
ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಶಾಹೀನ್ ಅಫ್ರಿದಿ
ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಶಾಹೀನ್ ಮೂರು ವಿಕೆಟ್ ಪಡೆದರು. ಶಾಹೀನ್ ಮೊದಲ ಓವರ್ ನಲ್ಲೇ ಎರಡು ವಿಕೆಟ್ ಪಡೆದು ಆಘಾತ ನೀಡಿದರು. ಪಾಕಿಸ್ತಾನದ ಗೆಲುವಿನಲ್ಲಿ ಶಾಹೀನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಪಾಕಿಸ್ತಾನದ ಮಾಜಿ ನಾಯಕ ಮತ್ತು ಶಾಹಿದ್ ಅವರ ಭಾವೀ ಪತ್ನಿಯ ತಂದೆ ಶಾಹಿದ್ ಅಫ್ರಿದಿ ಅವರ ಸಲಹೆಯು ಇದೀಗ ಭವ್ಯವಾದ ಕಂಬ್ಯಾಕ್ ಮಾಡಲು ಶಾಹೀನ್ ಅವರಿಗೆ ನೆರವಾಗಿದೆ. ಹಾಗಿದ್ರೆ ಶಾಹಿದ್ ಅಫ್ರಿದಿ ಏನು ಸಲಹೆ ನೀಡಿರಬಹುದು ಎಂಬ ವಿಚಾರ ಈಗ ಬಹಿರಂಗವಾಗಿದೆ.

ಲೆಂಥ್ ಬದಲಾಯಿಸುವಂತೆ ಶಾಹಿನ್‌ಗೆ ಸಲಹೆ ನೀಡಿದ್ದ ಶಾಹಿದ್ ಅಫ್ರಿದಿ
ಸಾಮಾನ್ಯವಾಗಿ ಮೊದಲ ಎರಡು ಓವರ್‌ಗಳಲ್ಲಿ ಸ್ಟಂಪ್ ಮೇಲೆ ದಾಳಿ ಮಾಡುವುದು ಶಾಹೀನ್ ಶೈಲಿ. ಶಾಹೀನ್ ಉತ್ತಮ ಸ್ವಿಂಗ್ ಕಂಡು ಬ್ಯಾಟ್ಸ್‌ಮನ್‌ನನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುತ್ತಾನೆ. ಮುಖ್ಯವಾಗಿ ಹೊಸ ಚೆಂಡಿನೊಂದಿಗೆ ಬ್ಯಾಟ್ಸ್‌ಮನ್ ಸೆಟ್ ಆಗುವ ಮೊದಲು ಶಾಹೀನ್ ವಿಕೆಟ್ ಕಬಳಿಸುವಲ್ಲಿ ನಿಷ್ಣಾತರಾಗಿದ್ದಾರೆ. ಆದರೆ ಶಾಹೀನ್ ತಂತ್ರ ಮೊದಲಿನಂತೆ ಕ್ಲಿಕ್ ಆಗುತ್ತಿಲ್ಲ. ಹಾಗಾಗಿ ಲೆಂಥ್ ಬದಲಾಯಿಸುವಂತೆ ಆಫ್ರಿದಿ ಸಲಹೆ ನೀಡಿದ್ದಾರೆ.
ಈಗ ಎಲ್ಲರೂ ಶಾಹೀನ್ ಅವರ ಫುಲ್ ಲೆಂಥ್ ಎಸೆತಗಳ ಬಗ್ಗೆ ಯೋಚಿಸಬಹುದು. ಈ ಲೆಂಥ್ ಸ್ವಿಂಗ್ ಕಂಡುಬರದಿದ್ದರೆ, ಲೆಂಥ್ ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಹಿದ್ ಅಫ್ರಿದಿ ''ಇದು ಬ್ಯಾಟ್ಸ್‌ಮನ್‌ಗೆ ನಿರಾಸೆ ತಂದಿದೆ. ಶಾಹೀನ್ ನನ್ನ ಸಲಹೆಯನ್ನು ಆಲಿಸಿದ್ದಾನೆ. ಆದ್ರೆ ನಾನು ಚಿಕ್ಕಂದಿನಿಂದಲೂ ಸಲಹೆ ಕೇಳದ ವ್ಯಕ್ತಿ'' ಎಂದು ಶಾಹಿದ್ ಅಫ್ರಿದಿ ನಗುತ್ತಾ ಹೇಳಿದ್ದಾರೆ.

ಶಾಹಿನ್ ಬೌಲಿಂಗ್ ನೋಡಿ ಖುಷಿಗೊಂಡ ಶಾಹಿದ್ ಅಫ್ರಿದಿ
''ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ನಡೆಯುತ್ತಿರುವಾಗ ನಾನು ಪ್ರಯಾಣಿಸುತ್ತಿದ್ದೆ. ಲೈವ್ ವೀಕ್ಷಿಸಲು ಇಂಟರ್ನೆಟ್ ಲಭ್ಯವಿರಲಿಲ್ಲ. ಹಾಗಾಗಿ ಮನೆಗೆ ಕರೆ ಮಾಡಿ ಶಾಹೀನ್ ಓವರ್ ನ ವಿಡಿಯೋ ಕಳುಹಿಸುವಂತೆ ಕೇಳಿದ್ದೆ. ಅವರು ಪೂರ್ಣ-ಲೆಂಥ್ ಚೆಂಡುಗಳ ಬದಲಿಗೆ ವಿಕೆಟ್‌ಗಳನ್ನು ತೆಗೆದುಕೊಂಡಾಗ ನನಗೆ ಸಂತೋಷವಾಯಿತು, ಉತ್ತಮ-ಲೆಂಥ್ ಎಸೆತಗಳನ್ನು ಅವರು ಬೌಲ್ ಮಾಡಿದರು" ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಶಾಹಿನ್ ಕಂಬ್ಯಾಕ್ ಕುರಿತು ವಕಾರ್ ಯೂನಿಸ್ ಮಾತು
ಶಾಹೀನ್‌ನ ಅತ್ಯುತ್ತಮ ಕಂಬ್ಯಾಕ್‌ಗೆ ಲೆಂಥ್ ಬದಲಾವಣೆಯೇ ಕಾರಣ ಎಂದು ಪಾಕ್‌ನ ಲೆಜೆಂಡರಿ ಬೌಲರ್ ವಕಾರ್ ಯೂನಿಸ್ ಹೇಳಿದ್ದಾರೆ. ''ಆತ ಸರಿಯಾದ ಲೆಂಥ್ ಬೌಲ್ ಮಾಡಿದ್ದಾನೆ. ಫುಲ್ ಲೆಂಥ್ ಬೌಲಿಂಗ್ ಮಾಡಿ ಎಲ್ ಬಿ ಬಲೆಗೆ ಬೀಳಿಸುವಷ್ಟು ವೇಗ ತನಗಿಲ್ಲ ಎಂದು ಶಾಹೀನ್ ಅರಿತುಕೊಂಡಿದ್ದಾನೆ. ಅವರೊಬ್ಬ ಬುದ್ಧಿವಂತ ಬೌಲರ್'' ಎಂದು ವಕಾರ್ ಹೇಳಿದ್ದಾರೆ.
ಟಿ20 ವಿಶ್ವಕಪ್‌ಗೂ ಮುನ್ನ ಗಾಯಗೊಂಡಿದ್ದ ಶಾಹೀನ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಟಿ20 ವಿಶ್ವಕಪ್‌ಗೆ ಬಂದಿದ್ದರು. ಬಿಡುವು ತೆಗೆದುಕೊಳ್ಳುವುದು ಆಟಗಾರರ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಆದರೆ ಈಗ ಶಾಹೀನ್ ಫಾರ್ಮ್‌ಗೆ ಮರಳಿರುವುದು ಪಾಕಿಸ್ತಾನಕ್ಕೆ ಬಲ ತುಂಬಿದೆ.


Click it and Unblock the Notifications











