RCB Unbox Event Live: ಇಂದೇ ಆರ್‌ಸಿಬಿ ಹೊಸ ನಾಯಕನ ಘೋಷಣೆ ಸಾಧ್ಯತೆ!

ಈಗಾಗಲೇ ಐಪಿಎಲ್ 15ನೇ ಸೀನಸ್‌ನಲ್ಲಿ ಭಾಗವಹಿಸುತ್ತಿರುವ 10 ತಂಡಗಳಲ್ಲಿ ಇನ್ನೂ ನಾಯಕನನ್ನ ಘೋಷಿಸಿದ ಏಕೈಕ ತಂಡ ಅಂದ್ರೆ ಅದು ಆರ್‌ಸಿಬಿ ಮಾತ್ರ. ಹೀಗಾಗಿ ಆರ್‌ಸಿಬಿ ಇಂದು (ಮಾರ್ಚ್ 12) ಬೆಂಗಳೂರಿನಲ್ಲಿ ಅನ್‌ಬಾಕ್ಸ್ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್, ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ಮಧ್ಯಾಹ್ನ 12ರಿಂದ ಸಂಜೆ 8 ಗಂಟೆಯವರೆಗೆ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮವನ್ನ ಏರ್ಪಡಿಸಲಾಗಿದ್ದು, ಇದೇ ಸಮಯದಲ್ಲಿ ಆರ್‌ಸಿಬಿ ತನ್ನ ಮುಂದಿನ ನಾಯಕನನ್ನ ಘೋಷಿಸುವ ಸಾಧ್ಯತೆ ಇದೆ.
ಪ್ರೇಕ್ಷಕರನ್ನು ರಂಜಿಸಲು ಗಾಯಕರು, ಬ್ಯಾಂಡ್‌ಗಳು, ಡಿಜೆ ಮತ್ತು ಎಂಸಿ ಮತ್ತು ಬೀಟ್‌ಬಾಕ್ಸರ್‌ಗಳು ಇರುತ್ತಾರೆ. ಈ ಸಮಯದಲ್ಲಿ ಆರ್‌ಸಿಬಿ ತನ್ನ ಹೊಸ ನಾಯಕನನ್ನು ಘೋಷಿಸಲಿದ್ದು, ಹೊಚ್ಚ ಹೊಸ ಜೆರ್ಸಿಯನ್ನು ಕೂಡ ಅನಾವರಣಗೊಳಿಸಲಿದೆ.
2013 ರಿಂದ 2021 ರವರೆಗೆ ಪೂರ್ಣ ಅವಧಿಯಲ್ಲಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಬದಲಿಗೆ ಹೊಸ ನಾಯಕನ ಆಯ್ಕೆ ಖಚಿತವಾಗಿದೆ. ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಗಳಾಗಿ ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಹೆಸರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್‌ಮೆಂಟ್ ಪರಿಗಣಿಸುತ್ತಿದೆ
ಆರ್‌ಸಿಬಿಯ ಈ ಕಾರ್ಯಕ್ರಮ ಕುರಿತು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ಉತ್ಸುಕರಾಗಿದ್ದು, ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ''ನವೀಕರಿಸಿದ ಶಕ್ತಿ, ಹೊಸ ಐಪಿಎಲ್ ಸೀಸನ್‌ಗಾಗಿ ಉತ್ಸುಕನಾಗಿದ್ದೇನೆ. ಒಂದು ಪ್ರಮುಖ ಸುದ್ದಿ ಇದೆ'' ಎಂದು ವಿರಾಟ್ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ವೀಡಿಯೋ ಸಂದೇಶ ನೀಡಿದ್ದಾರೆ. ಆದ್ರೆ ಸಂಪೂರ್ಣ ವೀಡಿಯೋವನ್ನ ತಿಳಿಸಿದ ಫ್ರಾಂಚೈಸಿ ಕಾಯಕ್ರಮದ ಕುರಿತು ಸಾಕಷ್ಟು ಗೌಪ್ಯತೆ ಕಾಪಾಡಿದೆ. ಇದು ಆ ವೀಡಿಯೋವನ್ನ ಸಹ ಬಿಡುಗಡೆ ಮಾಡಲಿದೆ.

ಕೆಲವು ಆಟಗಾರರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ
ವಿರಾಟ್ ಕೊಹ್ಲಿ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡುತ್ತಿರುವ ಹಿನ್ನೆಲೆಯಲ್ಲಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಭಾಗಿಯಾಗುತ್ತಿಲ್ಲ. ಲಂಕಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ವಿರಾಟ್ ಉತ್ತಮ ಸ್ಕೋರ್ ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ಡೇ&ನೈಟ್ ಟೆಸ್ಟ್: 71ನೇ ಶತಕದ ಮೇಲೆ ಕೊಹ್ಲಿ ಕಣ್ಣು
ಕೊಹ್ಲಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿ ಕೆಲವು ಆಟಗಾರರು ಹಾಜರಾಗಲಿದ್ದು, ಕೊಹ್ಲಿಯನ್ನ ಹೊಸ ಆರ್‌ಸಿಬಿ ಜೆರ್ಸಿಯಲ್ಲಿ ನೋಡಲು ಐಪಿಎಲ್ ಆರಂಭದವರೆಗೂ ಕಾಯಬೇಕಾಗಬಹುದು.
ಅನ್‌ಬಾಕ್ಸ್ ಇವೆಂಟ್ ಲೈವ್ ಎಲ್ಲಿ ವೀಕ್ಷಿಸಬಹುದು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್, ಫೇಸ್‌ಬುಕ್ ಪೇಜ್, ಯುಟ್ಯೂಬ್ ಚಾನೆಲ್ ಮತ್ತು ತಮ್ಮ ಅಧಿಕೃತ ಅಪ್ಲಿಕೇಶನ್‌ನಲ್ಲಿ ಈವೆಂಟ್ ಅನ್ನು ಲೈವ್ ಸ್ಟ್ರೀಮಿಂಗ್ ಮಾಡುವುದಾಗಿ ಘೋಷಿಸಿದ್ದಾರೆ. ಈ ಕಾರ್ಯಕ್ರಮ ಮಧ್ಯಾಹ್ನ 12:00 ರಿಂದ ರಾತ್ರಿ 8:00 ರವರೆಗೆ ನಡೆಯಲಿದೆ. ಮುಂದಿನ RCB ನಾಯಕನ ಮೆಗಾ ಘೋಷಣೆಗಾಗಿ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗಬಹುದು.
ICC ಮಹಿಳೆಯರ ವಿಶ್ವಕಪ್ 2022: ಭರ್ಜರಿ ಶತಕ ದಾಖಲಿಸಿದ ಸ್ಮೃತಿ ಮಂದಾನ, ಹರ್ಮನ್ ಪ್ರೀತ್ ಕೌರ್ LIVE

ಆರ್‌ಸಿಬಿ ಸ್ಕ್ವಾಡ್ 2022
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್, ಹರ್ಷಲ್ ಪಟೇಲ್ , ವನಿಂದು ಹಸರಂಗ , ದಿನೇಶ್ ಕಾರ್ತಿಕ್ , ಜೋಶ್ ಹೇಜಲ್‌ವುಡ್ , ಶಹಬಾಜ್ ಅಹ್ಮದ್ , ಅನುಜ್ ರಾವತ್ , ಆಕಾಶ್ ದೀಪ್ ಸಿಂಗ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್ , ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡಾರ್ಫ್ , ಸುಯಶ್ ಪ್ರಭುದೇಸಾಯಿ , ಚಾಮಾ ಮಿಲಿಂದ್ , ಅನೀಶ್ವರ್ ಗೌತಮ್ , ಕರಣ್ ಶರ್ಮಾ , ಲುವ್ನಿತ್ ಸಿಸೋಡಿಯಾ , ಸಿದ್ಧಾರ್ಥ್ ಕೌಲ್ , ಡೇವಿಡ್ ವಿಲ್ಲೆ , ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications