RCB vs GT : ಕೊಹ್ಲಿ ಫಿಫ್ಟಿ ವ್ಯರ್ಥ, ಗುಜರಾತ್ ವಿರುದ್ಧ ಮುಗ್ಗರಿಸಿದ ಆರ್‌ಸಿಬಿ

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಗುಜರಾತ್ ಟೈಟನ್ಸ್ ಆರು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆರ್‌ಸಿಬಿ ನೀಡಿದ 171ರನ್ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆ ಪಂದ್ಯ ಜಯಿಸಿದೆ.
ಗುಜರಾತ್ ಪರ ಶುಭಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹಾ ಅರ್ಧಶತಕ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದ್ರು. ಸಾಹಾ 22 ಎಸೆತಗಳಲ್ಲಿ 29 ರನ್ ಕಲೆಹಾಕಿದ್ರೆ, ಶುಭಮನ್ ಗಿಲ್ 28 ಎಸೆತಗಳಲ್ಲಿ 31 ರನ್ ಸಿಡಿಸಿ ಔಟಾದ್ರು.

ರಾಹುಲ್ ತೆವಾಟಿಯಾ ಮತ್ತೊಂದು ಭರ್ಜರಿ ಇನ್ನಿಂಗ್ಸ್
ಮೊದಲೆರಡು ವಿಕೆಟ್ ಪತನದ ಬಳಿಕ ಗುಜರಾತ್ ಟೈಟನ್ಸ್ ಮತ್ತೆರಡು ವಿಕೆಟ್‌ಗಳನ್ನ ಬಹುಬೇಗನೆ ಕಳೆದುಕೊಂಡಿತು. ಸಾಯಿ ಸುದರ್ಶನ್ 20ರನ್‌ಗಳಿಸಿ ಹಸರಂಗಗೆ ವಿಕೆಟ್ ಒಪ್ಪಿಸಿದ್ರೆ, ಹಾರ್ದಿಕ್ ಪಾಂಡ್ಯ ಕೇವಲ 3ರನ್‌ಗೆ ಶಬಾಜ್ ಅಹ್ಮದ್ ಬೌಲಿಂಗ್‌ನಲ್ಲಿ ಔಟಾದ್ರು.
ಆದ್ರೆ ಗುಜರಾತ್ ಪರ ಮತ್ತೊಂದು ಅದ್ಭುತ ಆಟವಾಡಿದ ರಾಹುಲ್ ತೆವಾಟಿಯಾ 24 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಸಹಿತ 43 ರನ್ ಕಲೆಹಾಕಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ತೆವಾಟಿಯಾಗೆ ಉತ್ತಮ ಸಾಥ್ ಕೊಟ್ಟ ಮಿಲ್ಲರ್ 24 ಎಸೆತಗಳಲ್ಲಿ 39 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಆರ್‌ಸಿಬಿ ಪರ ಹಸರಂಗ ಮತ್ತು ಶಬಾಜ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದ್ರೆ, ಗುಜರಾತ್ ಆರು ವಿಕೆಟ್‌ಗಳ ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿಯೇ ಮುಂದುವರಿದಿದೆ.

IPL 2022ರಲ್ಲಿ ವಿರಾಟ್ ಕೊಹ್ಲಿ ಮೊದಲ ಅರ್ಧಶತಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಇಳಿದ ನಾಯಕ ಫಾಫ್ ಡುಪ್ಲೆಸಿ್ ಶೂನ್ಯಕ್ಕೆ ಔಟಾಗುವ ಮೂಲಕ ಭಾರೀ ನಿರಾಸೆ ಮೂಡಿಸಿದ್ರು. ಆದ್ರೆ ಆರ್‌ಸಿಬಿ ಅಭಿಮಾನಿಗಳಿಗೆ ಬಹುದಿನಗಳಿಂದ ಕಾಯುತ್ತಿದ್ದ ಇನ್ನಿಂಗ್ಸ್ ನೋಡಲು ಅವಕಾಶ ಸಿಕ್ಕಿತು. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದು ಪ್ರಸಕ್ತ ಸೀಸನ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ್ದಾರೆ.
ರಜತ್ ಪಾಟೀದಾರ್ ಜೊತೆಗೆ ಬೊಂಬಾಟ್ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಬೌಂಡರಿಗಳನ್ನ ಕಲೆಹಾಕುತ್ತಾ ಅರ್ಧಶತಕದ ಗಡಿದಾಟಿದ್ರು. 53 ಎಸೆತಗಳಲ್ಲಿ 58 ರನ್ ಕಲೆಹಾಕಿದ ವಿರಾಟ್ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಕಾಣಬಹುದು. ಐಪಿಎಲ್‌ನಲ್ಲಿ 43ನೇ ಅರ್ಧಶತಕ ದಾಖಲಿಸಿದ ವಿರಾಟ್, ಈ ಸೀಸನ್‌ನಲ್ಲಿ 48ರನ್‌ಗಳಿಸಿದ್ದೇ ಹೆಚ್ಚು.
ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ ಈ 5 ಬೃಹತ್ ದಾಖಲೆ ಮುರಿಯಲಾಗದೇ ತಮ್ಮ ಕೆರಿಯರ್ ಅಂತ್ಯಗೊಳಿಸಬಹುದು!

ಅಬ್ಬರಿಸಿದ ರಜತ್ ಪಾಟೀದಾರ್ ಚೊಚ್ಚಲ ಅರ್ಧಶತಕ
ವಿರಾಟ್ ಜೊತೆಗೆ ಆರ್‌ಸಿಬಿ ಪರ ಬ್ಯಾಟಿಂಗ್ ಬಡ್ತಿ ಪಡೆದು ಕಣಕ್ಕಿಳಿದ ರಜತ್ ಪಾಟೀದಾರ್ ಅಬ್ಬರದ ಆಟವಾಡಿದ್ರು. 32 ಎಸೆತಗಳಲ್ಲಿ 52 ರನ್ ಕಲೆಹಾಕಿದೆ ರಜತ್ ಪಾಟೀದಾರ್ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ್ರು.
ಮಧ್ಯಪ್ರದೇಶದ ಇಂಡೋರ್ ಮೂಲದ ಎಡಗೈ ಬ್ಯಾಟರ್ ಪಾಟೀದಾರ್ ಎಲ್ಲರೂ ಮೆಚ್ಚುವಂತಹ ಆಟವಾಡಿದ್ರು. 162.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಈತನ ಇನ್ನಿಂಗ್ಸ್ ಎರಡು ಸಿಕ್ಸರ್ ಹಾಗೂ ಐದು ಬೌಂಡರಿಗಳಿದ್ದವು.
ಕೆಜಿಎಫ್ 2 ವೀಕ್ಷಿಸಿದ ಗುಜರಾತ್ ತಂಡದ ಆಟಗಾರರಿಂದ ಶಿಳ್ಳೆ, ಚಪ್ಪಾಳೆ; ಸಿನಿಮಾ ಬಗ್ಗೆ ಹಾರ್ದಿಕ್ ಹೇಳಿದ್ದಿಷ್ಟು

ಕೆಳಕ್ರಮಾಂಕದಲ್ಲಿ ಮಿಂಚಿದ ಬ್ಯಾಟರ್ಸ್
ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ 18 ಎಸೆತಗಳಲ್ಲಿ 33ರನ್ ಚಚ್ಚಿದ್ರು. ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಕಲೆಹಾಕಿದ್ದ ಮ್ಯಾಕ್ಸಿ ಕೊನೆಯವರೆಗೂ ಉಳಿಯದೇ ಲ್ಯುಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದ್ರು. ಕೊನೆಯಲ್ಲಿ ಉತ್ತಮ ಫಿನಿಷಿಂಗ್ ನೀಡಬೇಕಿದ್ದ ದಿನೇಶ್ ಕಾರ್ತಿಕ್ ಕೇವಲ 2ರನ್‌ಗೆ ರಶೀದ್ ಖಾನ್‌ಗೆ ವಿಕೆಟ್ ನೀಡಿದ್ದು ತಂಡಕ್ಕೆ ಹಿನ್ನಡೆಯಾಯಿತು.
ಆದ್ರೆ ಆರ್‌ಸಿಬಿ ಪರ ಮೊದಲ ಪಂದ್ಯವನ್ನಾಡಿದ ಮಹಿಪಾಲ್ ರಾಜಸ್ತಾನದ ಮಹಿಪಾಲ್ ಲೊಮ್ರಾರ್ ಉತ್ತಮ ರನ್ ಕಾಣಿಕೆ ನೀಡಿದ್ರು. 8 ಎಸೆತಗಳಲ್ಲಿ 16 ರನ್ ಸಿಡಿಸುವ ಮೂಲಕ ತಂಡದ ಸ್ಕೋರ್ ಅನ್ನು 170ರ ಗಡಿ ಮುಟ್ಟಿಸಿದ್ರು.
ಆರು ವಿಕೆಟ್ ಕಳೆದುಕೊಂಡ ಆರ್‌ಸಿಬಿ ಎದುರಾಳಿ ಗುಜರಾತ್‌ಗೆ 171 ರನ್ ಟಾರ್ಗೆಟ್ ನೀಡಿದೆ. ಗುಜರಾತ್ ಪರ ಆಡಿದ ಪ್ರದೀಪ್ ಸಂಗ್ವಾನ್ ನಾಲ್ಕು ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಉತ್ತಮ ಸ್ಪೆಲ್ ಮಾಡುವುದರ ಜೊತೆಗೆ ಎರಡು ವಿಕೆಟ್ ಪಡೆದರು. ಉಳಿದಂತೆ ಶಮಿ, ಅಲ್ಜಾರಿ ಜೋಸೆಫ್, ರಶೀದ್ ಖಾನ್, ಲ್ಯುಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು.
ಕೊನೆಗೆ ಆರ್‌ಸಿಬಿ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಅಮೋಘ ಗೆಲುವನ್ನ ದಾಖಲಿಸಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ 16 ಪಾಯಿಂಟ್ಸ್‌ಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications