Delhi Capitals Players for IPL 2022: ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಸ್ಕ್ವಾಡ್ ಹೀಗಿದೆ

ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದ್ದು, ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು ತಮ್ಮ ಅಂತಿಮ ಆಲೋಚನೆಯೊಂದಿಗೆ ಇಲ್ಲಿಗೆ ಬರಲಿವೆ.
ಇದುವರೆಗೂ ಟ್ರೋಫಿ ಗೆಲ್ಲಲು ವಿಫಲಗೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ ಈ ಬಾರಿ ಪ್ರಶಸ್ತಿ ಬರ ನೀಗಿಸಲು ಬಲಿಷ್ಠ ತಂಡ ಕಟ್ಟುವ ಯೋಜನೆ ಹಾಕಿಕೊಂಡಿದೆ. ರಿಕಿ ಪಾಂಟಿಂಗ್ ಕೋಚ್ ಅಡಿಯಲ್ಲಿ ಡೆಲ್ಲಿ ಪ್ರಮುಖ ಆಟಗಾರರ ಮೇಲೆ ಗುರಿ ನೆಟ್ಟಿದೆ.
ಈ ಬಾರಿ ಹರಾಜಿನ ಪಟ್ಟಿಯಲ್ಲಿ 590 ಆಟಗಾರರಿದ್ದು, ಇವರಲ್ಲಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಾಗಿದ್ದಾರೆ.

ಡೆಲ್ಲಿ ಪರ ನಾಲ್ವರು ಆಟಗಾರರು ರೀಟೈನ್
ಡೆಲ್ಲಿ ಕ್ಯಾಪಿಟಲ್ಸ್ ಕಳೆದ ವರ್ಷದ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಷಭ್ ಪಂತ್ ಮೊದಲ ಆಯ್ಕೆಯಾಗಿದ್ದು 16 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದಾರೆ. ಪೃಥ್ವಿ ಶಾ 12 ಕೋಟಿ ರೂಪಾಯಿ, ಅಕ್ಷರ್ ಪಟೇಲ್ 8 ಕೋಟಿ ರೂಪಾಯಿ ಹಾಗೂ ಅನ್ರಿಕ್ ನೊರ್ಕಿಯಾ 6 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ರೀಟೈನ್ ಆದ ನಾಲ್ವರು ಆಟಗಾರರು. ಇದರೊಂದಿಗೆ ಇನ್ನೂ 51 ಕೋಟಿ ರೂ. ಪರ್ಸ್ ಬ್ಯಾಲೆನ್ಸ್‌ನೊಂದಿಗೆ ಹರಾಜು ಪ್ರವೇಶಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡರನ್ನ ಡೆಲ್ಲಿ ರೀಟೈನ್ ಮಾಡಿಕೊಳ್ಳದೇ ಇರುವುದು ಆಶ್ಚರ್ಯ ಮೂಡಿಸಿದೆ. ಇನ್ನು ಶ್ರೇಯಸ್ ಅಯ್ಯರ್ ನಾಯಕತ್ವದ ಹಿನ್ನೆಲೆಯಲ್ಲಿ ತಂಡದಿಂದ ಹೊರಬಂದು ಹರಾಜಿಗೆ ಇಳಿದಿದ್ದಾರೆ.

ಓಪನರ್‌ಗಳಾಗಿ ಪೃಥ್ವಿ ಶಾ ಮತ್ತು ಧವನ್ ಮುಂದುವರಿಕೆ?
ಕಳೆದ ಋತುವಿನಲ್ಲಿ ಆರಂಭಿಕರಾದ ಶಿಖರ್ ಧವನ್ ಮತ್ತು ಪೃಥ್ವಿರಾಜ್ ಈ ಬಾರಿಯೂ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಶಾ ಅವರನ್ನು ಈಗಾಗಲೇ ಉಳಿಸಿಕೊಂಡಿದ್ದು, ದೆಹಲಿ ಧವನ್‌ನನ್ನು ಹರಾಜಿಗೆ ಇಟ್ಟಿದೆ. ಆದರೆ, ಹರಾಜಿನಲ್ಲಿ ಧವನ್ ಅವರನ್ನು ಕಡಿಮೆ ಬೆಲೆಗೆ ಖರೀದಿಸಲು ಡೆಲ್ಲಿ ಮುಂದಾಗಿದೆ. ಏಕೆಂದರೆ ದೆಹಲಿ ತಂಡದಲ್ಲಿ ಧವನ್ ಸ್ಥಿರ ಪ್ರದರ್ಶನ ನೀಡುವ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಭಾರತ ಅಂಡರ್-19 ತಂಡದ ಆರಂಭಿಕ ಆಟಗಾರ ರಘುವಂಶಿ ಅವರನ್ನು ಹರಾಜಿನಲ್ಲಿ ಖರೀದಿಸಲಾಗುವುದು ಎಂದು ವರದಿಯಾಗಿದೆ.
IPL Auction 2022: ಪಂಜಾಬ್ ಕಿಂಗ್ಸ್ ಸಂಭಾವ್ಯ ಸ್ಕ್ವಾಡ್ ಇಲ್ಲಿದೆ

ಭಾರತ ಅಂಡರ್-19 ಆಟಗಾರರ ಮೇಲೆ ಗುರಿ ಇಟ್ಟಿದೆ
ಈ ಬಾರಿಯ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕತ್ವವು ಟೀಂ ಇಂಡಿಯಾ ಅಂಡರ್-19 ತಂಡದ ಆಟಗಾರರನ್ನು ಟಾರ್ಗೆಟ್ ಮಾಡಿದೆ ಎಂದು ತಿಳಿದು ಬಂದಿದೆ. ಭಾರತ ಅಂಡರ್-19 ತಂಡದಿಂದ ಸಾಧ್ಯವಾದಷ್ಟು ಆಟಗಾರರನ್ನು ಖರೀದಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಅಂಡರ್-19 ತಂಡದ ಹಾಲಿ ನಾಯಕ ಯಶ್ ಧುಲ್ ಅವರನ್ನು ಎಷ್ಟೇ ಬೆಲೆ ತೆತ್ತಾದರೂ ಹರಾಜಿನಲ್ಲಿ ಖರೀದಿಸಲು ದೆಹಲಿ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ವಿಶ್ವಕಪ್ ಕೂಡ ಗೆದ್ದಿದ್ದ ಭಾರತದ ಅಂಡರ್-19 ನಾಯಕ ಉನ್ಮುಕ್ತ್ ಚಾಂದ್ ಅವರನ್ನು ದೆಹಲಿ ತನ್ನದಾಗಿಸಿಕೊಂಡಿತ್ತು. ಅಲ್ಲದೆ ಅಂಡರ್ 19 ಟೀಂ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಸತತವಾಗಿ ಮಿಂಚುತ್ತಿರುವ ಸ್ಪಿನ್ನರ್ ವಿಕ್ಕಿ ಒಸ್ತ್ವಾಲ್ ಹಾಗೂ ವೇಗಿ ರವಿಕುಮಾರ್ ಅವರ ಮೇಲೂ ದೆಹಲಿ ಕಣ್ಣಿಟ್ಟಿದೆ.

ಕಗಿಸೊ ರಬಾಡನನ್ನ ಪಡೆಯುವ ಪ್ರಯತ್ನ
ಕಳೆದ ಋತುವಿನಲ್ಲಿ ದೆಹಲಿ ಋತುವಿನಲ್ಲಿ ಸತತವಾಗಿ ಮಿಂಚಿದ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಜೊತೆಗೆ ವೆಸ್ಟ್ ಇಂಡೀಸ್ ಆಲ್ ರೌಂಡರ್ ಶಿಮ್ರೊನ್ ಹೆಟ್ಮೆಯರ್ ಕೂಡ ಹರಾಜಿಗೆ ಮರಳಲಿದ್ದಾರೆ. ಈ ಹಿಂದೆ ದೆಹಲಿಯನ್ನು ಪ್ರತಿನಿಧಿಸಿದ್ದ ಕೆಲವರನ್ನೂ ಮರು ಪಡೆಯುವ ಸಾಧ್ಯತೆ ಹೆಚ್ಚಿದೆ. ಇವರೊಂದಿಗೆ ಇತ್ತೀಚೆಗಷ್ಟೇ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಪ್ರಸಿದ್ಧ ಕೃಷ್ಣ ಹಾಗೂ ಅವೇಶ್ ಖಾನ್ ಅವರನ್ನೂ ಪಡೆಯಲು ಡೆಲ್ಲಿ ರಣತಂತ್ರ ರೂಪಿಸಿದೆ.

ನ್ಯೂಜಿಲೆಂಡ್ ಪ್ಲೇಯರ್ ಡೆವೊನ್ ಕಾನ್ವೆ ಮೇಲೆ ಕಣ್ಣಿಟ್ಟಿದೆ
ನ್ಯೂಜಿಲೆಂಡ್ ಕ್ರಿಕೆಟಿಗ ಡೆವೊನ್ ಕಾನ್ವೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದಾಗಿನಿಂದ ಸತತವಾಗಿ ಮಿಂಚುತ್ತಿದ್ದಾರೆ. ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಕಿವೀಸ್‌ನ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಇದರೊಂದಿಗೆ ಈ ಬಾರಿಯ ಹರಾಜಿನಲ್ಲಿ ಕಾನ್ವೇಗೆ ತೀವ್ರ ಪೈಪೋಟಿ ಏರ್ಪಡಬಹುದು. ಆದಾಗ್ಯೂ, ಡೆಲ್ಲಿ ಕ್ಯಾಪಿಟಲ್ಸ್ ಯಾವುದೇ ಬೆಲೆಯಲ್ಲಿ ಈತನನ್ನ ಖರೀದಿಸಲು ನಿರ್ಧರಿಸಿದೆ. ಟೀಂ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಹಾಗೂ ಮುಂಬೈ ಇಂಡಿಯನ್ಸ್‌ನ ಪ್ರಮುಖ ಸ್ಪಿನ್ನರ್ ರಾಹುಲ್ ಚಹಾರ್ ಅವರನ್ನು ಹರಾಜಿನಲ್ಲಿ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಬಯಸುತ್ತಿದೆ ಎಂದು ತಿಳಿದುಬಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಸ್ಕ್ವಾಡ್
ಪೃಥ್ವಿ ಶಾ, ಶಿಖರ್ ಧವನ್, ಅಂಗೀರ್ ರಘುವಂಶಿ, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಶಿಮ್ರೊನ್ ಹೆಟ್ಮೆಯರ್, ಸ್ಟೀವನ್ ಸ್ಮಿತ್, ಯಶ್ ಧುಲ್, ಡೆವೊನ್ ಕಾನ್ವೆ, ದೀಪಕ್ ಚಾಹರ್, ರವಿ, ಕುಮಾರ್, ಮೊಹಮ್ಮದ್ ಶಮಿ, ಸ್ಯಾಮ್ ಬಿಲ್ಲಿಂಗ್ಸ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications