Punjab Kings Players for IPL 2022: ಪಂಜಾಬ್ ಕಿಂಗ್ಸ್ ಸಂಭಾವ್ಯ ಸ್ಕ್ವಾಡ್ ಇಲ್ಲಿದೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದ್ದು, ಇನ್ನೊಂದೇ ದಿನ ಬಾಕಿ ಉಳಿದಿದೆ. ಹೀಗಾಗಿ ಪ್ರತಿ ಫ್ರಾಂಚೈಸಿಯು ತನ್ನ ತಂತ್ರವನ್ನ ವೇಗಗೊಳಿಸಿದ್ದು, ಯಾವ ಆಟಗಾರನ ಮೇಲೆ ಬಿಡ್ ಮಾಡಬೇಕು, ಎಷ್ಟು ಖರ್ಚು ಮಾಡಬೇಕು ಎಂಬ ನಿಖರವಾದ ಲೆಕ್ಕಾಚಾರ ಹಾಕಿಕೊಳ್ಳುತ್ತಾರೆ.
ಯಾವುದೇ ಆಟಗಾರನು ತಂಡಕ್ಕೆ ಬೇಕೆ ಬೇಕು ಎಂದು ನಿರ್ಧರಿಸಿಬಿಟ್ಟರೆ, ಆತನನ್ನ ಕೊಂಡುಕೊಳ್ಳುವ ಸಾಮರ್ಥ್ಯ ಇರುವವರೆಗೂ ಫ್ರಾಂಚೈಸಿಗಳು ಸಾಮಾನ್ಯವಾಗಿ ಬಿಡ್ ಮಾಡುತ್ತವೆ. ಈ ಬಾರಿ 10 ಫ್ರಾಂಚೈಸಿಗಳು 590 ಆಟಗಾರರ ಮೇಲೆ ಬಿಡ್ ಮಾಡಲಿವೆ. ಇವರಲ್ಲಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಾಗಿದ್ದಾರೆ.
ಇದೇ ವಾರ ಶನಿವಾರ ಮತ್ತು ಭಾನುವಾರ ನಡೆಯಲಿರುವ ಆಟಗಾರರ ಹರಾಜಿನಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದ ಪಂಜಾಬ್ ಕಿಂಗ್ಸ್ ಕೂಡ ಆ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಚುರುಕುಗೊಳಿಸಿದೆ. ಅಲ್ಲದೆ ಹರಾಜಿನಲ್ಲಿ ಖರೀದಿಸಲು ಬಯಸುವ ಆಟಗಾರರ ಪಟ್ಟಿಯನ್ನು ತಂಡವು ಸಿದ್ಧಪಡಿಸಿದೆ.

ಪಂಜಾಬ್ ಕಿಂಗ್ಸ್ ಪರ ರೀಟೈನ್ ಆದ ಪ್ಲೇಯರ್ಸ್
ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಹಿಂದಿನ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡಿತ್ತು. ಪ್ರಮುಖ ಆಟಗಾರ ಕೆ.ಎಲ್ ರಾಹುಲ್‌ರನ್ನ ತಂಡ ಕಳೆದುಕೊಂಡಿದ್ದು, ಉಳಿದ ಎಲ್ಲಾ ಆಟಗಾರರನ್ನ ಹರಾಜಿಗೆ ಬಿಡಲಾಗಿದೆ. ತಂಡ ಉಳಿಸಿಕೊಂಡಿರುವ ಇಬ್ಬರು ಆಟಗಾರರಲ್ಲಿ ಒಬ್ಬರು ಮಯಾಂಕಾ ಅಗರ್ವಾಲ್ ಮತ್ತು ಇನ್ನೊಬ್ಬರು ಬೌಲರ್ ಅರ್ಷದೀಪ್ ಸಿಂಗ್. ಇವರಿಬ್ಬರಿಗೆ ಪಂಜಾಬ್ 16 ಕೋಟಿ ರೂ. ಖರ್ಚು ಮಾಡಿದ್ದು, ಇದರೊಂದಿಗೆ ಫ್ರಾಂಚೈಸಿ ಬಳಿ ಇನ್ನೂ 74 ಕೋಟಿ ರೂ. ಬಾಕಿ ಇದೆ. ಈ ಮೂಲಕ ಅತ್ಯಧಿಕ ಮೊತ್ತದೊಂದಿಗೆ ಹರಾಜಿಗೆ ಮುಂದಾಗಿರುವ ಪಂಜಾಬ್, ಪ್ರಮುಖ ಆಟಗಾರರನ್ನು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

ಶ್ರೇಯಸ್ ಅಯ್ಯರ್‌ಗೆ ಟಾರ್ಗೆಟ್ ಮಾಡಲಿರುವ ಪಂಜಾಬ್
ಪಂಜಾಬ್ ಕಿಂಗ್ಸ್ ಈ ಬಾರಿ ಶ್ರೇಯಸ್ ಅಯ್ಯರ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಹಾಗಾಗಿಯೇ ಹರಾಜಿನಲ್ಲಿ ಅಯ್ಯರ್ ಭಾರೀ ಬೆಲೆಗೆ ಖರೀದಿಯಾಗಲಿದ್ದಾರೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡುತ್ತಿರುವ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮತ್ತು ಟೀಂ ಇಂಡಿಯಾ ಆಲ್‌ರೌಂಡರ್ ದೀಪಕ್ ಚಾಹರ್ ಅವರನ್ನು ತಂಡವು ಹರಾಜಿನಲ್ಲಿ ಖರೀದಿಸಲು ಸಿದ್ಧವಾಗಿದೆ.
ಭಾರತ vs ವಿಂಡೀಸ್: ಆರಂಭಿಕನಾಗಿ ರಿಷಭ್ ಕಣಕ್ಕಿಳಿದ ಕಾರಣವೇನು?: ನಾಯಕ ರೋಹಿತ್ ಸ್ಪಷ್ಟನೆ

ಓಪನರ್ ಡೇವಿಡ್ ವಾರ್ನರ್‌ಗೆ ಬಿಡ್
ಈ ಬಾರಿಯ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಓಪನರ್ ಡೇವಿಡ್ ವಾರ್ನರ್ ಅವರನ್ನು ಖರೀದಿಸಲು ಪಂಜಾಬ್ ಸಜ್ಜಾಗಿದೆ. ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರ ವಾರ್ನರ್ ಅವರನ್ನು ತಂಡವು ಭಾರಿ ವೆಚ್ಚದಲ್ಲಿ ಖರೀದಿಸಲಿದೆ. ಮಯಾಂಕ್ ಅಗರ್ವಾಲ್ ಡೇವಿಡ್ ವಾರ್ನರ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಮಿಡ್‌ಫೀಲ್ಡರ್‌ನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಖರೀದಿಸಲಿದ್ದಾರೆ ಎಂದು ವರದಿಯಾಗಿದೆ. ಕಾರ್ತಿಕ್ ಉತ್ತಮ ವಿಕೆಟ್ ಕೀಪರ್ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಇದರೊಂದಿಗೆ ಪಂಜಾಬ್ ಅವರನ್ನು ವಿಕೆಟ್ ಕೀಪರ್ ಆಗಿ ಮತ್ತು ಮಿಡಲ್ ಆರ್ಡರ್ ಬ್ಯಾಟ್ಸ್ ಮನ್ ಆಗಿ ಬಳಸಿಕೊಳ್ಳಲು ಮುಂದಾಗಿದೆ.
RCB Probable Squad For IPL 2022: ಹರಾಜಿಗೂ ಮುನ್ನ ಆರ್‌ಸಿಬಿ ಸಂಭಾವ್ಯ ಸ್ಕ್ವಾಡ್ ಹೀಗಿದೆ

ಟ್ರೆಂಟ್ ಬೋಲ್ಟ್, ಶಮಿ ಮೇಲಿದೆ ಕಣ್ಣು
ನ್ಯೂಜಿಲೆಂಡ್ ಸ್ಟಾರ್ ವೇಗಿ ಟ್ರೆಂಟ್ ಬೋಲ್ಟ್ ಮತ್ತು ಟೀಂ ಇಂಡಿಯಾ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ಮೇಲೆ ಪಂಜಾಬ್ ಕಿಂಗ್ಸ್ ಬಿಡ್ ಮಾಡಲಿದೆ. ಅವರನ್ನು ಲೀಗ್‌ನಲ್ಲಿ ಪ್ರಮುಖ ಬೌಲರ್‌ಗಳಾಗಿ ಬಳಸಿಕೊಳ್ಳಲಾಗುವುದು ಎಂಬ ಮಾಹಿತಿ ಇದೆ. ಇವರೊಂದಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಲಾಗುವುದು. ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಸ್ಪಿನ್ನರ್ ರಾಹುಲ್ ಚಾಹರ್ ಅವರನ್ನು ತಂಡ ಖರೀದಿಸಲಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಕೃನಾಲ್ ಪಾಂಡ್ಯ ಅವರನ್ನು ಈ ಬಾರಿಯ ಹರಾಜಿನಲ್ಲಿ ಪಂಜಾಬ್ ಬಿಡ್ ಮಾಡಲಿದೆ.

ಕಳೆದ ಸೀಸನ್‌ನಲ್ಲಿ ಆಡಿದ ಕೆಲ ಆಟಗಾರರನ್ನ ಪಡೆಯಲು ಯತ್ನ
ಪಂಜಾಬ್ ಕಿಂಗ್ಸ್ ಹೊಸ ಆಟಗಾರರಿಗೆ ಗಾಳ ಹಾಕುವುದರ ಜೊತೆಗೆ ಕಳೆದ ಋತುವಿನಲ್ಲಿ ಪಂಜಾಬ್ ಪರ ಆಡಿದ ಕೆಲವರನ್ನು ತಂಡ ಹರಾಜಿನಲ್ಲಿ ವಾಪಸ್ ಪಡೆಯಲಿದೆ. ಈ ಪಟ್ಟಿಯಲ್ಲಿ ಶಮಿ, ಶಾರುಖ್ ಖಾನ್, ದೀಪಕ್ ಹೂಡಾ, ನಿಕೊಲಸ್ ಪೂರನ್, ಸರ್ಫರಾಜ್ ಖಾನ್, ಜೋರ್ಡಾನ್, ಏಡನ್ ಮಕ್ರಾಮ್ ಇದ್ದಾರೆ. ಪಂಜಾಬ್ ಕಿಂಗ್ಸ್ ಒಟ್ಟು 12 ಭಾರತೀಯ ಆಟಗಾರರು ಮತ್ತು ಏಳು ವಿದೇಶಿ ಆಟಗಾರರನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ.

ಪಂಜಾಬ್ ಕಿಂಗ್ಸ್ ಸಂಭಾವ್ಯ ಸ್ಕ್ವಾಡ್
ಮಯಾಂಕ್ ಅಗರ್ವಾಲ್, ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್ (ನಾಯಕ), ದಿನೇಶ್ ಕಾರ್ತಿಕ್, ನಿಕೊಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಜೇಸನ್ ಹೋಲ್ಡರ್, ದೀಪಕ್ ಚಹಾರ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಏಡನ್ ಮಕ್ರಾಮ್, ಟ್ರೆಂಟ್ ಬೌಲ್ಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications