
ಕಳೆದ ಪಂದ್ಯ ಸೋತಿರುವ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್
ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 44ರನ್‌ಗಳಿಂದ ಸೋಲನ್ನ ಕಂಡಿತು. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಕ್ರಮವಾಗಿ 51 ಮತ್ತು 61 ರನ್ ಕಲೆಹಾಕಿದ್ದರೂ ಪಂದ್ಯ ಸೋತಿತು.
ಮತ್ತೊಂದೆಡೆ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 23ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು. ಚೆನ್ನೈ ನೀಡಿದ 216 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಫಾಫ್ ಡುಪ್ಲೆಸಿಸ್ ಪಡೆ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಶಬಾಜ್ ನದೀಮ್ ಮತ್ತು ದಿನೇಶ್ ಕಾರ್ತಿಕ್ ಕ್ರಮವಾಗಿ 41 ಮತ್ತು 34 ರನ್ ಕಳೆಹಾಕಿ ಕೆಳಕ್ರಮಾಂಕದಲ್ಲಿ ಗೆಲುವಿಗೆ ಪ್ರಯತ್ನಿಸಿದರು. ಆದ್ರೆ ಆರ್‌ಸಿಬಿಯನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗ್ಲಿಲ್ಲ.

27 ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಮುಖಾಮುಖಿ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ ಐಪಿಎಲ್‌ನಲ್ಲಿ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದ, ಡೆಲ್ಲಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿದ ಪಂದ್ಯಗಳಲ್ಲಿ ಜಯಿಸಿದೆ.
MI vs LSG: ಫ್ಯಾಂಟೆಸಿ ಡ್ರೀಮ್ ಟೀಮ್ ಮತ್ತು ಕೀ ಪ್ಲೇಯರ್ ತಿಳಿದುಕೊಳ್ಳಿ

ಆರ್‌ಸಿಬಿ ಮತ್ತು ಡೆಲ್ಲಿ ಸಂಭಾವ್ಯ ಪ್ಲೇಯಿಂಗ್ 11
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ರೋವ್ಮನ್ ಪೊವೆಲ್, ರಿಷಬ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್‌ದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್, ಆಕಾಶ್ ದೀಪ್
IPL 2022: ಸಾಲು ಸಾಲು ಸೋಲಿನಿಂದ ಕಂಗಾಲಾಗಿರುವ ರೋಹಿತ್ ಶರ್ಮಾಗೆ ಬ್ಯಾನ್ ಸಂಕಷ್ಟ!

ಡ್ರೀಮ್ ಟೀಂ 1
ಫ್ಯಾಂಟೆಸಿ ಡ್ರೀಂ ಟೀಂನಲ್ಲಿ ಪೃಥ್ವಿ ಶಾ, ಡೇವಿಡ್ ವಾರ್ನರ್, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತ ದಿನೇಶ್ ಕಾರ್ತಿಕ್ ಪ್ರಮುಖ ಆಯ್ಕೆಯ ಆಟಗಾರರಾಗಿದ್ದಾರೆ. ಇದರ ನಡುವೆ ಯಾವೆಲ್ಲಾ ಆಟಗಾರರು ಡ್ರೀಮ್ ಟೀಂನಲ್ಲಿದ್ದಾರೆ ಎಂಬುದನ್ನ ಈ ಕೆಳಗೆ ನೋಡಬಹುದು.
ನಾಯಕ- ಪೃಥ್ವಿ ಶಾ, ಡೇವಿಡ್ ವಾರ್ನರ್
ಉಪನಾಯಕ - ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್
ವಿಕೆಟ್ ಕೀಪರ್- ರಿಷಬ್ ಪಂತ್, ಅನುಜ್ ರಾವತ್
ಬ್ಯಾಟ್ಸ್‌ಮನ್‌ಗಳು - ಪೃಥ್ವಿ ಶಾ (ನಾಯಕ), ಡೇವಿಡ್ ವಾರ್ನರ್, ಫಾಫ್ ಡು ಪ್ಲೆಸಿಸ್ (ಉಪನಾಯಕ)
ಆಲ್ ರೌಂಡರ್‌ಗಳು - ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್
ಬೌಲರ್‌ಗಳು - ವನಿಂದು ಹಸರಂಗ, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಜೋಶ್ ಹೇಜಲ್‌ವುಡ್

ಡ್ರೀಮ್ ಟೀಂ 2
ವಿಕೆಟ್ ಕೀಪರ್ಸ್ - ರಿಷಬ್ ಪಂತ್, ದಿನೇಶ್ ಕಾರ್ತಿಕ್
ಬ್ಯಾಟ್ಸ್‌ಮನ್‌ಗಳು - ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ವಿರಾಟ್ ಕೊಹ್ಲಿ
ಆಲ್ ರೌಂಡರ್‌ಗಳು - ಗ್ಲೆನ್ ಮ್ಯಾಕ್ಸ್‌ವೆಲ್ (ಉಪನಾಯಕ ), ಶಹಬಾಜ್ ಅಹ್ಮದ್, ಲಲಿತ್ ಯಾದವ್
ಬೌಲರ್‌ಗಳು - ವನಿಂದು ಹಸರಂಗ, ಖಲೀಲ್ ಅಹ್ಮದ್, ಜೋಶ್ ಹೇಜಲ್‌ವುಡ್
ಪೃಥ್ವಿ ಶಾ ಸಣ್ಣ ಲೀಗ್‌ಗಳು, ಮಿನಿ ಗ್ರ್ಯಾಂಡ್ ಲೀಗ್‌ಗಳಿಗೆ ಉತ್ತಮ ನಾಯಕತ್ವದ ಆಯ್ಕೆಯಾಗಲಿದ್ದಾರೆ. ಡೇವಿಡ್ ವಾರ್ನರ್ ಕೂಡ ಯೋಗ್ಯ ನಾಯಕತ್ವದ ಆಯ್ಕೆಯಾಗಿದ್ದಾರೆ/ ವಿರಾಟ್ ಕೊಹ್ಲಿ , ಮ್ಯಾಕ್ಸ್‌ವೆಲ್ ಬಹುಜನರ ಪಿಕ್ ಆಗಿದ್ದು, ಉತ್ತಮ ಡ್ರೀಂ ಟೀಂ ಸಂಯೋಜನೆಯು 2-3-2-4 ಆಗಿದೆ.


Click it and Unblock the Notifications












