈ 5 ಸ್ಟಾರ್ ಆಟಗಾರರ ಐಪಿಎಲ್ ಫಾರ್ಮ್!

ಸಚಿನ್‌ ತೆಂಡೂಲ್ಕರ್‌ಗೆ ಕಾಡಿದ್ದ ಮೆಗ್ರಾಥ್‌ಗೆ ಬೌಲಿಂಗ್ ಸಾರಥ್ಯ

ಸಚಿನ್‌ ತೆಂಡೂಲ್ಕರ್‌ಗೆ ಕಾಡಿದ್ದ ಮೆಗ್ರಾಥ್‌ಗೆ ಬೌಲಿಂಗ್ ಸಾರಥ್ಯ

ಆಸ್ಟ್ರೇಲಿಯಾದ ಆಲ್‌ಟೈಂ ಲೆಜೆಂಡ್ ಬೌಲರ್ ಗ್ಲೆನ್ ಮೆಗ್ರಾಥ್‌ಗೆ ಸಚಿನ್ ತಮ್ಮ ಸಾರ್ವಕಾಲಿಕ ಶ್ರೇಷ್ಟ 11 ಆಟಗಾರರ ಬೌಲಿಂಗ್ ಸಾರಥ್ಯ ವಹಿಸಿದ್ದಾರೆ. ಇನ್ನು ಇದೇ ವರ್ಷ ವಿಧಿವಶರಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಗಿದ್ದು, ಮುತ್ತಯ್ಯ ಮುರಳೀಧರನ್‌ಗೆ ಅವಕಾಶ ನೀಡಿಲ್ಲ. ಶೇನ್‌ ವಾರ್ನ್‌ ಜೊತೆಗೆ ಆಫ್‌ ಸ್ಪಿನ್ನರ್ ಹರ್ಭಜನ್‌ ಸಿಂಗ್‌ರನ್ನ ಆಯ್ಕೆ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್‌ನ ಸಾರ್ವಕಾಲಿಕ 11 ದಿಗ್ಗಜ ಆಟಗಾರರು

ಸಚಿನ್ ತೆಂಡೂಲ್ಕರ್‌ನ ಸಾರ್ವಕಾಲಿಕ 11 ದಿಗ್ಗಜ ಆಟಗಾರರು

ವೀರೇಂದ್ರ ಸೆಹ್ವಾಗ್, ಸುನಿಲ್ ಗವಾಸ್ಕರ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಜಾಕ್ವೆಸ್ ಕಾಲಿಸ್, ಸೌರವ್ ಗಂಗೂಲಿ, ಆಡಂ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ವಾಸಿಂ ಅಕ್ರಮ್, ಹರ್ಭಜನ್ ಸಿಂಗ್ ಮತ್ತು ಗ್ಲೆನ್ ಮೆಗ್ರಾತ್

Story first published: Saturday, May 14, 2022, 9:18 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X