For Quick Alerts
ALLOW NOTIFICATIONS  
For Daily Alerts
 

RR vs GT: ಅಬ್ಬರಿಸಿದ ಹಾರ್ದಿಕ್ ಪಾಂಡ್ಯ, ರಾಜಸ್ತಾನ್ ರಾಯಲ್ಸ್‌ಗೆ 193 ರನ್ ಟಾರ್ಗೆಟ್

Gujarat titans

ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್‌ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್‌ 4 ವಿಕೆಟ್ ನಷ್ಟಕ್ಕೆ 192ರನ್ ಕಲೆಹಾಕಿದೆ. ರಾಜಸ್ತಾನ್ ರಾಯಲ್ಸ್‌ಗೆ 193ರನ್‌ಗಳ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್‌ ಉತ್ತಮ ಆರಂಭ ಪಡೆಯಲು ವಿಫಲಗೊಂಡಿತು. ಆರಂಭಿಕ ಬ್ಯಾಟರ್ ಮ್ಯಾಥ್ಯೂ ವೇಡ್ 12ರನ್‌ಗೆ ರನೌಟ್‌ಗೆ ಬಲಿಯಾದ್ರೆ, ಶುಭ್ಮನ್ ಗಿಲ್ 13ರನ್‌ಗಳಿಸಿದ್ದಾಗ ರಿಯಾನ್ ಪರಾಗ್ ಬೌಲಿಂಗ್‌ನಲ್ಲಿ ಹೆಟ್ಮೆಯರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಇನ್ನು ಸಾಯಿ ಸುದರ್ಶನ್ ಬದಲು ಸ್ಥಾನ ಪಡೆದಿದ್ದ ಆಲ್‌ರೌಂಡರ್ ವಿಜಯ್ ಶಂಕರ್ ಕೇವಲ 2ರನ್‌ಗೆ ಕುಲ್‌ದೀಪ್ ಸೇನ್‌ಗೆ ವಿಕೆಟ್ ಒಪ್ಪಿಸಿದ್ದು ಬಹಳ ನಿರಾಸೆ ಮೂಡಿಸಿತು.

53ರನ್‌ಗೆ ಮೂರು ವಿಕೆಟ್ ಕಳೆದುಕೊಂಡ ಗುಜರಾತ್ ಟೈಟನ್ಸ್‌ಗೆ ಮತ್ತೊಮ್ಮೆ ನಾಯಕ ಹಾರ್ದಿಕ್ ಪಾಂಡ್ಯ ಆಧಾರವಾದ್ರು. ಅಬ್ಬರದ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ ಅಜೇಯ 87 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದ್ರು. ಪಾಂಡ್ಯ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಸ್ಫೋಟಕ ಸಿಕ್ಸರ್‌ಗಳಿದ್ದವು.

ಹಾರ್ದಿಕ್ ಪಾಂಡ್ಯಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಅಭಿನವ್ ಮನೋಹರ್ 28 ಎಸೆತಗಳಲ್ಲಿ 43 ರನ್ ಕಲೆಹಾಕಿದ್ರು. ಇವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಸಹಿತ ಎರಡು ಸಿಕ್ಸರ್‌ಗಳಿದ್ದವು.

ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಗೆ ಉತ್ತಮ ಸಾಥ್ ಕೊಟ್ಟ ಡೇವಿಡ್ ಮಿಲ್ಲರ್ 14 ಎಸೆತಗಳಲ್ಲಿ ಅಜೇಯ 31ರನ್ ಕಲೆಹಾಕುವ ಮೂಲಕ ತಂಡದ ಸ್ಕೋರನ್ನು 190ರ ಗಡಿದಾಟಿಸಿದ್ರು. ಐಪಿಎಲ್‌ನಲ್ಲಿ ಎರಡನೇ ಗರಿಷ್ಠ ರನ್ ಕಲೆಹಾಕಿದ ಹಾರ್ದಿಕ್ ಪಾಂಡ್ಯ ತಂಡದ ನಾಯಕನಿಗೆ ತಕ್ಕ ಆಟವಾಡಿದ್ರು. ಅಂತಿಮವಾಗಿ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.

ರಾಜಸ್ತಾನ್ ರಾಯಲ್ಸ್ ಪರ ಕುಲ್‌ದೀಪ್ ಸೇನ್, ಯುಜವೇಂದ್ರ ಚಹಾಲ್, ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದಿದ್ದಾರೆ.

Story first published: Thursday, April 14, 2022, 21:38 [IST]
Other articles published on Apr 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+