RCB VS GT: ಗುಜರಾತ್ ಟೈಟನ್ಸ್‌ಗೆ 171 ರನ್ ಟಾರ್ಗೆಟ್ ನೀಡಿದ ಆರ್‌ಸಿಬಿ

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರು ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿದೆ. ಟೇಬಲ್ ಟಾಪರ್ ಗುಜರಾತ್ ಟೈಟನ್ಸ್ ಗೆಲುವಿಗೆ 171ರನ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಇಳಿದ ನಾಯಕ ಫಾಫ್ ಡುಪ್ಲೆಸಿ್ ಶೂನ್ಯಕ್ಕೆ ಔಟಾಗುವ ಮೂಲಕ ಭಾರೀ ನಿರಾಸೆ ಮೂಡಿಸಿದ್ರು. ಆದ್ರೆ ಆರ್‌ಸಿಬಿ ಅಭಿಮಾನಿಗಳಿಗೆ ಬಹುದಿನಗಳಿಂದ ಕಾಯುತ್ತಿದ್ದ ಇನ್ನಿಂಗ್ಸ್ ನೋಡಲು ಅವಕಾಶ ಸಿಕ್ಕಿತು. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದು ಪ್ರಸಕ್ತ ಸೀಸನ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ್ದಾರೆ.
ರಜತ್ ಪಾಟೀದಾರ್ ಜೊತೆಗೆ ಬೊಂಬಾಟ್ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಬೌಂಡರಿಗಳನ್ನ ಕಲೆಹಾಕುತ್ತಾ ಅರ್ಧಶತಕದ ಗಡಿದಾಟಿದ್ರು. 53 ಎಸೆತಗಳಲ್ಲಿ 58 ರನ್ ಕಲೆಹಾಕಿದ ವಿರಾಟ್ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಕಾಣಬಹುದು. ಐಪಿಎಲ್‌ನಲ್ಲಿ 43ನೇ ಅರ್ಧಶತಕ ದಾಖಲಿಸಿದ ವಿರಾಟ್, ಈ ಸೀಸನ್‌ನಲ್ಲಿ 48ರನ್‌ಗಳಿಸಿದ್ದೇ ಹೆಚ್ಚು.

ವಿರಾಟ್ ಜೊತೆಗೆ ಆರ್‌ಸಿಬಿ ಪರ ಬ್ಯಾಟಿಂಗ್ ಬಡ್ತಿ ಪಡೆದು ಕಣಕ್ಕಿಳಿದ ರಜತ್ ಪಾಟೀದಾರ್ ಅಬ್ಬರದ ಆಟವಾಡಿದ್ರು. 32 ಎಸೆತಗಳಲ್ಲಿ 52 ರನ್ ಕಲೆಹಾಕಿದೆ ರಜತ್ ಪಾಟೀದಾರ್ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ್ರು.
ಮಧ್ಯಪ್ರದೇಶದ ಇಂಡೋರ್ ಮೂಲದ ಎಡಗೈ ಬ್ಯಾಟರ್ ಪಾಟೀದಾರ್ ಎಲ್ಲರೂ ಮೆಚ್ಚುವಂತಹ ಆಟವಾಡಿದ್ರು. 162.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಈತನ ಇನ್ನಿಂಗ್ಸ್ ಎರಡು ಸಿಕ್ಸರ್ ಹಾಗೂ ಐದು ಬೌಂಡರಿಗಳಿದ್ದವು.
ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ 18 ಎಸೆತಗಳಲ್ಲಿ 33ರನ್ ಚಚ್ಚಿದ್ರು. ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಕಲೆಹಾಕಿದ್ದ ಮ್ಯಾಕ್ಸಿ ಕೊನೆಯವರೆಗೂ ಉಳಿಯದೇ ಲ್ಯುಕಿ ಫರ್ಗುಸನ್‌ಗೆ ವಿಕೆಟ್ ಒಪ್ಪಿಸಿದ್ರು. ಕೊನೆಯಲ್ಲಿ ಉತ್ತಮ ಫಿನಿಷಿಂಗ್ ನೀಡಬೇಕಿದ್ದ ದಿನೇಶ್ ಕಾರ್ತಿಕ್ ಕೇವಲ 2ರನ್‌ಗೆ ರಶೀದ್ ಖಾನ್‌ಗೆ ವಿಕೆಟ್ ನೀಡಿದ್ದು ತಂಡಕ್ಕೆ ಹಿನ್ನಡೆಯಾಯಿತು.
ಆದ್ರೆ ಆರ್‌ಸಿಬಿ ಪರ ಮೊದಲ ಪಂದ್ಯವನ್ನಾಡಿದ ಮಹಿಪಾಲ್ ರಾಜಸ್ತಾನದ ಮಹಿಪಾಲ್ ಲೊಮ್ರಾರ್ ಉತ್ತಮ ರನ್ ಕಾಣಿಕೆ ನೀಡಿದ್ರು. 8 ಎಸೆತಗಳಲ್ಲಿ 16 ರನ್ ಸಿಡಿಸುವ ಮೂಲಕ ತಂಡದ ಸ್ಕೋರ್ ಅನ್ನು 170ರ ಗಡಿ ಮುಟ್ಟಿಸಿದ್ರು.
ಆರು ವಿಕೆಟ್ ಕಳೆದುಕೊಂಡ ಆರ್‌ಸಿಬಿ ಎದುರಾಳಿ ಗುಜರಾತ್‌ಗೆ 171 ರನ್ ಟಾರ್ಗೆಟ್ ನೀಡಿದೆ. ಗುಜರಾತ್ ಪರ ಆಡಿದ ಪ್ರದೀಪ್ ಸಂಗ್ವಾನ್ ನಾಲ್ಕು ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಉತ್ತಮ ಸ್ಪೆಲ್ ಮಾಡುವುದರ ಜೊತೆಗೆ ಎರಡು ವಿಕೆಟ್ ಪಡೆದರು. ಉಳಿದಂತೆ ಶಮಿ, ಅಲ್ಜಾರಿ ಜೋಸೆಫ್, ರಶೀದ್ ಖಾನ್, ಲ್ಯುಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications