
ಕೊನೆಯ 3 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿದ ಶಶಾಂಕ್ ಸಿಂಗ್
ಮುಂಬೈ ಮೂಲದ ಶಶಾಂಕ್ ಸಿಂಗ್ ಎದುರಿಸಿದ 6 ಎಸೆತಗಳಲ್ಲಿ ಬರೋಬ್ಬರಿ 416.67 ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 25ರನ್ ಸಿಡಿಸುವ ಮೂಲಕ ದಿಗ್ಭ್ರಮೆ ಮೂಡಿಸಿದ್ರು. 1 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿದರು. ಫರ್ಗುಸನ್ ಕೊನೆಯ ಓವರ್‌ನ ಕೊನೆಯ ಮೂರು ಎಸೆತಗಳನ್ನು ಸಿಕ್ಸರ್‌ಗಳನ್ನಾಗಿ ಪರಿವರ್ತಿಸುವ ಮೂಲಕ ಹೈದರಾಬಾದ್‌ಗೆ ಬೃಹತ್ ಮೊತ್ತವನ್ನು ಸೇರಿಸಿದರು.
IPL 2022: ಗುಜರಾತ್ ಟೈಟನ್ಸ್ ಅಬ್ಬರ, ಅಂಕಪಟ್ಟಿಯಲ್ಲಿ ಸ್ಥಾನ ಮತ್ತಷ್ಟು ಭದ್ರ

ಮುಂಬೈನಲ್ಲೇ ಹುಟ್ಟಿ ಬೆಳೆದ ಕ್ರಿಕೆಟರ್ ಶಶಾಂಕ್
ಹೈದ್ರಾಬಾದ್ ಮತ್ತು ಗುಜರಾತ್ ನಡುವಿನ ಪಂದ್ಯ ನಡೆಯುವುದಕ್ಕೂ ಮೊದಲು ಶಶಾಂಕ್ ಸಿಂಗ್ ಯಾರೆಂದು ಬಹುತೇಕರಿಗೆ ತಿಳಿದಿರಲಿಲ್ಲ. ಆದ್ರೆ ಈ ಪಂದ್ಯ ಮುಗಿದ ಬಳಿಕ ಐಪಿಎಲ್‌ನ ಹೊಸ ಸೆನ್ಷೇಷನ್ ಬ್ಯಾಟರ್ ಆಗಿ ಶಶಾಂಕ್ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಟಿಗಳು, ಮಾಜಿ ಕ್ರಿಕೆಟರ್‌ಗಳು ಶಶಾಂಕ್‌ರನ್ನ ಹೊಗಳಿದ್ದಾರೆ.
ಜನವರಿ 21, 1991 ರಂದು ಮಹಾರಾಷ್ಟ್ರದ ಬಿಲಾಯಿನಲ್ಲಿ ಜನಿಸಿದ ಅವರು ನಂತರದಲ್ಲಿ ವಿದ್ಯಾಭ್ಯಾಸದ ಹಿನ್ನಲೆಯಲ್ಲಿ ಅವರ ಕುಟುಂಬದವು ಮುಂಬೈಗೆ ಬಂದರು. ಶಶಾಂಕ್ ಸಿಂಗ್ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. 30 ವರ್ಷದ ಶಶಾಂಕ್ ಸಿಂಗ್ ಕುರಿತು ಮೂರು ವಿಚಾರಗಳು ಮುಂದಿದೆ ಓದಿ
SRH vs GT: ತಾಳ್ಮೆ ಕಳೆದುಕೊಂಡು ಉಗ್ರಾವತಾರ ತಾಳಿದ ಮುರಳೀಧರನ್: ಅಭಿಮಾನಿಗಳು ಶಾಕ್: ವಿಡಿಯೋ

ಶಶಾಂಕ್ ಸಿಂಗ್ ಮೂರು ಪ್ರಮುಖ ಹೆಜ್ಜೆ
1. ಶಶಾಂಕ್ ಸಿಂಗ್ ಪ್ರಸ್ತುತ ಛತ್ತೀಸ್‌ಗಢ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿದ್ದಾರೆ. ಅವರು 2015-16 ವಿಜಯ್ ಹಜಾರೆ ಟ್ರೋಫಿಯ ಭಾಗವಾಗಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮುಂಬೈಗೆ ಪಾದಾರ್ಪಣೆ ಮಾಡಿದರು. ಅವರು 2019-20 ರ ರಣಜಿ ಟ್ರೋಫಿಯಲ್ಲಿ ಛತ್ತೀಸ್‌ಗಢಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
2. ಆಗಿನ ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ 2017 ರಲ್ಲಿ 10 ಲಕ್ಷ ರೂಪಾಯಿಗೆ ಅವರನ್ನು ಖರೀದಿಸಿತು. ಮುಂದಿನ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಅವರನ್ನು ಹರಾಜಿನಲ್ಲಿ ಖರೀದಿಸಿತು. ಆದರೂ ಅವರಿಗೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಅವರನ್ನು 20 ಲಕ್ಷ ರೂ.ಗೆ ಮೂಲ ಬೆಲೆಗೆ ಖರೀದಿಸಿತು.
3. ಶಶಾಂಕ್ ಸಿಂಗ್ ಐಪಿಎಲ್‌ನಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದಾರೆ ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ. ಅವರು ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನು ಮಾಡಿದರು. ಇತ್ತೀಚೆಗೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶಶಾಂಕ್ ಅಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯದ ಕೊನೆಯ ಎರಡು ಓವರ್‌ಗಳೊಂದಿಗೆ ಕಣಕ್ಕೆ ಇಳಿದ ಶಶಾಂಕ್ ಅಲ್ಜಾರಿ ಜೋಸೆಫ್ ಬೌಲಿಂಗ್‌ನಲ್ಲಿ ತಮ್ಮ ಮೊದಲ ಎಸೆತವನ್ನು ಎದುರಿಸಿದರು. ಬೌಂಡರಿಯೊಂದಿಗೆ ತಮ್ಮ ಬ್ಯಾಟಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಫರ್ಗುಸನ್ ಕೊನೆಯ ಓವರ್‌ನಲ್ಲಿ ಬೌಲಿಂಗ್ ಮಾಡಿದರು . ಈ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಆ ಓವರ್‌ನಲ್ಲಿ ಒಟ್ಟು 25 ರನ್‌ಗಳಿದ್ದಾಗ ಸನ್‌ರೈಸರ್ಸ್ 195 ರನ್‌ಗಳ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು.


Click it and Unblock the Notifications












