IPL 2022: ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದ್ರಾಬಾದ್‌ನ ಸಂಭಾವ್ಯ ತಂಡ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀನಸ್‌ನ ಆಟಗಾರರು ಹರಾಜು ಪ್ರಕ್ರಿಯೆಗೆ ಬೆಂಗಳೂರಿನಲ್ಲಿ ವೇದಿಕೆ ಸಿದ್ಧಗೊಂಡಿದೆ. ಇದೇ ತಿಂಗಳು 12 ಮತ್ತು 13ರಂದು ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ಆಟಗಾರರ ಆಯ್ಕೆ ಪಟ್ಟಿಯಲ್ಲಿ ಒಟ್ಟು 590 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಮೊದಲು ಹರಾಜು ರಿಜಿಸ್ಟರ್‌ನಲ್ಲಿರುವ 1,214 ಹೆಸರುಗಳಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರಿದ್ದರು. ಆದ್ರೀಗ ಇದನ್ನ 590ಕ್ಕೆ ಕಡಿತಗೊಳಿಸಲಾಗಿದೆ. ಇದರಲ್ಲಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಾಗಿದ್ದಾರೆ.
ಈ ಹರಾಜು ಪ್ರಕ್ರಿಯೆಗೂ ಮುನ್ನ ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಯಾವೆಲ್ಲಾ ಆಟಗಾರರನ್ನ ಒಳಗೊಳ್ಳಬಹುದು ಮತ್ತು ಅವರ ಸ್ಕ್ವಾಡ್ ಹೇಗಿದೆ ಎಂಬ ಸಂಭಾವ್ಯ ತಂಡವನ್ನ ಇಲ್ಲಿ ನೀಡಲಾಗಿದೆ. ಅದಕ್ಕೂ ಮುನ್ನ ಎಸ್‌ಆರ್‌ಎಚ್ ರೀಟೈನ್ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಮಾಹಿತಿ ತಿಳಿದುಕೊಳ್ಳಿ

ಮೂವರು ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ SRH
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಯುವ ಆಟಗಾರ ಅಬ್ದುಲ್ ಸಮದ್ , ಯುವ ವೇಗಿ ಉಮ್ರಾನ್ ಮಲ್ಲಿಕ್‌ರನ್ನ ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿದೆ. ವಿಲಿಯಮ್ಸನ್‌ಗೆ 14 ಕೋಟಿ, ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲ್ಲಿಕ್‌ಗೆ ತಲಾ 4 ಕೋಟಿ ರೂಪಾಯಿ ನೀಡಿದೆ.
ಇನ್ನು ಕಳೆದ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಎಸ್‌ಆರ್‌ಎಚ್ ಹೊಸ ಸಿಬ್ಬಂದಿಗಳನ್ನ ಘೋಷಿಸಿದೆ
ಬ್ರಿಯಾನ್ ಲಾರಾ : ಬ್ಯಾಟಿಂಗ್ ಕೋಚ್
ಟಾಮ್ ಮೂಡಿ - ಮುಖ್ಯ ಕೋಚ್
ಸೈಮನ್ ಕ್ಯಾಟಿಚ್ - ಸಹಾಯಕ ಕೋಚ್
ಮುರಳೀಧರನ್ - ಸ್ಪಿನ್ ಬೌಲಿಂಗ್ ಕೋಚ್
ಡೇಲ್ ಸ್ಟೇಯ್ನ್ - ಪೇಸ್ ಬೌಲಿಂಗ್ ಕೋಚ್
ಹೇಮಂಗ್ ಬದಾನಿ - ಫೀಲ್ಡಿಂಗ್ ಕೋಚ್ ಮತ್ತು ಸ್ಕೌಟ್

ದೇವದತ್ ಪಡಿಕ್ಕಲ್- ಜಾನಿ ಬೈಸ್ಟ್ರೋವ್ ಓಪನರ್!
ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಸ್ಥಾನಕ್ಕಾಗಿ ಹಿರಿಯ ಆರಂಭಿಕ ಶಿಖರ್ ಧವನ್ ಮತ್ತು ಯುವ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮೇಲೆ ಕಣ್ಣಿಟ್ಟಿದೆ. ವಿದೇಶಿ ಆಟಗಾರರಲ್ಲಿ ಮಾಜಿ ಆಟಗಾರ ಬೈರ್‌ಸ್ಟೋವ್ ಜೊತೆಗೆ ಜೇಸನ್ ರಾಯ್ ಅವರನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವೃದ್ಧಿಮಾನ್ ಸಹಾ ಅವರನ್ನು ಬ್ಯಾಕಪ್ ಆಯ್ಕೆಗೆ ಡೌನ್‌ಗ್ರೇಡ್ ಮಾಡಲಾಗಿದೆ. ಆದಾಗ್ಯೂ, ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋವ್ ಭಾರಿ ಬೆಲೆ ಪಡೆಯುವ ಅವಕಾಶವಿದೆ. ಈ ಇಬ್ಬರಲ್ಲಿ ಒಬ್ಬರು ಸನ್‌ರೈಸರ್ಸ್ ಪಾಲಾಗುವ ಸಾಧ್ಯತೆ ಇದೆ. ಆದರೆ, ಇವರಿಬ್ಬರಿಗಾಗಿ ಸನ್ ರೈಸರ್ಸ್ 11 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುವ ಸಾಧ್ಯತೆ ಕಡಿಮೆ. ದೇವದತ್ ಪಡಿಕ್ಕಲ್ ಅವರನ್ನು ಸನ್‌ರೈಸರ್ಸ್‌ಗೆ ಮಧ್ಯಮ ಬೆಲೆಗೆ ಪಡೆಯಬಹುದು.
ಅಂಡರ್-19 ವಿಶ್ವಕಪ್: ಸತತ ನಾಲ್ಕನೇ ಬಾರಿಗೆ ಫೈನಲ್ ತಲುಪಿದ ಭಾರತ, ಸೆಮೀಸ್‌ನಲ್ಲಿ ಆಸ್ಟ್ರೇಲಿಯಾಗೆ ಸೋಲು

ಮಧ್ಯಮ ಕ್ರಮಾಂಕದಲ್ಲಿ ರಾಯುಡು, ರೈನಾ, ಸ್ಮಿತ್
ಸನ್ ರೈಸರ್ಸ್ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು, ಸುರೇಶ್ ರೈನಾ, ಸ್ಟೀವ್ ಸ್ಮಿತ್ ಮತ್ತು ಡೇವಿಡ್ ಮಲಾನ್ ಅವರನ್ನು ಗುರಿಯಾಗಿಸಿದೆ. ಈ ಹಿನ್ನಲೆಯಲ್ಲಿ ವಿದೇಶಿ ಕೋಟಾದ ಕೇನ್ ವಿಲಿಯಮ್ಸನ್ ಭಾರತೀಯ ಆಟಗಾರರನ್ನು ಎದುರಿಸಲು ಸಿದ್ಧರಾಗಿದ್ದಾರೆ. ವೃತ್ತಿ ಜೀವನದ ಕೊನೆಯ ಹಂತದಲ್ಲಿರುವ ಅಂಬಟಿ ರಾಯುಡುಗೆ ಮಧ್ಯಮ ಬೆಲೆಗೆ ಸನ್ ರೈಸರ್ಸ್ ಕೈ ಹಿಡಿಯುವ ಸಾಧ್ಯತೆ ಇದೆ.
ತೆಲುಗು ಮೂಲದ ಕ್ರಿಕೆಟಿಗ ರಾಯುಡುಗಾಗಿ ಹೈದರಾಬಾದ್ 8 ಕೋಟಿ ರೂಪಾಯಿ ನೀಡಲು ಸಿದ್ಧವಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಮೂವರು ಸ್ಪಿನ್ನರ್‌ಗಳ ಮೇಲೆ SRH ಕಣ್ಣಿಟ್ಟಿದೆ
ರಶೀದ್ ಖಾನ್ ಅವರಂತಹ ವಿಶ್ವದರ್ಜೆಯ ಸ್ಪಿನ್ನರ್ ತಂಡದಿಂದ ಹೊರನಡೆದ ಮೇಲೆ ಸನ್‌ರೈಸರ್ಸ್ ಹೈದ್ರಾಬಾದ್ ಪ್ರಮುಖ ಸ್ಪಿನ್ನರ್ ಅನ್ನು ಎದುರು ನೋಡುತ್ತಿದೆ. ದೇಶೀಯ ಆಟಗಾರರನ್ನ ಸರಿದೂಗಿಸಲು ಕುಲ್‌ದೀಪ್ ಯಾದವ್, ಯುಜವೇಂದ್ರ ಚಹಾಲ್ ಮತ್ತು ಇಂಗ್ಲೆಂಡ್‌ನ ಆದಿಲ್ ರಶೀದ್ ಎಸ್‌ಆರ್‌ಎಚ್ ಗುರಿಯಾಗಿದೆ. ಅದ್ರಲ್ಲೂ ಯುಜವೇಂದ್ರ ಚಹಾಲ್‌ರನ್ನ ಹೈದ್ರಾಬಾದ್ ಎದುರು ನೋಡುತ್ತಿದೆ. ಈಗಾಗಲೇ ಚಹಾಲ್ ಬಯಸಿರುವಂತೆ 8ರಿಂದ 10 ಕೋಟಿ ರೂಪಾಯಿಗೆ ದೇಶೀಯ ಸ್ಪಿನ್ನರ್‌ಗಳ ಖರೀದಿ ಸಾಧ್ಯತೆಯಿದೆ.

ಬಲಿಷ್ಠ ಬೌಲಿಂಗ್ ಪಡೆ ಕಟ್ಟುವ ಯೋಜನೆ
ವೇಗಿಗಳಲ್ಲಿ ಈಗಾಗಲೇ ಉಮ್ರಾನ್ ಮಲಿಕ್ ರೂಪದಲ್ಲಿ ದೇಶೀಯ ತಾರೆ ಲಭ್ಯವಿದ್ದರೂ, ಅನುಭವಿ ಬೌಲರ್‌ಗಳನ್ನು ನೇಮಿಸಿಕೊಳ್ಳಲು ಎಸ್‌ಆರ್‌ಎಚ್ ಬಯಸಿದೆ. ಅವೇಶ್ ಖಾನ್, ಕಗಿಸೊ ರಬಾಡ, ಟ್ರೆಂಟ್ ಬೌಲ್ಟ್, ಪ್ಯಾಟ್ ಕಮಿನ್ಸ್ ಮತ್ತು ಹರ್ಷಲ್ ಪಟೇಲ್ ಅವರ ಮೇಲೂ ಬಿಡ್ ಮಾಡಲಿದೆ. ರಬಾಡ ಮತ್ತು ಕಮ್ಮಿನ್ಸ್ 15 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸಂಗ್ರಹಿಸುವ ಸಾಧ್ಯತೆಯಿದ್ದು, ಹೀಗಾಗಿ ಅವೇಶ್ ಖಾನ್ ಮತ್ತು ಹರ್ಷಲ್ ಪಟೇಲ್ ಅವರನ್ನು ಸನ್ ರೈಸರ್ಸ್ ಕಣಕ್ಕಿಳಿಸುವ ಸಾಧ್ಯತೆಯಿದೆ. ಮೊಹಮ್ಮದ್ ಶಮಿಯನ್ನು 8 ಕೋಟಿಗೆ ಸನ್ ರೈಸರ್ಸ್ ತೆಗೆದುಕೊಳ್ಳುವ ಅವಕಾಶವೂ ಇದೆ.

ಸನ್‌ರೈಸರ್ಸ್ ಹೈದ್ರಾಬಾದ್ ಸಂಭಾವ್ಯ ತಂಡ
ದೇವದತ್ ಪಡಿಕ್ಕಲ್, ಜಾನಿ ಬೈರ್‌ಸ್ಟೋವ್, ಕೇನ್ ವಿಲಿಯಮ್ಸನ್ (ನಾಯಕ), ಅಂಬಟಿ ರಾಯುಡು, ಸುರೇಶ್ ರೈನಾ, ಅಬ್ದುಲ್ ಸಮದ್, ಫ್ಯಾಬಿಯನ್ ಅಲೆನ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್, ಉಮ್ರಾನ್ ಮಲಿಕ್, ಶಬಾಜ್ ಅಹ್ಮದ್, ಧವಳ್ ಕುಲಕರ್ಣಿ, ಅಪರಾಜಿತ್ ಸೋಲಂಕಿ, ಶಾರ್ದೂಲ್ ಠಾಕೂರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications