
ಆಸ್ಟ್ರೇಲಿಯಾಗೆ ಆಘಾತ ನೀಡಿದ ಭಾರತದ ಬೌಲರ್ಸ್
ಭಾರತ ನೀಡಿದ 291 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಎರಡನೇ ಓವರ್‌ನಲ್ಲೇ ಓಪನರ್ ಟೀಗ್ ವಿಲ್ಲಿ ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ ಕ್ಯಾಂಪ್ಬೆಲ್ ಕೆಲ್ಲವೇ ಮತ್ತು ಕೋರಿ ಮಿಲ್ಲರ್ ಅರ್ಧಶತಕದ ಜೊತೆಯಾಟವಾಡಿದರು. ಈ ವೇಳೆಯಲ್ಲಿ ಎಡಗೈ ಸ್ಪಿನ್ನರ್ ರಘುವಂಶಿ ಈ ಜೋಡಿಯನ್ನ ಬೇರ್ಪಡಿಸುವಲ್ಲಿ ಯಶಸ್ವಿಯಾದ್ರು. ಇದ್ರ ಬೆನ್ನಲ್ಲೇ ಕ್ಯಾಂಪ್ಬೆಲ್ ಕೆಲ್ಲವೇ ಸ್ಪಿನ್ನರ್ ವಿಕ್ಕಿ ಓಸ್ವಾಲ್‌ಗೆ ವಿಕೆಟ್ ಒಪ್ಪಿಸಿದ್ರು.
ನಾಯಕ ಕ್ಯಾಂಪ್ಬೆಲ್ ಕೇವಲ 3ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರೆ, ನಿವೇಥನ್ ರಾಧಾಕೃಷ್ಣನ್ ಕೂಡ ನಿಶಾಂತ್ ಸಿಂಧುಗೆ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ಸತತ ಎರಡು ವಿಕೆಟ್ ಪಡೆಯುವಲ್ಲಿ ವಿಕ್ಕಿ ಓಸ್ವಾಲ್ ಯಶಸ್ವಿಯಾದ್ರು. ಭಾರತದ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ 41.5 ಓವರ್‌ಗಳಲ್ಲಿ 194 ರನ್‌ಗಳಿಗೆ ಪತನಗೊಂಡಿತು.

ಭಾರತದ ಪರ ಮಿಂಚಿದ ಸ್ಪಿನ್ನರ್ಸ್
ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಸ್ಪಿನ್ನರ್‌ಗಳಾದ ವಿಕ್ಕಿ ಓಸ್ವಾಲ್ ಮತ್ತು ನಿಶಾಂತ್ ಸಿಂಧು ಒಟ್ಟಾರೆ ಐದು ವಿಕೆಟ್‌ಗಳನ್ನ ಕಬಳಿಸುವಲ್ಲಿ ಯಶಸ್ವಿಯಾದ್ರು. ಎಡಗೈ ಮಧ್ಯಮ ವೇಗಿ ರವಿ ಕುಮಾರ್ 2 ವಿಕೆಟ್ ಪಡೆದ್ರೆ, ಕೌಶಾಲ್ ತಂಬೆ ಮತ್ತು ರಘುವಂಶಿ ತಲಾ ಒಂದು ವಿಕೆಟ್ ಪಡೆದರು.
ಅನುಷ್ಕಾ ಬೆಂಗಳೂರಿನ ಹುಡುಗಿ ಎಂಬುದು ತುಂಬಾ ಜನಕ್ಕೆ ತಿಳಿದಿಲ್ಲ ಎಂದ ವಿರಾಟ್ ಕೊಹ್ಲಿ

ಭಾರತದ ಪರ ಶತಕ ಸಿಡಿಸಿ ಮಿಂಚಿದ ನಾಯಕ ಯಶ್ ಧುಲ್
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ತಂಡದ ಮೊತ್ತ 37 ರನ್‌ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರು ಕೂಡ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿಕೊಂಡಿದ್ದರು. ಅಂಕ್ರಿಶ್ ರಘುವಂಶಿ 6 ರನ್‌ಗಳಿಸಿ ಔಟಾದರೆ ಹರ್ನೂರ್ ಸಿಂಗ್ 16 ರನ್‌ಗಳ ಕೊಡುಗೆಯನ್ನು ನೀಡಿದರು. ಈ ವೇಳೆ ನಾಯಕ ಯಶ್ ಧುಲ್ ಮತ್ತು ಶೇಕ್ ರಶೀದ್ ಭಾರತ ತಂಡವನ್ನ ಸುಭದ್ರ ಸ್ಥಿತಿಗೆ ತಲುಪಿಸುವಲ್ಲಿ ಯಶಸ್ವಿಯಾದ್ರು.
ನಾಯಕನ ಜವಾಬ್ದಾರಿಯುತ ಆಟವಾಡಿದ ಯಶ್ ಧುಲ್ 110 ಎಸೆತಗಳಲ್ಲಿ 110 ರನ್ ಕಲೆಹಾಕುವ ಮೂಲಕ ಭರ್ಜರಿ ಶತಕ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು.
ಮತ್ತೊಂದೆಡೆ ನಾಯಕನಿಗೆ ಉತ್ತಮ ಸಾಥ್ ನೀಡಿದ ಶೇಕ್ ರಶೀದ್ 108 ಎಸೆತಗಳಲ್ಲಿ 94ರನ್ ಕಲೆಹಾಕಿ ಶತಕ ವಂಚಿತರಾದರು. ಇವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.
ಮೆಗಾ ಹರಾಜು: ಕಳೆದ ಬಾರಿ ವಿಫಲರಾಗಿದ್ದ ಶ್ರೀಶಾಂತ್ ಈ ಬಾರಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ್ರಾ?

ಮೂರನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟ
ಭಾರತ ಗೆಲುವಿಗೆ ಬಹು ಮುಖ್ಯ ಕಾರಣವಾಗಿದ್ದು ಮೂರನೇ ವಿಕೆಟ್‌ನ ಅತ್ಯಮೂಲ್ಯ ಜೊತೆಯಾಟವಾಗಿದೆ. ಮೊದಲೆರಡು ವಿಕೆಟ್‌ಗಳನ್ನ ಬಹುಬೇಗ ಕಳೆದುಕೊಂಡಿದ್ದ ಭಾರತಕ್ಕೆ ನಾಯಕ ಯಶ್ ಧುಲ್ ಮತ್ತು ಶೇಕರ್ ರಶೀದ್ ಆಧಾರವಾದ್ರು. ಮೂರನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟದ ಮೂಲಕ ಭಾರತವನ್ನ 300 ಗಡಿಯತ್ತ ಕೊಂಡೊಯ್ದರು.
ತಂಡದ ಮೊತ್ತ 241 ರನ್‌ಗಳಾಗುವಷ್ಟರಲ್ಲಿ ಈ ಜೋಡಿ ಬೇರ್ಪಟ್ಟಿತು. ಇದಾದ ಬಳಿಕ ಅಂತಿಮ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಬಾನಾ ನಾಲ್ಕು ಎಸೆತಗಳನ್ನು ಎದುರಿಸಿ 20 ರನ್ ದೋಚುವ ಮೂಲಕ ತಂಡದ ಮೊತ್ತ 290 ತಲುಪಲು ಪ್ರಮುಖ ಕಾರಣವಾದ್ರು.
ಭಾರತ ನೀಡಿದ 291 ರನ್ ಗುರಿಯನ್ನ ಬೆನ್ನತ್ತುವಲ್ಲಿ ವಿಫಲಗೊಂಡ ಆಸ್ಟ್ರೇಲಿಯಾ ತವರಿನತ್ತ ಮುಖಮಾಡಿದ್ರೆ, ಭಾರತ ಸತತ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶ ಕಂಡಿರುವುದು ವಿಶೇಷ.
1988ರಲ್ಲಿ ಪ್ರಾರಂಭಗೊಂಡ ಅಂಡರ್-19 ವಿಶ್ವಕಪ್‌ನ ಪ್ರಸ್ತುತ ಟೂರ್ನಮೆಂಟ್ ಸೇರಿ 14 ಬಾರಿಗೆ ಆಯೋಜನೆಗೊಂಡಿದೆ. ಇದರಲ್ಲಿ ಭಾರತವು ನಾಲ್ಕು ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಇದೀಗ ಐದನೇ ಬಾರಿಗೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಫೆಬ್ರವರಿ 5ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ಯುವಕರ ತಂಡ ಕನಸನ್ನ ನನಸು ಮಾಡುತ್ತಾ ಕಾದುನೋಡಬೇಕಿದೆ.


Click it and Unblock the Notifications












