RCB ಅಭಿಮಾನಿಗಳಿಗೆ ಕೊಹ್ಲಿ ಸಂದೇಶ: ಬೆಂಗಳೂರಿನಲ್ಲಿ ನಡೆಯಲಿದೆ ಮಾ.12ಕ್ಕೆ Unbox Event

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಮುಂದಿನ ಐಪಿಎಲ್ ಸೀಸನ್‌ಗೆ ಸಾಕಷ್ಟು ಕಾತುರರಾಗಿದ್ದು, 2022ರ ಸೀಸನ್‌ನಲ್ಲಿ ಆರ್‌ಸಿಬಿ ತಂಡವನ್ನ ಯಾರು ಮುನ್ನಡೆಸಲಿದ್ದಾರೆ ಎಂದು ಎದುರು ನೋಡುತ್ತಿದ್ದಾರೆ.
ಈಗಾಗಲೇ ಐಪಿಎಲ್ 15ನೇ ಸೀನಸ್‌ನಲ್ಲಿ ಭಾಗವಹಿಸುತ್ತಿರುವ 10 ತಂಡಗಳಲ್ಲಿ ಇನ್ನೂ ನಾಯಕನನ್ನ ಘೋಷಿಸಿದ ಏಕೈಕ ತಂಡವಾಗಿ ಆರ್‌ಸಿಬಿ ಉಳಿದಿದೆ. ಇದೇ ತಿಂಗಳ ಮಾರ್ಚ್ 12ರಂದು ಆರ್‌ಸಿಬಿ ಬೆಂಗಳೂರಿನಲ್ಲಿ ಅನ್‌ಬಾಕ್ಸ್ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್, ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ಮಧ್ಯಾಹ್ನ 12ರಿಂದ ಸಂಜೆ 8 ಗಂಟೆಯವರೆಗೆ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮವನ್ನ ಏರ್ಪಡಿಸಲಾಗಿದ್ದು, ಇದೇ ಸಮಯದಲ್ಲಿ ಆರ್‌ಸಿಬಿ ತನ್ನ ಮುಂದಿನ ನಾಯಕನನ್ನ ಘೋಷಿಸುವ ಸಾಧ್ಯತೆ ಇದೆ.
ಆರ್‌ಸಿಬಿಯ ಈ ಕಾರ್ಯಕ್ರಮ ಕುರಿತು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ಉತ್ಸುಕರಾಗಿದ್ದು, ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ''ನವೀಕರಿಸಿದ ಶಕ್ತಿ, ಹೊಸ ಐಪಿಎಲ್ ಸೀಸನ್‌ಗಾಗಿ ಉತ್ಸುಕನಾಗಿದ್ದೇನೆ. ಒಂದು ಪ್ರಮುಖ ಸುದ್ದಿ ಇದೆ'' ಎಂದು ವಿರಾಟ್ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ವೀಡಿಯೋ ಸಂದೇಶ ನೀಡಿದ್ದಾರೆ. ಆದ್ರೆ ಸಂಪೂರ್ಣ ವೀಡಿಯೋವನ್ನ ತಿಳಿಸಿದ ಫ್ರಾಂಚೈಸಿ ಕಾಯಕ್ರಮದ ಕುರಿತು ಸಾಕಷ್ಟು ಗೌಪ್ಯತೆ ಕಾಪಾಡಿದೆ.
ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗುವುದು ಅನುಮಾನ!
ವಿರಾಟ್ ಕೊಹ್ಲಿ ಆರ್‌ಸಿಬಿ ಮತ್ತೆ ನಾಯಕನಾಗುವ ಅನುಮಾನ ವ್ಯಕ್ತವಾಗಿದೆ. ಈಗಾಗಲೇ ಕೊಹ್ಲಿ ನಾಯಕನಾಗುವ ಅವಕಾಶವಿಲ್ಲ ಎಂದು ನ್ಯೂಜಿಲೆಂಡ್‌ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ. ಕೊಹ್ಲಿ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೆ ನಾಯಕನಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಗಳಾಗಿ ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಹೆಸರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್‌ಮೆಂಟ್ ಪರಿಗಣಿಸುತ್ತಿದೆ ಎಂದು ವೆಟ್ಟೋರಿ ಹೇಳಿದರು. ಇದೇ ವೇಳೆಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ನಾಯಕರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ವೆಟ್ಟೋರಿ ಹೇಳಿದರು.
ಮಹಿಳಾ ವಿಶ್ವಕಪ್: ಹರ್ಮನ್‌ಪ್ರೀತ್ ಏಕಾಂಗಿ ಹೋರಾಟ ವ್ಯರ್ಥ: ಕಿವೀಸ್ ಪಡೆ ವಿರುದ್ಧ ಭಾರತಕ್ಕೆ ಸೋಲು

ಮಾರ್ಚ್ 26ರಿಂದ ಐಪಿಎಲ್ ಟೂರ್ನಿ ನಡೆಯಲಿದೆ
ಈ ಸೀಸನ್ ಐಪಿಎಲ್ ಇದೇ ತಿಂಗಳ 26ರಿಂದ ಆರಂಭವಾಗಲಿದೆ. ಬಿಸಿಸಿಐ ಈಗಾಗಲೇ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 29 ರಂದು ಅಂತಿಮ ಪಂದ್ಯದೊಂದಿಗೆ ಪಂದ್ಯಾವಳಿಯು ಮುಕ್ತಾಯಗೊಳ್ಳುತ್ತದೆ. ಇಡೀ ಟೂರ್ನಿಯಲ್ಲಿ 74 ಪಂದ್ಯಗಳಲ್ಲಿ 10 ತಂಡಗಳು ಸ್ಪರ್ಧಿಸುತ್ತಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಎದುರಿಸಲಿದೆ.
ಐಪಿಎಲ್ 2022: "ಯಶಸ್ವಿ ನಾಯಕನಾಗುವ ಎಲ್ಲಾ ಅರ್ಹತೆಗಳು ಕೂಡ ಹಾರ್ದಿಕ್ ಪಾಂಡ್ಯ ಬಳಿ ಇದೆ"

ಆರ್‌ಸಿಬಿ ಸ್ಕ್ವಾಡ್ 2022
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್, ಹರ್ಷಲ್ ಪಟೇಲ್ , ವನಿಂದು ಹಸರಂಗ , ದಿನೇಶ್ ಕಾರ್ತಿಕ್ , ಜೋಶ್ ಹೇಜಲ್‌ವುಡ್ , ಶಹಬಾಜ್ ಅಹ್ಮದ್ , ಅನುಜ್ ರಾವತ್ , ಆಕಾಶ್ ದೀಪ್ ಸಿಂಗ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್ , ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡಾರ್ಫ್ , ಸುಯಶ್ ಪ್ರಭುದೇಸಾಯಿ , ಚಾಮಾ ಮಿಲಿಂದ್ , ಅನೀಶ್ವರ್ ಗೌತಮ್ , ಕರಣ್ ಶರ್ಮಾ , ಲುವ್ನಿತ್ ಸಿಸೋಡಿಯಾ , ಸಿದ್ಧಾರ್ಥ್ ಕೌಲ್ , ಡೇವಿಡ್ ವಿಲ್ಲೆ , ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications