For Quick Alerts
ALLOW NOTIFICATIONS  
For Daily Alerts
 

RCB vs RR: ಸೀಸನ್‌ನಲ್ಲಿ 4ನೇ ಶತಕ, ಒಟ್ಟು 800ಕ್ಕೂ ಹೆಚ್ಚು ರನ್ ದಾಖಲಿಸಿದ ಜೋಸ್ ಬಟ್ಲರ್‌

Jos butler

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 15ನೇ ಸೀಸನ್‌ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಜೋಸ್ ಬಟ್ಲರ್ ತಂಡವನ್ನ ಗೆಲ್ಲಿಸಿದ್ದಷ್ಟೇ ಅಲ್ಲದೆ ವಿಶೇಷ ದಾಖಲೆಯನ್ನ ಮಾಡಿದ್ದಾರೆ.

ಐಪಿಎಲ್ 15ನೇ ಸೀಸನ್‌ನ 4ನೇ ಶತಕ ಹಾಗೂ ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿಗೆ ಮೂರಂಕಿ ಗಡಿ ದಾಟಿದ ಜೋಸ್ ಬಟ್ಲರ್‌ ಅಮೋಘ ದಾಖಲೆ ಮಾಡಿದ್ದಲ್ಲದೆ, ಆರ್‌ಸಿಬಿಯಿಂದ ಗೆಲುವನ್ನು ಕಸಿದುಕೊಂಡಿದ್ದಾರೆ. ಜೋಸ್ ಬಟ್ಲರ್ ಅಬ್ಬರದ ಆಟದಿಂದಾಗಿ ರಾಜಸ್ತಾನ್ ರಾಯಲ್ಸ್‌ ಏಳು ವಿಕೆಟ್‌ಗಳ ಗೆಲುವು ದಾಖಲಿಸಿದ್ದಲ್ಲದೆ ಫೈನಲ್ ಪ್ರವೇಶಿಸಿತು.

59 ಎಸೆತಗಳಲ್ಲಿ ಶತಕ ಸಿಡಿಸಿದ ಬಟ್ಲರ್

59 ಎಸೆತಗಳಲ್ಲಿ ಶತಕ ಸಿಡಿಸಿದ ಬಟ್ಲರ್

ಆರ್‌ಸಿಬಿ ವಿರುದ್ಧ ಆರಂಭಿಕ ಓವರ್‌ನಿಂದಲೇ ಮಿಂಚಿನ ಆಟ ಪ್ರದರ್ಶಿಸಿದ ಜೋಸ್ ಬಟ್ಲರ್‌ ಕೇವಲ 59 ಎಸೆತಗಳಲ್ಲಿ ಶತಕ ದಾಖಲಿಸಿದರು. ಪಂದ್ಯದ ಕೊನೆಯವರೆಗೂ ಅಜೇಯರಾಗಿ ಉಳಿದ ರಾಯಲ್ಸ್‌ ಬ್ಯಾಟ್ಸ್‌ಮನ್ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

60 ಎಸೆತಗಳಲ್ಲಿ ಅಜೇಯ 106 ರನ್ ಕಲೆಹಾಕಿದ ಜೋಸ್ ಬಟ್ಲರ್‌ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಆರು ಅಮೋಘ ಸಿಕ್ಸರ್‌ಗಳಿದ್ದವು.

RCB vs RR: ಬಟ್ಲರ್ ಕ್ಯಾಚ್ ಬಿಟ್ಟ ದಿನೇಶ್ ಕಾರ್ತಿಕ್, ಮತ್ತೆ ಆರ್‌ಸಿಬಿ ಕೈ ಜಾರಿದ ಟ್ರೋಫಿ!

ಕೊಹ್ಲಿ ದಾಖಲೆ ಸರಿಗಟ್ಟಿದ ರಾಜಸ್ತಾನ್ ರಾಯಲ್ಸ್ ಓಪನರ್

ಕೊಹ್ಲಿ ದಾಖಲೆ ಸರಿಗಟ್ಟಿದ ರಾಜಸ್ತಾನ್ ರಾಯಲ್ಸ್ ಓಪನರ್

ಐಪಿಎಲ್ ಒಟ್ಟಾರೆ ಇತಿಹಾಸದಲ್ಲಿ ಜಾಸ್ ಬಟ್ಲರ್ ಐದನೇ ಶತಕ ದಾಖಲಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನ ಸರಿಗಟ್ಟಿದ್ದಾರೆ. ಆರ್‌ಸಿಬಿ ಸೂಪರ್‌ಸ್ಟಾರ್‌ ಕೊಹ್ಲಿ ಒಟ್ಟಾರೆ ಐದು ಶತಕ ದಾಖಲಿಸಿದ್ದು, ಅಷ್ಟೇ ಮಟ್ಟಿಗೆ ಜಾಸ್ ಬಟ್ಲರ್ ಶತಕ ದಾಖಲಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ವೆಸ್ಟ್‌ ಇಂಡೀಸ್ ದೈತ್ಯ ಕ್ರಿಸ್‌ಗೇಲ್‌ ಐಪಿಎಲ್‌ನಲ್ಲಿ ಒಟ್ಟಾರೆ ಆರು ಶತಕ ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್‌ 2022ರಲ್ಲಿ ನಾಲ್ಕು ಶತಕ ಸಿಡಿಸಿದ ಜಾಸ್ ಬಟ್ಲರ್, ವಿರಾಟ್ ಕೊಹ್ಲಿ 2016ರಲ್ಲಿ ದಾಖಲಿಸಿದ್ದ 4 ಶತಕದ ದಾಖಲೆಯನ್ನೂ ಸಹ ಸರಿಗಟ್ಟಿದ್ದಾರೆ. ಇವರಿಬ್ಬರನ್ನ ಹೊರತುಪಡಿಸಿ ಮೈಕಲ್ ಕ್ಲಿಂಗರ್ 2015ರಲ್ಲಿ 3 ಸೆಂಚುರಿ ಸಿಡಿಸಿದ್ರು.

ಆಡಿದ್ದು ಸಾಕು, ಮೊದಲು ಸ್ಟೇಡಿಯಂನಿಂದ ಆಚೆ ನಡೆಯಪ್ಪ: ಆರ್‌ಸಿಬಿ ಸ್ಟಾರ್ ಪ್ಲೇಯರ್ ವಿರುದ್ಧ ಫ್ಯಾನ್ಸ್ ಆಕ್ರೋಶ!

RCB ಅಭಿಮಾನಿಗಳು ಮತ್ತೊಂದು ವರ್ಷ ಕಾಯಲು ರೆಡಿ | Oneindia Kannada
800ಕ್ಕೂ ಹೆಚ್ಚು ರನ್ ಕಲೆಹಾಕಿ ಬಟ್ಲರ್ ದಾಖಲೆ

800ಕ್ಕೂ ಹೆಚ್ಚು ರನ್ ಕಲೆಹಾಕಿ ಬಟ್ಲರ್ ದಾಖಲೆ

ಐಪಿಎಲ್ 15ನೇ ಸೀಸನ್‌ನಲ್ಲಿ ಜಾಸ್ ಬಟ್ಲರ್ ಬರೋಬ್ಬರಿ 800ಕ್ಕೂ ಹೆಚ್ಚು ರನ್ ಕಲೆಹಾಕುವ ಮೂಲಕ ಅಮೋಘ ದಾಖಲೆ ಮಾಡಿದ್ದಾರೆ. 16 ಪಂದ್ಯಗಳಲ್ಲಿ 824 ರನ್ ಕಲೆಹಾಕಿರುವ ಮೂಲಕ ಜಾಸ್ ಬಟ್ಲರ್ 4 ಶತಕ ಹಾಗೂ 4 ಅರ್ಧಶತಕ ದಾಖಲಿಸಿ ಅಗ್ರಸ್ಥಾನದಲ್ಲಿದ್ದಾರೆ.

ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 2016ನೇ ಸೀಸನ್‌ನಲ್ಲಿ 4 ಶತಕ ಸಿಡಿಸಿದ್ದು, 900ಕ್ಕೂ ಹೆಚ್ಚು ರನ್ ಕಲೆಹಾಕಿದ್ದರು.

Story first published: Saturday, May 28, 2022, 9:41 [IST]
Other articles published on May 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+