IPL 2023: ಪಂಜಾಬ್ ತಂಡದಿಂದ ಕನ್ನಡಿಗ ಸೇರಿ ಈ ಮೂವರು ಪ್ರಮುಖ ಆಟಗಾರರು ಹೊರಕ್ಕೆ?

ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಮಿನಿಹರಾಜಿಗೆ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ನಿರ್ಧರಿಸಿದೆ. ಈಗಾಗಲೇ ತಂಡದ ನಾಯಕನಾಗಿ ಮಯಾಂಕ್ ಅಗರ್ವಾಲ್ ಸ್ಥಾನಕ್ಕೆ ಶಿಖರ್ ಧವನ್ ನೇಮಕವಾಗಿದ್ದಾರೆ. ಈ ಬೆನ್ನಲ್ಲೇ ಪ್ರಮುಖ ಮೂವರು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಪಂಜಾಬ್ ಕಿಂಗ್ಸ್ (PBKS) ಮಾಜಿ ನಾಯಕ ಮಯಾಂಕ್ ಅಗರ್ವಾಲ್ (12 ಕೋಟಿ ರು.), ಓಡಿಯನ್ ಸ್ಮಿತ್ (6 ಕೋಟಿ ರು.) ಮತ್ತು ಶಾರುಖ್ ಖಾನ್ (9 ಕೋಟಿ ರು.) ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಟ್ರೆವರ್ ಬೇಲಿಸ್ ನೇತೃತ್ವದ ಹೊಸ ಕೋಚಿಂಗ್ ಸಿಬ್ಬಂದಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಮಿನಿ ಹರಾಜಿನಲ್ಲಿ ಕೆಲವು ದೊಡ್ಡ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ.
ಪಂಜಾಬ್ ಕಿಂಗ್ಸ್ ಪ್ರಸ್ತುತ ಎಲ್ಲಾ ಫ್ರಾಂಚೈಸಿಗಳಲ್ಲಿ ಅತ್ಯಧಿಕ ಪರ್ಸ್ ಅನ್ನು ಹೊಂದಿದೆ ಮತ್ತು ಅವರ ತಂಡದಿಂದ ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ಆ ಮೊತ್ತವನ್ನು ಹೆಚ್ಚಿಸಬಹುದು. ಮುಂಬರುವ ಹರಾಜಿನಲ್ಲಿ ಬೆನ್ ಸ್ಟೋಕ್ಸ್, ಸ್ಯಾಮ್ ಕರ್ರಾನ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಲು ನೋಡುತ್ತಿದೆ ಎನ್ನಲಾಗಿದೆ.

ಇಬ್ಬರು ಆಲ್‌ರೌಂಡರ್ ಖರೀದಿಸಲು ಸಿದ್ಧತೆ
ಮುಂದಿನ ಋತುವಿನಲ್ಲಿ ತಂಡವನ್ನು ಬಲಿಷ್ಠಗೊಳಿಸಲು ಬೆನ್ ಸ್ಟೋಕ್ಸ್, ಸ್ಯಾಮ್ ಕರಾನ್ ಮತ್ತು ಕ್ಯಾಮರೂನ್ ಗ್ರೀನ್ ಈ ಮೂವರಲ್ಲಿ ಇಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಲೇಬೇಕೆಂದು ಪಂಜಾಬ್ ತೀರ್ಮಾನಿಸಿದೆ ಎನ್ನಲಾಗಿದೆ.
ಪಂಜಾಬ್ ತನ್ನ ತಂಡಕ್ಕೆ ನೂತನ ನಾಯಕನನ್ನಾಗಿ ಶಿಖರ್ ಧವನ್‌ರನ್ನು ನೇಮಕ ಮಾಡಿದೆ. ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಜೊತೆಗೆ ಭಾರತದ ಇಬ್ಬರು ಪ್ರಸಿದ್ಧ ಬ್ಯಾಟರ್ ಇದ್ದು, ಆಲ್‌ರೌಂಡರ್ ಗಳನ್ನು ಸೇರಿಸಿಕೊಳ್ಳಲು ಮುಂದಾಗಿದೆ.
ಶಾಹಿನ್ ಅಫ್ರಿದಿ ಕಂಬ್ಯಾಕ್ ಮಾಡಲು ಶಾಹಿದ್ ಅಫ್ರಿದಿ ಟಿಪ್ಸ್ ಹೇಗೆ ನೆರವಾಯ್ತು?

ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲ
12 ಕೋಟಿ ರುಪಾಯಿ ನೀಡಿ ಖರೀದಿಸಿದ್ದ ಮಯಾಂಕ್ ಅಗರ್ವಾಲ್ ಮೇಲೆ ನಾಯಕತ್ವದ ಜವಾಬ್ದಾರಿ ಹೊರಿಸಿದ್ದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಅವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ, ಮುಂದಿನ ಸೀಸನ್‌ನಲ್ಲಿ ಜಾನಿ ಬೈರ್‌ಸ್ಟೋವ್ ಮತ್ತು ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದ್ದು, ಮಯಾಂಕ್ ಅಗರ್ವಾಲ್‌ರನ್ನು ತಂಡದಿಂದ ಕೈಬಿಡಲು ಕಾರಣ ಎನ್ನಲಾಗಿದೆ.
ಇನ್ನು 9 ಕೋಟಿ ರುಪಾಯಿ ಪಡೆದುಕೊಂಡಿದ್ದ ಶಾರುಖ್ ಖಾನ್ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಎಂಟು ಪಂದ್ಯಗಳಲ್ಲಿ 108.33 ಸ್ಟ್ರೈಕ್ ರೇಟ್‌ನಲ್ಲಿ117 ರನ್ ಗಳಿಸಿದರು. 6 ಕೋಟಿ ರುಪಾಯಿ ಪಡೆದುಕೊಂಡಿದ್ದ ವೆಸ್ಟ್ ಇಂಡೀಸ್‌ನ ದೈತ್ಯ ಆಲ್‌ರೌಂಡರ್ ಒಡಿಯಾನ್ ಸ್ಮಿತ್ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಮುಂದಿನ ತಿಂಗಳು ಮಿನಿ ಹರಾಜು
ಐಪಿಎಲ್ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದ್ದು, ಈವೆಂಟ್‌ನ ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಟರ್ಕಿಯ ಇಸ್ತಾಂಬುಲ್ ಅಥವಾ ಬೆಂಗಳೂರಿನಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಎಲ್ಲಾ ಫ್ರಾಂಚೈಸಿಗಳು ನವೆಂಬರ್ 15 ರೊಳಗೆ ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications