RCB Probable Squad For IPL 2022: ಹರಾಜಿಗೂ ಮುನ್ನ ಆರ್‌ಸಿಬಿ ಸಂಭಾವ್ಯ ಸ್ಕ್ವಾಡ್ ಹೀಗಿದೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿನ ದಿನ ಹತ್ತಿವಾಗುತ್ತಿದ್ದಂತೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂತ್ರಗಳನ್ನು ವೇಗಗೊಳಿಸುತ್ತಿವೆ. ಯಾವ ಆಟಗಾರನ ಮೇಲೆ ಬಿಡ್ ಮಾಡಬೇಕು, ಎಷ್ಟು ಖರ್ಚು ಮಾಡಬೇಕು ಎಂಬ ನಿಖರವಾದ ಲೆಕ್ಕಾಚಾರ ಹಾಕಿಕೊಳ್ಳುತ್ತಾರೆ.
ಯಾವುದೇ ಆಟಗಾರನು ತಂಡಕ್ಕೆ ಬೇಕೆ ಬೇಕು ಎಂದು ನಿರ್ಧರಿಸಿಬಿಟ್ಟರೆ, ಆತನನ್ನ ಕೊಂಡುಕೊಳ್ಳುವ ಸಾಮರ್ಥ್ಯ ಇರುವವರೆಗೂ ಫ್ರಾಂಚೈಸಿಗಳು ಬಿಡ್ ಮಾಡುತ್ತವೆ. ಈ ಬಾರಿ 10 ಫ್ರಾಂಚೈಸಿಗಳು 590 ಆಟಗಾರರ ಮೇಲೆ ಬಿಡ್ ಮಾಡಲಿವೆ. ಇವರಲ್ಲಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಇದುವರೆಗೂ ಎರಡು ಬಾರಿ ಫೈನಲ್ ತಲುಪಿತ್ತೇ ವಿನಃ ಒಂದು ಬಾರಿಯು ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ಈಗಾಗಲೇ ನಾಯಕತ್ವದಿಂದ ಕೆಳಗಿಳಿದಿದ್ದು ಹೊಸ ನಾಯಕ ಹುಡುಕಾಟದಲ್ಲಿದೆ. ಈಗಾಗಲೇ ಆರ್‌ಸಿಬಿ ವಿರಾಟ್ ಕೊಹ್ಲಿ (15 ರೂ.), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ ರೂ.) ಮತ್ತು ಮೊಹಮ್ಮದ್ ಸಿರಾಜ್ (7 ಕೋಟಿ ರೂ.) ಅವರನ್ನು ಮಾತ್ರ ರೀಟೈನ್ ಮಾಡಿಕೊಂಡಿದ್ದು, 57 ಕೋಟಿ ರೂಪಾಯಿ ಪರ್ಸ್ ಬಾಕಿ ಉಳಿದಿದೆ.

ಹೊಸ ನಾಯಕನ ಹುಡುಕಾಟದಲ್ಲಿರುವ ಆರ್‌ಸಿಬಿ
ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಣೆ, ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿರುವುದು ಆರ್‌ಸಿಬಿಗೆ ಹೊಸ ಸಮಸ್ಯೆ ತಂದೊಡ್ಡಿದೆ. ಎಬಿಡಿಯಂತಹ ಸ್ಟಾರ್ ಆಟಗಾರನ ಜೊತೆಗೆ ನಾಯಕನನ್ನೂ ಆಯ್ಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೆಗಾ ಹರಾಜಿನಲ್ಲಿ ಡೇವಿಡ್ ವಾರ್ನರ್ ಜೊತೆಗೆ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರಿಗೆ ಬಿಡ್ ಮಾಡಲು ಆರ್‌ಸಿಬಿ ಆಶಿಸುತ್ತಿದೆ. ಐಪಿಎಲ್ 2022 ಸೀಸನ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಯಾವೆಲ್ಲಾ ಆಟಗಾರನ ಮೇಲೆ ಬಿಡ್ ಮಾಡಬಹುದು ಎಂಬುದನ್ನ ಈ ಕೆಳಗೆ ನೋಡಿ.

ಡೇವಿಡ್ ವಾರ್ನರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಸ್ಥಾನಕ್ಕಾಗಿ ಆರ್‌ಸಿಬಿ ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಮೇಲೆ ಕಣ್ಣಿಟ್ಟಿದೆ. ಆರ್‌ಸಿಬಿ ಕೂಡ ಡೇವಿಡ್ ವಾರ್ನರ್‌ಗೆ ಭಾರೀ ಬೆಲೆ ತೆರಲು ಸಿದ್ಧವಾಗಿದೆ. ವಾರ್ನರ್ ಅವರನ್ನು ತೆಗೆದುಕೊಂಡರೆ ನಾಯಕತ್ವದ ಕೊರತೆಯನ್ನೂ ನೀಗಿಸಬಹುದು ಎಂದು ಫ್ರಾಂಚೈಸಿ ಭಾವಿಸಿದೆ. ಶಿಖರ್ ಧವನ್‌ಗಾಗಿ ಕಠಿಣ ಪ್ರಯತ್ನ ಮಾಡಲು ಬಯಸಿದ್ದಾರೆ.
ವಾರ್ನರ್ ಸಿಗದಿದ್ದರೆ, ಜಾನಿ ಬೇರ್‌ಸ್ಟ್ರೋ ತೆಗೆದುಕೊಳ್ಳಲು ಆರ್‌ಸಿಬಿ ಬಯಸಬಹುದು. ವಿರಾಟ್ ಕೊಹ್ಲಿ ಆರಂಭಿಕರಾಗಿ ಮುಂದುವರಿಯಲು ಬಯಸಿದರೆ ಅವರು ಮತ್ತೊಬ್ಬ ಆರಂಭಿಕ ಆಟಗಾರನನ್ನು ತೆಗೆದುಕೊಳ್ಳದಿರಬಹುದು. ಯುವ ಆಟಗಾರರನ್ನು ಬ್ಯಾಕಪ್ ಆಯ್ಕೆಗಳಾಗಿ ಆಯ್ಕೆ ಮಾಡಲು ಅವಕಾಶವಿದೆ.
IPL 2022: ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದ್ರಾಬಾದ್‌ನ ಸಂಭಾವ್ಯ ತಂಡ ಇಲ್ಲಿದೆ

ಶ್ರೇಯಸ್ ಅಯ್ಯರ್‌ಗೆ 20 ಕೋಟಿ ಹಾಕಲು ಸಿದ್ಧ?
ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ಮೊದಲ ಗುರಿಯಾಗಿ ಶ್ರೇಯಸ್ ಅಯ್ಯರ್ ಅವರನ್ನು ಹೆಸರಿಸಿದೆ. ಹರಾಜಿನಲ್ಲಿ ಡೇವಿಡ್ ವಾರ್ನರ್ ಸಿಗದೇ ಇದ್ದರೆ.. 20 ಕೋಟಿ ರೂ. ಬೇಕಾದ್ರೂ ಹಾಕಲು ಆರ್‌ಸಿಬಿ ಸಿದ್ಧವಾಗಿದೆಯಂತೆ. ಅಯ್ಯರ್ ನಾಯಕರಾಗಿ ಸೇವೆ ಸಲ್ಲಿಸುತ್ತಾರೆ ಎಂದು ತಂಡವು ಆಶಿಸುತ್ತಿದೆ. ಆದರೆ ಅಯ್ಯರ್‌ಗೆ ತೀವ್ರ ಪೈಪೋಟಿ ಎದುರಾಗಿ ಸಿಗದೇ ಇದ್ದರೆ, ಇಶಾನ್ ಕಿಶನ್ ಮೇಲೆ ಆರ್‌ಸಿಬಿ ಬಿಡ್ ಮಾಡಬಹುದು. ಜೊತೆಗೆ ಇದು ಡೇವಿಡ್ ಮಲಾನ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ಗುರಿಯಾಗಿಸಲು ಬಯಸುತ್ತದೆ.
ಐಪಿಎಲ್ 2022: ಮೆಗಾ ಹರಾಜಿಗೂ ಮುನ್ನ ನೀವು ತಿಳಿದಿರಲೇಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿದೆ!

ಪ್ಯಾಟ್ ಕಮ್ಮಿನ್ಸ್, ಕಗಿಸೊ ರಬಾಡ ಮೇಲೆ ಕಣ್ಣಿಟ್ಟಿದೆ!
ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಭಾರತದ ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮೊಹಮ್ಮದ್ ಶಮಿ, ನಟರಾಜನ್ ಮತ್ತು ಇಂಗ್ಲೆಂಡ್‌ನ ಕ್ರಿಸ್ ಜೋರ್ಡಾನ್ ಅವರನ್ನು ಆರ್‌ಸಿಬಿ ಟಾರ್ಗೆಟ್ ಮಾಡಲಿದೆ. ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಹೆಚ್ಚು ಖರ್ಚು ಮಾಡಲು ಆಶಿಸುತ್ತಿದ್ದಾರೆ. ಆದಾಗ್ಯೂ, ಕಮ್ಮಿನ್ಸ್ ಮತ್ತು ರಬಾಡ ಅವರಂತಹ ಆಟಗಾರರು 15 ಕೋಟಿಗೂ ಅಧಿಕ ಸಾಮರ್ಥ್ಯ ಹೊಂದಿರುವ ಸಾಧ್ಯತೆಯಿರುವುದರಿಂದ ಮೊಹಮ್ಮದ್ ಶಮಿಯಂತಹ ಭಾರತೀಯ ವೇಗಿಯು ಆರ್‌ಸಿಬಿಗೆ ಸೇರುವ ಅವಕಾಶವಿದೆ.
ಇನ್ನು ಟಿ. ನಟರಾಜನ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಖರೀದಿಸುವ ಅವಕಾಶವು ಸಹ ಇದೆ. ಮಧ್ಯಮ ಬೆಲೆಗೆ ಯುಜ್ವೇಂದ್ರ ಚಹಾಲ್ ಅವರನ್ನು ಸ್ಪಿನ್ನರ್ ಆಗಿ ಮರಳಿ ಪಡೆಯಲು ಆರ್‌ಸಿಬಿ ಪ್ರಯತ್ನಿಸುತ್ತದೆ. ಅಲ್ಲದೆ ರಾಹುಲ್ ಚಹಾರ್, ವಾಷಿಂಗ್ಟನ್ ಸುಂದರ್ ಮತ್ತು ನಾಥನ್ ಲ್ಯಾನ್ ಅವರಂತಹ ಸ್ಪಿನ್ನರ್‌ಗಳನ್ನು ಬ್ಯಾಕಪ್ ಆಯ್ಕೆಗಳಾಗಿ ಹೊಂದಿದೆ.

2022ರ ಆರ್‌ಸಿಬಿ ಸಂಭವನೀಯ ಸ್ಕ್ವಾಡ್ ಇಲ್ಲಿದೆ
ಡೇವಿಡ್ ವಾರ್ನರ್ , ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಸ್ ಭರತ್, ಇಶಾನ್ ಕಿಶನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್, ವನಿಂದು ಹಸರಂಗಾ, ಪ್ಯಾಟ್ ಕಮಿನ್ಸ್ / ಕಗಿಸೊ ರಬಾಡ / ಮಾರ್ಕ್ ವುಡ್, ಖಲೀಲ್ ಅಹ್ಮದ್, ರಾಹುಲ್ ಚಹಾರ್, , ಪ್ರಸಿದ್ಧ್ ಕೃಷ್ಣ, ಜೆ. ಸುಚಿತ್, ಅಶ್ವಿನ್ ಹೆಬ್ಬರ್, ತನ್ಮಯ್ ಅಗರ್ವಾಲ್, ತಿಲಕ್ ವರ್ಮಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications