ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ತನ್ನ ಹಳೆಯ ತಂಡ SRH ಕುರಿತು ಆಶ್ಚರ್ಯಕರ ಹೇಳಿಕೆ ನೀಡಿದ ಡೇವಿಡ್ ವಾರ್ನರ್

David warner

ಐಪಿಎಲ್ 15ನೇ ಸೀಸನ್‌ನ 50ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಲಿದ್ದು, ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಪ್ರಮುಖ ಪಂದ್ಯಕ್ಕೆ ಸಜ್ಜಾಗಿದೆ.

ಈ ಪಂದ್ಯದ ಕುತೂಹಲಕಾರಿ ಅಂಶವೆಂದರೆ ಡೇವಿಡ್ ವಾರ್ನರ್ ತಮ್ಮ ಹಳೆಯ ತಂಡವಾದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಬಾರಿಗೆ ಆಡುತ್ತಿದ್ದಾರೆ. ಡೇವಿಡ್ ವಾರ್ನರ್ ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅದಕ್ಕೂ ಮೊದಲು, ವಾರ್ನರ್ 2015 ರಿಂದ 2021 ರ ವರೆಗೆ ಸನ್‌ರೈಸರ್ಸ್‌ಗೆ ನಾಯಕರಾಗಿದ್ದರು. ಅಲ್ಲದೆ ತಂಡವನ್ನು ಅನೇಕ ಸ್ಮರಣೀಯ ವಿಜಯಗಳಿಗೆ ಮುನ್ನಡೆಸಿದರು.

DC vs SRH: ಇತ್ತಂಡಗಳ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?DC vs SRH: ಇತ್ತಂಡಗಳ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?

ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಡೇವಿಡ್ ವಾರ್ನರ್ ಕೂಡ ಒಬ್ಬರು. 2016ರಲ್ಲಿ ಸನ್‌ರೈಸರ್ಸ್‌ಗೆ ಐಪಿಎಲ್ ಪ್ರಶಸ್ತಿಯನ್ನು ಸಹ ಗೆದ್ದು ಕೊಟ್ಟಿದ್ದಾರೆ. ಹೀಗಾಗಿ ಎಸ್‌ಆರ್‌ಎಚ್‌ ಎಂದರೆ ವಾರ್ನರ್ .. ವಾರ್ನರ್ ಎಂದರೆ ಎಸ್‌ಆರ್‌ಎಚ್ ಅನ್ನುವಷ್ಟರ ಮಟ್ಟಿಗೆ ಬೆರತಿದ್ದರು.

ಆದ್ರೆ 2021ರ ಐಪಿಎಲ್ ಸೀನಸ್‌ನಲ್ಲಿ ತುಂಬಾ ಕಳಪೆ ಫಾರ್ಮ್ ಎದುರಿಸಿದ ವಾರ್ನರ್ ಕುರಿತು ತಂಡದ ಮ್ಯಾನೇಜ್‌ಮೆಂಟ್ ಮುನಿಸಿಕೊಂಡಿತು. ಅಲ್ಲದೆ ಫ್ರಾಂಚೈಸಿ ವಾರ್ನರ್ ಅವರನ್ನು ನಾಯಕತ್ವ ಸ್ಥಾನದಿಂದ ವಜಾಗೊಳಿಸಿತು. ಅಲ್ಲದೆ ಪಂದ್ಯಗಳಿಗೆ ಅಂತಿಮ ಇಲೆವೆನ್‌ನಿಂದಲೂ ಹೊರಗಿಟ್ಟಿತು.

ಇನ್ನು ಹರಾಜಿಗೂ ಮುನ್ನವೇ ಸನ್‌ರೈಸರ್ಸ್ ಹೈದ್ರಾಬಾದ್ ವಾರ್ನರ್‌ ಅವರಿಗೆ ಗುಡ್‌ಬೈ ಹೇಳಿತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ ವಾರ್ನರ್ ಅನ್ನು ಮೆಗಾ ಹರಾಜಿನಲ್ಲಿ 6 ಕೋಟಿ ರೂಪಾಯಿಗೆ ಖರೀದಿಸಿತು. ವಾರ್ನರ್ ಐಪಿಎಲ್‌ನಲ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಾಗಿ ಆಡಿದ್ದರು. ಇದರೊಂದಿಗೆ ವಾರ್ನರ್ ತಮ್ಮ ಮೊದಲ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ.

ಕ್ರೀಡಾ ನಿರೂಪಕರು ಪಂದ್ಯದ ಬಗ್ಗೆ ವಾರ್ನರ್ ಅವರ ಅಭಿಪ್ರಾಯವನ್ನು ಕೇಳಿದಾಗ ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯ ಮತ್ತೊಂದು ಪಂದ್ಯವಷ್ಟೇ ಆಗಿದೆ ಎಂದು ಹೇಳಿಕೆಯನ್ನ ನೀಡಿದ್ದಾರೆ. ಅದಕ್ಕೇನು ವಿಶೇಷವಾದ ಒತ್ತು ನೀಡಿಲ್ಲ ಎಂದಿದ್ದಾರೆ.

CSK ವಿರುದ್ಧದ ಪಂದ್ಯದಲ್ಲಿ RCB ಗೆಲುವಿಗೆ ಕಾರಣವೇನು | Oneindia Kannada

ವಾರ್ನರ್ ಈ ಋತುವಿನಲ್ಲಿ ಇದುವರೆಗೆ 7 ಇನ್ನಿಂಗ್ಸ್‌ಗಳಲ್ಲಿ 3 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು ಪೃಥ್ವಿರಾಜ್ ಅವರೊಂದಿಗೆ ಉತ್ತಮ ಆರಂಭಿಕ ಜೊತೆಯಾಟವನ್ನ ದಾಖಲಿಸುತ್ತಿದ್ದಾರೆ.

Story first published: Thursday, May 5, 2022, 10:41 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X