ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಅತ್ಯಂತ ಸಾಹಸ ಹಾಗೂ ಕಠಿಣ ಕ್ರೀಡೆಯಲ್ಲಿ ಕೊಡಗಿನ ಕೆಸಿ ಗಣಪತಿ ಸಾಧನೆ

Nammura Pratibhe: Short story of Kodagu based sailor KC Ganapathy

ಕ್ರೀಡೆಯಲ್ಲಿನ ಅತ್ಯಂತ ಕಠಿಣ ಹಾಗೂ ಸಾಹಸಯುತ ಕ್ರೀಡೆಗಳಲ್ಲಿ ಒಂದಾದ ಸೇಲಿಂಗ್ ಅಂದರೆ ನೌಕಾಯಾನದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆ ತೀರಾ ಕಡಿಮೆ. ಇಂಥ ಕಠಿಣ ಕ್ರೀಡೆಯನ್ನು ಆರಿಸಿಕೊಂಡು ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಸಾಧನೆಗಳನ್ನು ಮಾಡಿರುವ ಕೆಸಿ ಗಣಪತಿ ಬೆಳೆದದ್ದು ತಮಿಳುನಾಡಿನ ಚೆನ್ನೈನಲ್ಲಾದರೂ ಮೂಲತಃ ಕೊಡಗಿನವರು.

ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ಟ್ರೋಫಿ ಕನಸು ಭಗ್ನ; ಪ್ಲೇಆಫ್ ಹೊಸ ನಿಯಮ ಏನು ಹೇಳುತ್ತೆ?ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ಟ್ರೋಫಿ ಕನಸು ಭಗ್ನ; ಪ್ಲೇಆಫ್ ಹೊಸ ನಿಯಮ ಏನು ಹೇಳುತ್ತೆ?

ಕೊಡಗು ಮೂಲದ ಕೇಳಪಂಡ ಚೆಂಗಪ್ಪ ಗಣಪತಿ ಲೇಟ್ ಕೇಳಪಂಡ ದೀಪಕ್ ಚೆಂಗಪ್ಪ ಮತ್ತು ರೇಷ್ಮಾ ಚೆಂಗಪ್ಪನವರ ಪುತ್ರನಾಗಿದ್ದು, 1995ರ ಜುಲೈ 6ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು ತನ್ನ ಆರನೇ ವಯಸ್ಸಿನಿಂದಲೂ ಸೇಲಿಂಗ್‌ನತ್ತ ಅತೀವ ಆಸಕ್ತಿಯನ್ನು ಹೊಂದಿದ್ದು, ತನ್ನ ಸ್ನೇಹಿತನೊಬ್ಬನ ತಂದೆಯಿಂದ ಉತ್ತಮ ತರಬೇತಿಯನ್ನು ಪಡೆದುಕೊಂಡರು. 2007ರಿಂದ ಭಾರತ ತಂಡದಲ್ಲಿ ಇರುವ ಕೇಳಪಂಡ ಚೆಂಗಪ್ಪ ಗಣಪತಿ 2010ರ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು ಹಾಗೂ 2018ರ ಏಷ್ಯಮ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.

ಅತಿ ಹೆಚ್ಚು ಬಾರಿ ಪ್ಲೇ ಆಫ್ ತಲುಪಿರುವ ಐಪಿಎಲ್ ತಂಡಗಳು: ಆರ್‌ಸಿಬಿಗೆ ಎಷ್ಟನೇ ಸ್ಥಾನ?ಅತಿ ಹೆಚ್ಚು ಬಾರಿ ಪ್ಲೇ ಆಫ್ ತಲುಪಿರುವ ಐಪಿಎಲ್ ತಂಡಗಳು: ಆರ್‌ಸಿಬಿಗೆ ಎಷ್ಟನೇ ಸ್ಥಾನ?

ತಮ್ಮ ಗೆಳೆಯ ವರುಣ್ ಥಾಕ್ಕರ್ ಜತೆ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಇವರು ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೂ ಸಹ ಭಾಗವಹಿಸಿದ್ದರು.

ಕೇಳಪಂಡ ಚೆಂಗಪ್ಪ ಗಣಪತಿ ಸಾಧನೆಗಳು

ಕೇಳಪಂಡ ಚೆಂಗಪ್ಪ ಗಣಪತಿ ಸಾಧನೆಗಳು

U-12 ರಾಷ್ಟ್ರೀಯ ಸೈಲಿಂಗ್ ಚಾಂಪಿಯನ್‌ಶಿಪ್ 2006: ಚಿನ್ನದ ಪದಕ
YAI ಕಂಬೈನ್ಡ್ ಕ್ಲಾಸ್ ರೆಗಟ್ಟಾ (ಬಾಲಕರ) 2009: ಕಂಚಿನ ಪದಕ
29er ಇನ್‌ಲ್ಯಾಂಡ್ ನ್ಯಾಷನಲ್ ಚಾಂಪಿಯನ್‌ಶಿಪ್ 2014: ಚಿನ್ನದ ಪದಕ
ಏಷ್ಯನ್ ಗೇಮ್ಸ್ 2018: ಕಂಚಿನ ಪದಕ
49ER ಏಷ್ಯನ್ ಚಾಂಪಿಯನ್‌ಶಿಪ್
M2019 ರ ಏಷ್ಯನ್ ಚಾಂಪಿಯನ್‌ಶಿಪ್
M2019 ಓಪನ್ ಪದಕ

ಶಾಲೆ ಬಿಟ್ಟು ಅಭ್ಯಾಸ ನಡೆಸಿದ್ದ ಗಣಪತಿ

ಶಾಲೆ ಬಿಟ್ಟು ಅಭ್ಯಾಸ ನಡೆಸಿದ್ದ ಗಣಪತಿ

ಇನ್ನು ಕೇಳಪಂಡ ಚೆಂಗಪ್ಪ ಗಣಪತಿ ಅವರು 2010ರಲ್ಲಿ ಶಾಲೆ ಬಿಟ್ಟು ಅಭ್ಯಾಸ ನಡೆಸಿದ್ದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಇವರು ಸೇಲಿಂಗ್‌ನಲ್ಲಿ ಸಾಧನೆ ಮಾಡಬೇಕೆಂಬ ಹಠದಿಂದ ಶಾಲೆ ತ್ಯಜಿಸಿದ್ದನ್ನು ಸ್ವತಃ ಅವರೇ ಬಿಚ್ಚಿಟ್ಟಿದ್ದರು.

ಸೇಲಿಂಗ್ ತರಬೇತಿ ದುಬಾರಿ

ಸೇಲಿಂಗ್ ತರಬೇತಿ ದುಬಾರಿ

ಇನ್ನು ಈ ಸೇಲಿಂಗ್ ಅಭ್ಯಾಸ ಮತ್ತು ತರಬೇತಿಗೆ ತಗಲುವ ವೆಚ್ಚ ದುಬಾರಿಯದ್ದಾಗಿದೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಕೆಸಿ ಗಣಪತಿ ಈ ಕಷ್ಟದ ನಡುವೆಯೂ ಅಭ್ಯಾಸವನ್ನು ನಡೆಸಿ ಸೇಲಿಂಗ್ ಪಟು ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಸೇಲಿಂಗ್ ಕ್ರೀಡೆ ದುಬಾರಿಯ ಜತೆಗೆ ತುಂಬಾ ಅಪಯಕಾರಿಯೂ ಹೌದು. ತುಂಬಾ ಆಳವಿರುವ ನೀರಿನಲ್ಲಿ ಅಭ್ಯಾಸ ನಡೆಸಿದರೆ ಮಾತ್ರ ಯಶಸ್ವಿಯಾಗುವಂತಹ ಕಠಿಣತೆಯ ಸಂದರ್ಭಗಳನ್ನು ಎದುರಿಸಿದರೆ ಮಾತ್ರ ಈ ಸೇಲಿಂಗ್ ಕರಗತ ಸಾಧ್ಯ.

Story first published: Monday, May 23, 2022, 19:13 [IST]
Other articles published on May 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X