Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023 Points Table: ಅಂಕಪಟ್ಟಿಯಲ್ಲಿ ಲಕ್ನೋ ಹಿಂದಿಕ್ಕಿದ ರಾಜಸ್ಥಾನ; ಆರೆಂಜ್, ಪರ್ಪಲ್ ಕ್ಯಾಪ್ ಹೊಂದಿದವರ ಪಟ್ಟಿ

ಬುಧವಾರ, ಏಪ್ರಿಲ್ 12ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಕಳೆದ ಬಾರಿಯ ಫೈನಲಿಸ್ಟ್ ರಾಜಸ್ಥಾನ ರಾಯಲ್ಸ್ ತಂಡ ಕೊನೆಯ ಓವರ್‌ನಲ್ಲಿ 3 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಇದೇ ವೇಳೆ ರಾಜಸ್ಥಾನ ರಾಯಲ್ಸ್ ತಂಡ 2008ರ ನಂತರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಗೆಲುವು ಸಾಧಿಸಿತು. ಅಲ್ಲದೇ ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.

IPL 2023 Points Table; Rajasthan Royals Overtake Lucknow Super Giants; Orange Cap, Purple Cap Holders List

ಸಂಜು ಸ್ಯಾಮ್ಸನ್ ಪಡೆ ಆಡಿದ 4 ಪಂದ್ಯಗಳಿಂದ ಮೂರು ಗೆಲುವು ಮತ್ತು ಒಂದು ಸೋಲಿನೊಂದಿಗೆ 6 ಅಂಕಗಳನ್ನು ಗಳಿಸಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಕೂಡ ಸಮಾನ ಗೆಲುವು ಮತ್ತು ಸೋಲು ಕಂಡಿದೆ. ಆದರೆ ನೆಟ್ ರನ್‌ರೇಟ್ ಆಧಾರದ ಮೇಲೆ ರಾಜಸ್ಥಾನ ರಾಯಲ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ.

2023ರ ಐಪಿಎಲ್ ಅಂಕಪಟ್ಟಿ (ಬುಧವಾರದ ಅಂತ್ಯಕ್ಕೆ)

ತಂ ಪಂದ್ಯ ಗೆಲುವು ಸೋಲು ಅಂಕಗಳು
ರಾಜಸ್ಥಾನ ರಾಯಲ್ಸ್ 4 3 1 6
ಲಕ್ನೋ ಸೂಪರ್ ಜೈಂಟ್ಸ್ 4 3 1 6
ಕೋಲ್ಕತ್ತಾ ನೈಟ್ ರೈಡರ್ಸ್ 3 2 1 4
ಗುಜರಾತ್ ಟೈಟನ್ಸ್ 3 2 1 4
ಚೆನ್ನೈ ಸೂಪರ್ ಕಿಂಗ್ಸ್ 4 2 2 4
ಪಂಜಾಬ್ ಕಿಂಗ್ಸ್ 3 2 1 4
ರಾಯಲ್ ಚಾಲೆಂಜರ್ಸ್ ಬೆಂಗಳೂರು 3 1 1 2
ಮುಂಬೈ ಇಂಡಿಯನ್ಸ್ 3 1 1 2
ಸನ್‌ರೈಸರ್ಸ್ ಹೈದರಾಬಾದ್ 3 1 2 2
ಡೆಲ್ಲಿ ಕ್ಯಾಪಿಟಲ್ಸ್ 4 0 4 0

ಐಪಿಎಲ್ 2023ರ ಪಂದ್ಯಾವಳಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಎರಡನೇ ಸ್ಥಾನ ಮತ್ತು ಜೋಸ್ ಬಟ್ಲರ್ ಮೂರನೇ ಸ್ಥಾನದಲ್ಲಿದ್ದಾರೆ.

IPL 2023 Points Table; Rajasthan Royals Overtake Lucknow Super Giants; Orange Cap, Purple Cap Holders List

ಐಪಿಎಲ್ 2023ರ ಆರೆಂಜ್ ಕ್ಯಾಪ್ ಪಟ್ಟಿ

ಶಿಖರ್ ಧವನ್ - ಪಂಜಾಬ್ ಕಿಂಗ್ಸ್ - 3 ಪಂದ್ಯ - 225 ರನ್

ಡೇವಿಡ್ ವಾರ್ನರ್ - ಡೆಲ್ಲಿ ಕ್ಯಾಪಿಟಲ್ಸ್ - 4 ಪಂದ್ಯ - 209 ರನ್

ಜೋಸ್ ಬಟ್ಲರ್ - ರಾಜಸ್ಥಾನ ರಾಯಲ್ಸ್ - 4 ಪಂದ್ಯ- 204 ರನ್

ಐಪಿಎಲ್ 2022ರ ಪರ್ಪಲ್ ಕ್ಯಾಪ್ ವಿಜೇತ ಯುಜ್ವೇಂದ್ರ ಚಹಾಲ್ ಈ ಋತುವಿನಲ್ಲಿ ಅದೇ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಸಿಎಸ್‌ಕೆ ವಿರುದ್ಧ ಎರಡು ವಿಕೆಟ್ ಪಡೆದ ನಂತರ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮಾರ್ಕ್ ವುಡ್ ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನದಲ್ಲಿ ಗುಜರಾತ್ ಟೈಟನ್ಸ್ ಸ್ಪಿನ್ನರ್ ರಶೀದ್ ಖಾನ್ ಇದ್ದಾರೆ.

IPL 2023 Points Table; Rajasthan Royals Overtake Lucknow Super Giants; Orange Cap, Purple Cap Holders List

ಐಪಿಎಲ್ 2023ರ ಪರ್ಪಲ್ ಕ್ಯಾಪ್ ಪಟ್ಟಿ

ಯುಜ್ವೇಂದ್ರ ಚಹಾಲ್ - 4 ಪಂದ್ಯ - 10 - ವಿಕೆಟ್

ಮಾರ್ಕ್ ವುಡ್ - 3 ಪಂದ್ಯ - 9 ವಿಕೆಟ್

ರಶೀದ್ ಖಾನ್ - 3 ಪಂದ್ಯ - 8 ವಿಕೆಟ್

Story first published: Thursday, April 13, 2023, 10:24 [IST]
Other articles published on Apr 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+