Pink Ball Test: ಬೆಂಗಳೂರಿನಲ್ಲಿ ಇಂದಿನಿಂದ ಡೇ&ನೈಟ್ ಟೆಸ್ಟ್: 71ನೇ ಶತಕದ ಮೇಲೆ ಕೊಹ್ಲಿ ಕಣ್ಣು

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿಂದು ಭಾರತ-ಶ್ರೀಲಂಕಾ ತಂಡಗಳು ಪಿಂಚ್ ಬಾಲ್ ಟೆಸ್ಟ್ ಪಂದ್ಯವನ್ನಾಡಲು ಸರ್ವಸನ್ನದ್ದವಾಗಿವೆ. ಶ್ರೀಲಂಕಾ ವಿರುದ್ಧ ಈಗಾಗಲೇ ಮೊದಲ ಟೆಸ್ಟ ಪಂದ್ಯ ಗೆದ್ದಿರುವ ಭಾರತ, ಎರಡನೇ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟಿದೆ.
ಮೊಹಾಲಿ ಅಂಗಳದಲ್ಲಿ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಸೇರಿದಂತೆ 222ರನ್‌ಗಳ ಬೃಹತ್ ಜಯಗಳಿಸಿದ ಭಾರತ ತಂಡದಲ್ಲಿ ಹೆಚ್ಚು ಬದಲಾವಣೆ ಇಲ್ಲದೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಪ್ಲೇಯಿಂಗ್ ಇಲೆವೆನ್‌ನಲ್ಲಿ ಹೆಚ್ಚಿನ ಬದಲಾವಣೆ ಇಷ್ಟ ಪಡದ ರೋಹಿತ್ ಪಿಂಕ್ ಬಾಲ್ ಟೆಸ್ಟ್‌ಗೆ ಬ್ಯಾಟಿಂಗ್ ಸಂಯೋಜನೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ತುಂಬಾ ವಿರಳ. ಆದರೆ ಬೌಲಿಂಗ್ ವಿಭಾಗಕ್ಕೆ ಅಕ್ಷರ್ ಪಟೇಲ್ ಇಲ್ಲವೆ ಮೊಹಮ್ಮದ್ ಸಿರಾಜ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಅವರು ಅಹಮದಾಬಾದ್‌ನಲ್ಲಿ ನಡೆದಿದ್ದ ಕೊನೆಯ ಡೇ-ನೈಟ್ ಟೆಸ್ಟ್‌ನಲ್ಲಿ ಅಕ್ಷರ್ ಉತ್ತಮ ಪ್ರದರ್ಶನ ತೋರಿದ್ದರು.

ನಾಯಕತ್ವದ ಜೊತೆಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿರುವ ಜವಾಬ್ದಾರಿ
ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಮೇಲೆ ಅದ್ಭುತ ಗೆಲುವಿನ ದಾಖಲೆಯನ್ನೇ ಮಾಡಿದ್ದಾರೆ. ಸತತ ಪಂದ್ಯಗಳ ಜೊತೆಗೆ ಸರಣಿ ಗೆದ್ದಿರುವ ರೋಹಿತ್ ಸುಲಭವಾಗಿ ಟೆಸ್ಟ್ ಸರಣಿ ಗೆಲುವಿನ ಯೋಜನೆ ಹಾಕಿಕೊಂಡಿದ್ದಾರೆ. ನಾಯಕತ್ವದಲ್ಲಿ ರೋಹಿತ್ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಯಾವ ವಿಷಯವೂ ಉಳಿದಿಲ್ಲ. ಆದ್ರೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಕೊಡುಗೆ ನೀಡಬೇಕಿದೆ.
ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಕೇವಲ 29ರನ್‌ಗೆ ವಿಕೆಟ್ ಒಪ್ಪಿಸಿದ್ರು. ಇದಕ್ಕೂ ಮೊದಲು ಟಿ20 ಸರಣಿಯಲ್ಲಿ ರೋಹಿತ್ ಕ್ರಮವಾಗಿ 44, 1 ಹಾಗೂ 5ರನ್‌ಗೆ ಔಟಾಗಿದ್ದಾರೆ.

2 ವರ್ಷದ ಬಳಿಕ ಶತಕ ಸಿಡಿಸ್ತಾರ ವಿರಾಟ್?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಬರೋಬ್ಬರಿ 28 ತಿಂಗಳುಗಳು ಕಳೆದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಆಡುವ ವಿರಾಟ್ ಕೊಹ್ಲಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ತವರು ಅಂಗಣವಾಗಿದೆ. ಈ ಹಿನ್ನೆಲೆಯಲ್ಲಿ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ವೈಯಕ್ತಿಕ ಮೂರಂಕಿ ಮೊತ್ತ ದಾಖಲಿಸುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ಕೊನೆಯ ಶತಕ ಸಿಡಿಸಿದ್ದು ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿಯೇ ಆಗಿರೋದ್ರಿಂದ, ಬೆಂಗಳೂರಿನಲ್ಲಿ ಕೊಹ್ಲಿ ಶತಕ ಸಿಡಿಸಲಿದ್ದಾರೆಂಬುದು ಕುತೂಹಲಕಾರಿ ಸಂಗತಿಯಾಗಿದೆ.
ಭಾರತ vs ಶ್ರೀಲಂಕಾ: ಟೆಸ್ಟ್ ಕ್ರಿಕೆಟ್ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?

ಇದುವರೆಗೂ ಮೂರು ಪಿಂಕ್ ಬಾಲ್ ಟೆಸ್ಟ್ ಆಡಿರುವ ಭಾರತ
ಟೀಂ ಇಂಡಿಯಾ ಇದುವರೆಗೂ ಮೂರು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನ ಆಡಿದೆ. ಇದರಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಮತ್ತು ಒಂದು ಪಂದ್ಯದಲ್ಲಿ ಸೋಲನ್ನ ಅನುಭವಿಸಿದೆ. ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ ಡೇ&ನೈಟ್ ಟೆಸ್ಟ್ ಪಂದ್ಯ ಜಯಿಸಿದ್ರೆ, ಆಸ್ಟ್ರೇಲಿಯಾ ವಿರುದ್ಧ ಸೋತಿದೆ.
ಇನ್ನು ಡೇ&ನೈಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಶತಕ ಸಿಡಿಸಿರುವ ಏಕೈಕ ಆಟಗಾರ ಅಂದ್ರೆ, ಅದು ವಿರಾಟ್ ಕೊಹ್ಲಿ. ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಅವರು 136 ರನ್ ಗಳಿಸಿದ್ದರು. ಅತ್ತ ಶ್ರೀಲಂಕಾ ಕೂಡ ಮೂರು ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಿದ್ದು, ಎರಡು ಪಂದ್ಯ ಗೆದ್ದಿದೆ ಮತ್ತು ಒಂದರಲ್ಲಿ ಸೋತಿದೆ.
IPL ಇತಿಹಾಸದಲ್ಲಿ ಹೆಚ್ಚು 50 ದಾಖಲಿಸಿ, ಒಂದೂ ಶತಕ ದಾಖಲಿಸದ 5 ಪ್ಲೇಯರ್ಸ್

ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11
ನಾಯಕ ರೋಹಿತ್ ಶರ್ಮಾ ಜೊತೆಗೆ ಸ್ಥಳೀಯ ಆಟಗಾರ ಮಯಾಂಕ್ ಅಗರ್ವಾಲ್ ಓಪನಿಂಗ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಮೊಹಾಲಿಯಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ದ ಹನುಮ ವಿಹಾರಿಗೆ ಮತ್ತೊಂದು ಅವಕಾಶ ಸಿಗಬಹುದು. ಇವರಿಗೆ ಒಂದು ವೇಳೆ ವಿಶ್ರಾಂತಿ ನೀಡಿದ್ರೆ ಶುಭ್ಮನ್ ಗಿಲ್ ಕಣಕ್ಕಿಳಿಯಬಹುದು. ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಂತರ ರಿಷಭ್ ಪಂತ್, ಕಣಕ್ಕಿಳಿದ ಬಳಿಕ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯಬಹುದು.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಅಬ್ಬರಿಸಿದ ಜಡೇಜಾ ಏಳನೇ ಕ್ರಮಾಂಕ ಮತ್ತು ರವಿಚಂದ್ರನ್ ಅಶ್ವಿನ್ ಎಂಟನೇ ಕ್ರಮಾಂಕದಲ್ಲಿ ಆಡಬಹುದು. ಇನ್ನು ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ/ ಮೊಹಮ್ಮದ್ ಸಿರಾಜ್ ಪ್ಲೇಯಿಂಗ್ ಇಲೆವೆನ್ ಅವಕಾಶ ಪಡೆಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications