IPL 2022: ಗುಜರಾತ್ ಟೈಟನ್ಸ್ ಅಬ್ಬರ, ಅಂಕಪಟ್ಟಿಯಲ್ಲಿ ಸ್ಥಾನ ಮತ್ತಷ್ಟು ಭದ್ರ

ಐಪಿಎಲ್ 2022ರ ಸೀಸನ್‌ನ 40ನೇ ಪಂದ್ಯದಲ್ಲಿ ಗುಜರಾತ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದ್ರಾಬಾದ್ ನಡುವಿನ ಕಾಳಗ ಇಡೀ ಕ್ರಿಕೆಟ್ ಲೋಕಕ್ಕೆ ಸಾಕಷ್ಟು ಮನರಂಜನೆಯನ್ನ ನೀಡಿದ್ದಂತೂ ಸುಳ್ಳಲ್ಲ. ಪ್ರಸಕ್ತ ಸೀಸನ್‌ನ ಎರಡು ಬಲಿಷ್ಠ ತಂಡಗಳ ಮುಖಾಮುಖಿ ಅಭಿಮಾನಿಗಳಿಗೆ ರಸದೌತಣ ಬಡಿಸಿದೆ.
ಹೈದ್ರಾಬಾದ್ ನೀಡಿದ್ದ 196 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಐದು ವಿಕೆಟ್ ಕಳೆದುಕೊಂಡರೂ ಸಹ ಕೊನೆಯ ಮೂರು ಎಸೆತಗಳಲ್ಲಿ ರಶೀದ್ ಖಾನ್ ಹ್ಯಾಟ್ರಿಕ್ ಸಿಕ್ಸರ್ ಗೆಲುವಿನಿಂದ ಪಂದ್ಯವನ್ನ ರೋಚಕವಾಗಿ ಗೆದ್ದು ಬೀಗಿದೆ.
ಎಸ್‌ಆರ್‌ಎಚ್ ಪರ ಉಮ್ರಾನ್ ಮಲ್ಲಿಕ್ ಬೆಂಕಿಯಂತಹ ಬೌಲಿಂಗ್ ಒಂದೆಡೆಯಾದ್ರೆ, ಗುಜರಾತ್ ಪರ ವೃದ್ದಿಮಾನ್ ಸಾಹಾ ಹಾಗೂ ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್ ಸದ್ದು ಮಾಡಿದೆ. ಐದು ವಿಕೆಟ್ ಪಡೆದ ಉಮ್ರಾನ್ ಮಲ್ಲಿಕ್ ಮಿಂಚಿನ ಬೌಲಿಂಗ್ ನಡೆಸಿದ್ರೆ, ಉತ್ತಮ ಓಪನಿಂಗ್ ನೀಡಿದ ಸಾಹಾ ಜೊತೆಗೆ ಸ್ಫೋಟಕ ಫಿನಿಷಿಂಗ್ ಟಚ್ ನೀಡಿದ ರಶೀದ್ ಖಾನ್ ಇನ್ನಿಂಗ್ಸ್ ಅನ್ನು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ
ಗುಜರಾತ್ ಟೈಟನ್ಸ್ ಕೊನೆಯ ಓವರ್‌ನಲ್ಲಿ 22 ರನ್‌ಗಳ ದಾಖಲಿಸಿ ಅಮೋಘ ಗೆಲುವು ದಾಖಲಿಸಿದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಮಿಸುಕಾಡದೆ ಉಳಿದಿದೆ.
ಹಾಗಾದರೆ ಈ ಪಂದ್ಯದ ಬಳಿಕ ಗುಜರಾತ್ ಟೈಟನ್ಸ್ ಹಾಗೂ ಎಸ್‌ಆರ್‌ಎಚ್ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆಗಿರುವ ಬದಲಾವಣೆಗಳು ಏನು? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್
ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಐದು ವಿಕೆಟ್‌ಗಳಿಂದ ಗೆಲ್ಲುವ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲೇ ಉಳಿದಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ 8 ಪಂದ್ಯಗಳಲ್ಲಿ 7 ಗೆಲುವು ಮತ್ತು 1 ಪಂದ್ಯ ಸೋಲುವ ಮೂಲಕ 14 ಪಾಯಿಂಟ್ಸ್ ಕಲೆಹಾಕಿದ್ದು, ನೆಟ್ ರನ್‌ರೇಟ್(+371)ನಷ್ಟಿದೆ.
ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಟೈಟನ್ಸ್ ನಂತರದಲ್ಲಿ ರಾಜಸ್ತಾನ್ ನಂತರದಲ್ಲಿ 12 ಪಾಯಿಂಟ್ಸ್, ಸನ್‌ರೈಸರ್ಸ್ ಹೈದ್ರಾಬಾದ್ 10 ಪಾಯಿಂಟ್ಸ್ ಮೂಲಕ ನೆಟ್‌ರನ್‌ರೇಟ್‌ನಲ್ಲಿ ಲಕ್ನೋಗಿಂತ ಮುಂದಿದೆ. ಇನ್ನು 10 ಪಾಯಿಂಟ್ಸ್ ಹೊಂದಿರುವ ಆರ್‌ಸಿಬಿ ನೆಟ್ ರನ್‌ರೇಟ್‌ನಲ್ಲಿ ಹಿಂದಿದ್ದು ಐದನೇ ಸ್ಥಾನದಲ್ಲೇ ಉಳಿದಿದೆ.
GT vs SRH: 5 ವಿಕೆಟ್ ಗೊಂಚಲು ಪಡೆದು ಮಿಂಚಿದ ಉಮ್ರಾನ್ ಮಲಿಕ್

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 8 ಪಂದ್ಯಗಳಲ್ಲಿ ಬಟ್ಲರ್ 499 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಎರಡು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 368 ರನ್‌ಗಳಿಸಿದ್ದಾರೆ.ಹಾರ್ದಿಕ್ ಪಾಂಡ್ಯ 305 ರನ್‌ಗಳೊಂದಿಗೆ ಮೂರನೇ ಸ್ಥಾನ, ಶಿಖರ್ ಧವನ್ 302 ರನ್‌ಗಳ ಮೂಲಕ 4ನೇ ಸ್ಥಾನ ಹಾಗೂ 278 ರನ್‌ಗಳಿಸಿರುವ ಫಾಫ್ ಡುಪ್ಲೆಸಿಸ್ ಐದನೇ ಸ್ಥಾನ ಪಡೆದಿದ್ದಾರೆ.
ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ಅಬ್ಬರಿಸಿದ ರಶೀದ್ ಖಾನ್; ಹೈದರಾಬಾದ್ ವಿರುದ್ಧ ಗುಜರಾತ್‌ಗೆ ರೋಚಕ ಜಯ

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚಾಹಲ್ ಒಟ್ಟು 18 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.
ಗುಜರಾತ್ ವಿರುದ್ಧ ಐದು ವಿಕೆಟ್ ಸಂಪಾದಿಸಿದ ಉಮ್ರಾನ್ ಮಲ್ಲಿಕ್ ಎರಡನೇ ಸ್ಥಾನಕ್ಕೆ ಜಿಗಿದಿದ್ದು 15 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಸರಾಸರಿಯಲ್ಲಿ ಸ್ವಲ್ಪ ಹಿಂದಿರುವ ಟಿ. ನಟರಾಜನ್ 15 ವಿಕೆಟ್ ಸಂಪಾದಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಡ್ವೇನ್ ಬ್ರಾವೋ 14, ಮೊಹಮ್ಮದ್ ಶಮಿ, ಕುಲ್‌ದೀಪ್ ಯಾದವ್, ವಹಿಂದು ಹಸರಂಗ ತಲಾ 13 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications