RCB VS CSK: ಪಂದ್ಯದ ವೇಳೆ ಮೈದಾನದಲ್ಲೇ ಪ್ರೇಮ ನಿವೇದನೆ ಮಾಡಿಕೊಂಡ ಆರ್‌ಸಿಬಿ ಅಭಿಮಾನಿ ಜೋಡಿ

ಪುಣೆಯ ಎಂಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಸಿಎಸ್ ಕೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಕೊಹ್ಲಿ 30, ಡುಪ್ಲೆಸಿಸ್ 38 ರನ್‌ಗಳ ನೆರವಿನಿಂದ ಅರ್ಧಶತಕದ ಜೊತೆಯಾಟ ಸಾಧಿಸಿತು.
ಆದ್ರೆ ನಂತರದಲ್ಲಿ ಮ್ಯಾಕ್ಸ್‌ವೆಲ್ ಬಹುಬೇಗನೆ ಔಟಾದ್ರೂ ಸಹ ಮಹಿಪಾಲ್ ಲೊಮ್ರಾರ್ 42, ದಿನೇಶ್ ಕಾರ್ತಿಕ್ ಅಜೇಯ 26 ರನ್‌ಗಳ ನೆರವನಿಂದ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು.
ಈ ಪಂದ್ಯಕ್ಕೆ ಸಿಎಸ್‌ಕೆ ಅಭಿಮಾನಿಗಳಷ್ಟೇ ಮೈದಾನದಲ್ಲಿ ಆರ್‌ಸಿಬಿ ಅಭಿಮಾನಿಗಳಿದ್ದರು. ಈ ವೇಳೆಯಲ್ಲಿ ಆರ್‌ಸಿಬಿ ಅಭಿಮಾನಿ ಜೋಡಿಯು ಮೈದಾನದಲ್ಲೇ ತನ್ನ ಪ್ರೀತಿಯನ್ನ ವ್ಯಕ್ತಪಡಿಸಿದ ವಿಶೇಷ ಘಟನೆ ನಿನ್ನೆಯ ಪಂದ್ಯದ ವೇಳೆಯಲ್ಲಿ ನಡೆದಿದೆ.
ಮಂಡಿಯೂರಿ ಕುಳಿತು ಹುಡುಗನಿಗೆ ಪ್ರಪೋಸ್ ಮಾಡಿದ ಪ್ರೇಯಸಿ
ಆರ್‌ಸಿಬಿಯ 174ರನ್ ಗುರಿ ಬೆನತ್ತಿದ ಸಿಎಸ್‌ಕೆ ಮೂರು ವಿಕೆಟ್ ಕಳೆದುಕೊಂಡು 79ರನ್ ಕಲೆಹಾಕಿತು. 10.5ನೇ ಓವರ್‌ನ ಹಸರಂಗ ಬೌಲಿಂಗ್‌ನಲ್ಲಿ ಗ್ಯಾಲರಿಯಲ್ಲಿ ಇದ್ದ ಜೋಡಿಯು ಪ್ರೇಮ ನಿವೇದನೆ ಮಾಡಿಕೊಂಡಿದೆ. ಆದ್ರೆ ಇದ್ರಲ್ಲಿ ವಿಶೇಷ ಏನಂದ್ರೆ ಹುಡುಗಿಯೇ ಮಂಡಿಯೂರಿ ಕುಳಿತು ಹುಡುಗನಿಗೆ ಪ್ರಪೋಸ್ ಮಾಡಿದ್ದಾಳೆ.
ಕಳೆದ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ಆಟಗಾರ ದೀಪಕ್ ಚಹಾರ್ ಕೂಡ ತನ್ನ ಗೆಳತಿಗೆ ಇದೇ ರೀತಿಯಲ್ಲಿ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆದ್ರೆ ಆರ್‌ಸಿಬಿ ಹಾಗೂ ಸಿಎಸ್‌ಕೆ ಪಂದ್ಯದ ವೇಳೆಯಲ್ಲಿ ಪ್ರೇಕ್ಷಕರು ಮಾಡಿರುವ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಾವಾಗಲೂ ಹುಡುಗ, ಗೆಳತಿಯೆದುರು ಮಂಡಿಯೂರಿ, ಉಂಗುರವನ್ನು ನೀಡಿ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇಂದು ಮಹಿಳೆಯೊಬ್ಬರು ಮಂಡಿಯೂರಿ ಉಂಗುರವನ್ನು ಚಾಚಿ ಪ್ರಿಯಕರನಿಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅನಿರೀಕ್ಷಿತವಾಗಿ, ಹುಡುಗ ಹೌದು ಎಂದು ಹೇಳಿ ಪ್ರೀತಿಯನ್ನು ಒಪ್ಪಿಕೊಂಡನು. ಇದನ್ನು ಇತರ ಪ್ರೇಕ್ಷಕರೂ ಸಂಭ್ರಮಿಸಿದರು.
IPL 2022: ಚೆನ್ನೈ ವಿರುದ್ಧ ಗೆದ್ದು, ನಾಲ್ಕನೇ ಸ್ಥಾನಕ್ಕೆ ಜಿಗಿದ ಆರ್‌ಸಿಬಿ, ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್
ಬುದ್ದಿವಂತ ಹುಡುಗಿ ಕುರಿತು ವಾಸಿಂ ಜಾಫರ್ ಪ್ರಶಂಸೆ
ಕೇವಲ ಪ್ರೇಕ್ಷಕರು ಅಷ್ಟೇ ಅಲ್ಲದೆ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. '' ಬುದ್ಧಿವಂತ ಹುಡುಗಿ ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿದ್ದಾಳೆ. ಅವನು ಆರ್‌ಸಿಬಿಗೆ ನಿಷ್ಠನಾಗಿರಲು ಸಾಧ್ಯವಾದರೆ, ಅವನು ಖಂಡಿತವಾಗಿಯೂ ತನ್ನ ಸಂಗಾತಿಗೆ ನಿಷ್ಠನಾಗಿರುತ್ತಾನೆ. ಚೆನ್ನಾಗಿದೆ ಮತ್ತು ಪ್ರಸ್ತಾಪಿಸಲು ಒಳ್ಳೆಯ ದಿನ'' ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ.
IPL 2022: ತನ್ನ ಹಳೆಯ ತಂಡ SRH ಕುರಿತು ಆಶ್ಚರ್ಯಕರ ಹೇಳಿಕೆ ನೀಡಿದ ಡೇವಿಡ್ ವಾರ್ನರ್

13 ರನ್‌ಗಳಿಂದ ಪಂದ್ಯ ಗೆದ್ದ ಆರ್‌ಸಿಬಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಓಪನರ್‌ಗಳಾದ ವಿರಾಟ್ ಕೊಹ್ಲಿ 30, ಡುಪ್ಲೆಸಿಸ್ 38 ರನ್‌ಗಳ ನೆರವಿನಿಂದ ಅರ್ಧಶತಕದ ಜೊತೆಯಾಟ ಸಾಧಿಸಿತು. ಆದ್ರೆ ನಂತರದಲ್ಲಿ ಮ್ಯಾಕ್ಸ್‌ವೆಲ್ ಬಹುಬೇಗನೆ ಔಟಾದ್ರೂ ಸಹ ಮಹಿಪಾಲ್ ಲೊಮ್ರಾರ್ 42, ದಿನೇಶ್ ಕಾರ್ತಿಕ್ ಅಜೇಯ 26 ರನ್‌ಗಳ ನೆರವನಿಂದ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಸಿಎಸ್‌ಕೆ ಉತ್ತಮ ಆರಂಭ ಪಡೆಯಿತಾದ್ರೂ ಸಹ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಸೋಲಿಗೆ ಶರಣಾಗಬೇಕಾಯಿತು. ಡೆವೊನ್ ಕಾನ್ವೆ 56, ರುತುರಾಜ್ ಗಾಯಕ್ವಾಡ್ 28 ರನ್‌ಗಳ ಕೊಡುಗೆಯಿಂದ ಉತ್ತಮ ಜೊತೆಯಾಟ ಪಡೆಯಿತು. ಆದ್ರೆ ರಾಬಿನ್ ಉತ್ತಪ್ಪ, ರಾಯುಡು ವೈಫಲ್ಯದಿಂದಾಗಿ ಸೋಲನ್ನ ಒಪ್ಪಿಕೊಳ್ಳಬೇಕಾಯಿತು.
ಮೊಯಿನ್ ಅಲಿ 34ರನ್‌ಗಳ ಕೊಡುಗೆ ತಂಡದ ಗೆಲುವಿಗೆ ಸಹಾಯವಾಗಲಿಲ್ಲ. ಜಡೇಜಾ, ಧೋನಿ ಬಹುಬೇಗ ಔಟಾದ ಪರಿಣಾಮ ಸಿಎಸ್‌ಕೆ 13ರನ್‌ಗಳಿಂದ ಸೋಲು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications