IPL 2022: ಈ ಐವರು ಆಟಗಾರರು ಮುಂದಿನ ಐಪಿಎಲ್ ಸೀಸನ್ ಆಡುವುದು ಡೌಟ್

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಸ್ಪರ್ಧೆಯಲ್ಲಿ ಅನೇಕ ಯುವ ಆಟಗಾರರು, ಅನುಭವಿ ಆಟಗಾರರು, ಅಂತರಾಷ್ಟ್ರೀಯ ಲೆಜೆಂಡ್‌ಗಳು ಸಹ ಭಾಗಿಯಾಗಿದ್ದನ್ನ ನಾವು ಕಂಡಿದ್ದೇವೆ. ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ 10 ತಂಡಗಳ ಸ್ಪರ್ಧೆಯಿಂದಾಗಿ ಹಲವು ಆಟಗಾರರಿಗೆ ಐಪಿಎಲ್‌ನಲ್ಲಿ ವೇದಿಕೆ ಸಿಕ್ಕಿದೆ.
ಐಪಿಎಲ್ 2022 ಸೀಸನ್ ಈಗಾಗಲೇ ಅಂತಿಮ ಘಟಕ್ಕೆ ಬಂದು ತಲುಪಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಗೆದ್ದ ಗುಜರಾತ್ ಟೈಟನ್ಸ್ ಫೈನಲ್ ಪ್ರವೇಶಿಸಿದೆ. ಟೂರ್ನಿಯ ರೋಚಕತೆಯನ್ನ ಮತ್ತಷ್ಟು ಹೆಚ್ಚಿರುವ ಈ ಐಪಿಎಲ್ ವಿಶ್ವದಲ್ಲಿಯೇ ಪ್ರಬಲ ಟಿ20 ಲೀಗ್ ಆಗಿ ಬೆಳೆದುನಿಂತಿದೆ.
ಅದರಲ್ಲೂ ವಿದೇಶಿ ಆಟಗಾರರಿಗೆ ಐಪಿಎಲ್ ಭಾಗಿಯಾಗುವುದು ತುಂಬಾ ವಿಶೇಷವಾಗಿದೆ. ಏಕೆಂದರೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೇವಲ ನಾಲ್ಕು ಆಟಗಾರರಿಗೆ ಮಾತ್ರ ಆಡುವ 11 ರ ಭಾಗವಾಗಲು ಅವಕಾಶವಿದೆ. ಈ ಲೇಖನದಲ್ಲಿ, ಕಳಪೆ ಫಾರ್ಮ್ ಅಥವಾ ಕಾರಣದಿಂದ ಮುಂದಿನ ಋತುವಿನ IPL ಸೀಸನ್‌ನಲ್ಲಿ ಆಡದಿರುವ ಐದು ಆಟಗಾರರನ್ನು ನಿಮಗೆ ತಿಳಿಸಲಾಗಿದೆ.

ಬೆನ್ನಿ ಹೋವೆಲ್
ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಬೆನ್ನಿ ಹೋವೆಲ್‌ರನ್ನು ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಬಿಡ್ ಮಾಡಿ ಪಡೆದುಕೊಂಡಿತು. ಆದ್ರೆ ಈ ಇಂಗ್ಲಿಷ್ ಆಲ್‌ರೌಂಡರ್ ಸೀಸನ್‌ನ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾದಿದ್ದೇ ಹೆಚ್ಚು. ಬೆನ್ನಿ ಹೋವೆಲ್‌ಗೆ ತನ್ನ ಸಾಮರ್ಥ್ಯ ಪ್ರದರ್ಶಿಸಲು ಒಂದೂ ಅವಕಾಶ ನೀಡದೇ ಇರುವುದು ಈ ಕ್ರಿಕೆಟಿಗನಿಗೆ ಅಸಮಾಧಾನ ತರಿಸಿದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲೂ ಈತನಿಗೆ ಅವಕಾಶ ನೀಡದೇ ಇದ್ದಾಗ ಬೆನ್ನಿ ಹೋವೆಲ್ ಅವರು ಒಂದೆರಡು ಅರ್ಥವಾಗದ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಟ್ವೀಟ್‌ಗಳು ಪಂಜಾಬ್ ಮ್ಯಾನೇಜ್‌ಮೆಂಟ್ ಅವರಿಗೆ ಒಂದು ಅವಕಾಶವನ್ನೂ ನೀಡದಿದ್ದಕ್ಕಾಗಿ ಗೇಲಿ ಮಾಡುವ ಗುರಿಯನ್ನು ಹೊಂದಿವೆ.
ಮುಂದಿನ ಸೀಸನ್‌ನಲ್ಲಿ ಫ್ರ್ಯಾಂಚೈಸ್‌ನಿಂದ ಬೆನ್ನಿ ಹೋವೆಲ್ ಬಿಡುಗಡೆ ಮಾಡಲಾಗುವುದು ಎಂಬ ಸಂದೇಶವನ್ನು ಇದು ಸ್ಪಷ್ಟವಾಗಿ ನೀಡುತ್ತಿದೆ.
ನಮ್ಮೂರ ಪ್ರತಿಭೆ: ಅತ್ಯಂತ ಸಾಹಸ ಹಾಗೂ ಕಠಿಣ ಕ್ರೀಡೆಯಲ್ಲಿ ಕೊಡಗಿನ ಕೆಸಿ ಗಣಪತಿ ಸಾಧನೆ

ಡೆರಿಲ್ ಮಿಚೆಲ್
ನ್ಯೂಜಿಲೆಂಡ್‌ನ ಈ ಕ್ರಿಕೆಟಿಗ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಆಗಿದ್ದು, ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಕಿವೀಸ್ ಬ್ಯಾಟರ್ ಅನ್ನು ರಾಜಸ್ತಾನ್ ರಾಯಲ್ಸ್ ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ಖರೀದಿಸಿತು.
ಐಪಿಎಲ್ 2022ರ ಸೀಸನ್‌ನಲ್ಲಿ ಕೇವಲ ಎರಡು ಪಂದ್ಯಗಳನ್ನ ಆಡಿದ ಈ ಬ್ಯಟರ್ 16.50 ಸರಾಸರಿಯಲ್ಲಿ ಕೇವಲ 33 ರನ್ ಕಲೆಹಾಕಿದರು. ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್ ಮತ್ತು ಜಾಸ್ ಬಟ್ಲರ್‌ರಂತಹ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳಿರುವುದರೀಮದ ಡೆರಿಲ್ ಮಿಚೆಲ್‌ಗೆ ಹೆಚ್ಚು ಅವಕಾಶ ಲಭಿಸಲಿಲ್ಲ.
ಡೆರಿಲ್ ಮಿಚೆಲ್ ಪ್ರದರ್ಶನ ನೋಡಿದ್ರೆ ಮುಂದಿನ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅನ್‌ಸೋಲ್ಡ್ ಆಗುವ ಸಾಧ್ಯತೆ ಹೆಚ್ಚಿದೆ.
RCB vs LSG: ಎಲಿಮಿನೇಟರ್ ಪಂದ್ಯದಲ್ಲಿ ಈ ಮೈಲಿಗಲ್ಲುಗಳ ಮೇಲೆ ಕೊಹ್ಲಿ, ರಾಹುಲ್, ಸಿರಾಜ್ ಕಣ್ಣು

ಆ್ಯರೊನ್ ಫಿಂಚ್
ಆಸ್ಟ್ರೇಲಿಯಾದ ಲಿಮಿಟೆಡ್ ಓವರ್ ಕ್ರಿಕೆಟ್ ನಾಯಕ ಆ್ಯರೊನ್ ಫಿಂಚ್ ಐಪಿಎಲ್‌ನಲ್ಲಿ ಬಹುತೇಕ ಎಲ್ಲಾ ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ಈ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಆ್ಯರೋನ್ ಫಿಂಚ್ ರನ್ನು ಅಲೆಕ್ಸ್ ಹೇಲ್ಸ್ ಬದಲಿಗೆ ಖರೀದಿಸಿತು.
ಕೆಲವೊಂದು ಸಾಧಾರಣ ಪ್ರದರ್ಶನ ತೋರಿದ ಬಳಿಕ ಆ್ಯರೋನ್ ಫಿಂಚ್‌ಗೆ ಹೆಚ್ಚು ಅವಕಾಶ ನೀಡಲಿಲ್ಲ. ಸೀಸನ್‌ನ ಕೊನೆಯವರೆಗೂ ಫಿಂಚ್ ಬೆಂಚ್ ಕಾದಿದ್ದೇ ಹೆಚ್ಚು.
ಆ್ಯರೋನ್ ಫಿಂಚ್ ಮತ್ತೊಮ್ಮೆ ಹರಾಜು ಪೂಲ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೂ ಸಹ ಅನ್‌ಸೋಲ್ಡ್ ಆಗುವ ಸಾಧ್ಯತೆ ಹೆಚ್ಚಿದೆ. ಆದ್ರೆ ಆಸ್ಟ್ರೇಲಿಯಾದಲ್ಲೇ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಫಿಂಚ್ ಮಿಂಚಿದ್ರೆ ಮಾತ್ರ ಮತ್ತೆ ಐಪಿಎಲ್ ಫ್ರಾಂಚೈಸಿಗಳು ಆತನತ್ತ ಗಮನಹರಿಸಬಹುದು.
RCB vs LSG IPL 2022 Eliminator : ಎರಡೂ ತಂಡಗಳ ಬಲ ಮತ್ತು ದೌರ್ಬಲ್ಯಗಳ ಪಟ್ಟಿ; ಬಲಿಷ್ಠ ತಂಡ ಯಾವುದು?

ಡೇವಿಡ್ ವಿಲ್ಲಿ
ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಕೆಲವು ಪಂದ್ಯಗಳನ್ನ ಆಡಿದ ಡೇವಿಡ್ ವಿಲ್ಲಿಗೆ ತಂಡದ ಮ್ಯಾನೇಜ್‌ಮೆಂಟ್ ಮತ್ತೆ ಅವಕಾಶ ಒದಗಿಸಲಿಲ್ಲ. ಆರ್‌ಸಿಬಿ ಕ್ಯಾಂಪೈನ್‌ನಲ್ಲಿ ದೊಡ್ಡ ಪಾತ್ರವನ್ನ ನಿರ್ವಹಿಸುತ್ತಿರುವ ಇತರೆ ಆಟಗಾರರ ನಡುವೆ ಡೇವಿಡ್ ವಿಲ್ಲಿಯ ಸಾಧಾರಣ ಪ್ರದರ್ಶನ ಅವರಿಗೆ ಹೆಚ್ಚು ಅವಕಾಶ ಒದಗಿಸಲಿಲ್ಲ.
ಬೆಂಗಳೂರು ಜೇಸನ್ ಬೆಹ್ರೆನ್‌ಡಾರ್ಫ್ ರೂಪದಲ್ಲಿ ಮತ್ತೊಬ್ಬ ಎಡಗೈ ವಿದೇಶಿ ವೇಗಿಗಳನ್ನು ಹೊಂದಿದೆ, ಅವರು ಮುಂದಿನ ಋತುವಿಗೆ ಆದ್ಯತೆ ನೀಡಬಹುದು. ಅಂತೆಯೇ, 2023 ರ ಐಪಿಎಲ್ ಹರಾಜಿನಲ್ಲಿ ಡೇವಿಡ್ ವಿಲ್ಲಿಯನ್ನು ಫ್ರಾಂಚೈಸಿ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಬಹುದು.

ಮ್ಯಾಥ್ಯೂ ವೇಡ್
ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಈ ಬಾರಿ ಐಪಿಎಲ್ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದಾರೆ. ಗುಜರಾತ್ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪರ್ ಆಗಿದ್ದು, ಕ್ವಾಲಿಫೈಯರ್‌ನಲ್ಲಿ ರಾಜಸ್ತಾನ್ ವಿರುದ್ಧ ಗೆದ್ದು ಫೈನಲ್ ತಲುಪಿದೆ.
ತಂಡದಲ್ಲಿ ಹೆಚ್ಚಿನ ಅವಕಾಶ ಒದಗಿಸಿದರು ಸಹ ಮ್ಯಾಥ್ಯೂ ವೇಡ್ ಒಂದೂ ಅರ್ಧಶತಕವನ್ನು ದಾಖಲಿಸಲು ವಿಫಲರಾಗಿದ್ದಾರೆ. ರಾಜಸ್ತಾನ್ ರಾಯಲ್ಸ್ ವಿರುದ್ಧ 39ರನ್ ಕಲೆಹಾಕಿರುವುದೇ ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ. ಹೀಗಾಗಿ ಮುಂದಿನ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಈತನನ್ನ ಉಳಿಸಿಕೊಳ್ಳುತ್ತದೆ ಎಂಬ ಯಾವುದೇ ಗ್ಯಾರೆಂಟಿ ಇಲ್ಲ.
ಮ್ಯಾಥ್ಯೂ ವೇಡ್ ಈ ಸೀಸನ್‌ನಲ್ಲಿ 9 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರು 16.56 ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 149 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 116.41 ರಲ್ಲಿ ಸ್ಟ್ರೈಕ್ ರೇಟ್ ಅನ್ನು ಗಳಿಸಿರುವ ವೇಡ್, ಈ ಋತುವಿನಲ್ಲಿ ಅವರು ನಿರೀಕ್ಷಿಸಿದ ಅಂಕಿಅಂಶಗಳಿಗೆ ಎಲ್ಲೂ ಹತ್ತಿರವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications