Abhishek Porel: ರಿಷಭ್ ಪಂತ್ ಬದಲಾಗಿ ಡೆಲ್ಲಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅಭಿಷೇಕ್ ಪೊರೆಲ್
ಮಂಗಳವಾರ, ಏಪ್ರಿಲ್ 4ರಂದು ದೆಹಲಿಯಲ್ಲಿ ನಡೆಯುತ್ತಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್‌ನ ಏಳನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡುತ್ತಿದ್ದು, ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ಹಾರ್ದಿಕ್ ಪಾಂಡ್ಯ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡರು.
ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ 20 ವರ್ಷದ ಅಭಿಷೇಕ್ ಪೊರೆಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯವಾಡಿದರು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ 2023ರ ಐಪಿಎಲ್‌ನಲ್ಲಿ ಡೆಲ್ಲಿ ತಂಡದ ತವರಿನ ಮೊದಲ ಪಂದ್ಯವನ್ನು ಆಡಲು ಅಭಿಷೇಕ್ ಪೊರೆಲ್ ಆಯ್ಕೆಯಾದರು.

ಬಂಗಾಳದ ವಿಕೆಟ್ ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಸ್ಫೋಟಕ ಬ್ಯಾಟಿಂಗ್ ಮಾಡುವ ಒಲವು ಹೊಂದಿರುವ ಆಟಗಾರನಾಗಿದ್ದಾರೆ. ಅಭಿಷೇಕ್ ಪೊರೆಲ್ 2022ರಲ್ಲಿ ಬಂಗಾಳ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ, 16 ಪ್ರಥಮ ದರ್ಜೆ ಪಂದ್ಯಗಳಲ್ಲಿ 6 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಅಭಿಷೇಕ್ ಪೊರೆಲ್ ಅವರು ವೈಯಕ್ತಿಕ ಕೋಚ್ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಯುವ ಆಟಗಾರ ಈ ಋತುವಿನಲ್ಲಿ ಆಡುವ ನಿರೀಕ್ಷೆಯಿದೆ ಮತ್ತು ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದ್ದರು.
IPL 2023 Points Table: ಐಪಿಎಲ್ 2023ರ ಅಂಕಪಟ್ಟಿ; RCBಗೆ ಎಷ್ಟನೇ ಸ್ಥಾನ? ಯಾರಿಗೆ ಆರೆಂಜ್, ಪರ್ಪಲ್ ಕ್ಯಾಪ್?
ತರಬೇತಿ ಶಿಬಿರದಲ್ಲಿ ಅಭಿಷೇಕ್ ಪೊರೆಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗಮನ ಸೆಳೆದಿದ್ದರು. ಗಾಯಾಳು ರಿಷಭ್ ಪಂತ್ ಅವರ ಬದಲಾಗಿ ಈ ಬಾರಿಯ ಐಪಿಎಲ್ ಋತುವಿನಲ್ಲಿ ಅಭಿಷೇಕ್ ಆಯ್ಕೆಯಾಗಿದ್ದರು. ಆತನ ಸಾಮರ್ಥ್ಯದಲ್ಲಿ ನಂಬಿಕೆಯಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ದೊಡ್ಡ ಕೊಡುಗೆ ನೀಡಲಿದ್ದಾನೆ ಎಂದು ತಿಳಿಸಿದ್ದರು.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಅವರು ಟಾಸ್ ವೇಳೆ ಅಭಿಷೇಕ್ ಪೊರೆಲ್ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಘೋಷಿಸಿದರು.
"ದೆಹಲಿ ಪಿಚ್ ಉತ್ತಮವಾಗಿರುವಂತೆ ತೋರುತ್ತಿದೆ. ನಾವು ಸಕಾರಾತ್ಮಕ ಉದ್ದೇಶವನ್ನು ಹೊಂದಿದ್ದೇವೆ ಮತ್ತು ದೊಡ್ಡ ಸ್ಕೋರ್ ಮಾಡಲು ಪ್ರಯತ್ನಿಸುತ್ತೇವೆ. ಈ ದಿನ ನಾವು ಆಶಾದಾಯಕವಾಗಿ ನಾವು ಪ್ರದರ್ಶನ ನೀಡಿ ಗೆಲ್ಲಲು ಪ್ರಯತ್ನಿಸಲಿದ್ದೇವೆ," ಎಂದು ಡೇವಿಡ್ ವಾರ್ನರ್ ಹೇಳಿದರು.
"ನಮ್ಮ ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು, ರೋವ್ಮನ್ ಪೊವೆಲ್ ಬದಲಾಗಿ ಆನ್ರಿಚ್ ನಾರ್ಟ್ಜೆ ಆಡಲಿದ್ದಾನೆ ಮತ್ತು ಖಲೀಲ್ ಅಹ್ಮದ್ ಬದಲಾಗಿ ಅಭಿಷೇಕ್ ಪೊರೆಲ್ ಆಡುತ್ತಿದ್ದಾನೆ. ಎಡಗೈ ಆಟಗಾರನನ್ನು ಹೊಂದುವುದು ಯಾವಾಗಲೂ ಪ್ರಯೋಜನವಾಗುತ್ತದೆ. ಪಂದ್ಯ ಗೆಲ್ಲುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಚೆನ್ನಾಗಿ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಮಾಡಲಿದ್ದೇವೆ," ಎಂದು ಡೇವಿಡ್ ವಾರ್ನರ್ ಟಾಸ್ ವೇಳೆ ತಿಳಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸರ್ಫರಾಜ್ ಖಾನ್ ಕಳಪೆ ವಿಕೆಟ್ ಕೀಪಿಂಗ್ ಮಾಡಿದ ನಂತರ ಅಭಿಷೇಕ್ ಪೋರೆಲ್ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟನ್ಸ್ ಆಡುವ 11ರ ಬಳಗ
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮಿಚೆಲ್ ಮಾರ್ಷ್, ರಿಲೀ ರುಸ್ಸೌ, ಅಭಿಷೇಕ್ ಪೊರೆಲ್, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಚೇತನ್ ಸಕಾರಿಯಾ.
ಗುಜರಾತ್ ಟೈಟನ್ಸ್ ತಂಡ: ಶುಭ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ತೆವಾಟಿಯಾ, ರಶೀದ್ ಖಾನ್, ಜೋಶ್ವಾ ಲಿಟಲ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications