ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಲೀಗ್ ಹಂತದ ಕೊನೆಯ ಎರಡು ಪಂದ್ಯಗಳು ನಡೆಯಲಿದೆ. ಈ ಎರಡು ಪಂದ್ಯಗಳು ಕೂಡ ಬಹಳ ನಿರ್ಣಾಯಕವಾಗಿದ್ದು ಪ್ಲೇಆಫ್‌ಗೆ ಉಳಿದಿರುವ ಒಂದು ಸ್ಥಾನಕ್ಕೆ ಅರ್ಹತೆ ಪಡೆಯುವ ತಂಡವನ್ನು ನಿರ್ಣಯಿಸಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಮಡಗಳು ಮುಖಾಮುಖಿಯಾದರೆ ಮತ್ತೊಂದು ಪಂದ್ಯದಲ್ಲಿ ಆರ್‌ಸಿಬಿ ತಂಡ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಿದರೆ ನಿರಾತಂಕವಾಗಿ ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆ. ಹಾಗಾಗಿ ಆರ್‌ಸಿಬಿ ತಂಡಕ್ಕೆ ಈ ಪಂದ್ಯ ಅತ್ಯಂತ ನಿರ್ಣಾಯಕ. ಈ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಬೇಕಾದರೆ ತಂಡ ಸಂಘಟಿತ ಪ್ರದರ್ಶನ ನೀಡುವುದು ಅಗತ್ಯ. ಲೀಗ್ ಹಂತದ ಬಹುತೇಕ ಪಂದ್ಯದಲ್ಲಿ ಆರ್‌ಸಿಬಿ ಮೂವರು ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿತ್ತು ಎಂಬುದನ್ನು ಅಲ್ಲಕಳೆಯಲು ಸಾಧ್ಯವಿಲ್ಲ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರದರ್ಶನ ಆರ್‌ಸಿಬಿ ತಂಡಕ್ಕೆ ಮಹತ್ವದ್ದಾಗಿತ್ತು.

ಆದರೆ ಈ ನಿರ್ಣಾಯಕ ಪಂದ್ಯದಲ್ಲಿಯೂ ಈ ಮೂವರು ಆಟಗಾರರನ್ನು ಮಾತ್ರವೇ ನೆಚ್ಚಿಕೊಂಡರೆ ಆರ್‌ಸಿಬಿ ಮುನ್ನಡೆ ಸಾಧಿಸುವುದು ಅಸಾಧ್ಯ. ಈ ಸ್ಟಾರ್ ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರು ಕೂಡ ತಮ್ಮ ಜವಾಬ್ಧಾರಿಗೆ ಪೂರಕವಾಗಿ ಪ್ರದರ್ಶನ ನೀಡುವ ಅಗತ್ಯವಿದೆ. ಅದರಲ್ಲೂ ಈ ಪಂದ್ಯದಲ್ಲಿ ಈ ನಾಲ್ವರು ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷಯಿದೆ.
ವಿಕೆಟ್ ಕೀಪರ್ ಬ್ಯಾಟರ್ ಅನುಜ್ ರಾವತ್
ಯುವ ಆಟಗಾರ ಅನುಜ್ ರಾವತ್ ಈ ಬಾರಿಯ ಐಪಿಎಲ್‌ನಲ್ಲಿ ಸಾಕಷ್ಟು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಬಹುತೇಕ ಪಂದ್ಯಗಳಲ್ಲಿ ರಾವತ್ ವೈಫಲ್ಯವನ್ನು ಕಂಡಿದ್ದರು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅನುಜ್ ರಾವತ್ ಕೊನೆಯ ಹಂತದಲ್ಲಿ ಉತ್ತಮ ಕ್ಯಾಮಿಯೋ ಆಟವನ್ನು ಪ್ರದರ್ಶಿಸಿ ಗಮನಸೆಳೆದಿದ್ದರು. ಇಂದಿನ ಪಂದ್ಯದಲ್ಲಿ ಅವಕಾಶ ದೊರೆತರೆ ಮತ್ತೊಮ್ಮೆ ಅಂಥಾ ಪ್ರದರ್ಶನನ್ನು ರಾವತ್ ನೀಡುವುದು ಅಗತ್ಯವಾಗಲಿದೆ.
ಮೈಕಲ್ ಬ್ರೇಸ್‌ವೆಲ್
ನ್ಯೂಜಿಲೆಂಡ್ ಮೂಲದ ಆಲ್‌ರೌಂಡರ್ ಆಟಗಾರ ಮೈಕಲ್ ಬ್ರೇಸ್‌ವೆಲ್‌ಗೆ ಈ ಬಾರಿ ಹೆಚ್ಚು ಅವಕಾಶ ಪಡೆಯಲು ಸಾಧ್ಯವಾಗಿಲ್ಲ. ಬ್ಯಾಟಿಂಗ್‌ನಲ್ಲಿ ಬ್ರೇಸ್‌ವೆಲ್ ಎಂಥಾ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ಇದೇ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ ಅನುಭವಕ್ಕೆ ಬಂದಿತ್ತು. ಇದೀಗ ಮತ್ತೆ ಅಂಥಾ ಪ್ರದರ್ಶನ ನೀಡಬೇಕಿದೆ. ಬ್ರೇಸ್‌ವೆಲ್ ಈವರೆಗೆ ಬೌಲಿಂಗ್‌ನಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚಲು ಸಫಲವಾಗಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಬ್ರೇಸ್‌ವೆಲ್ ಮೇಲೆ ನಿರೀಕ್ಷೆ ಹೆಚ್ಚಿದೆ.
IPL 2023: ಆತನ ಆಟ ಹೊಗಳಲು ಪದಗಳಿಲ್ಲ: 1 ರನ್‌ನಿಂದ ಸೋತ ಬಳಿಕ ಕೆಕೆಆರ್ ನಾಯಕನ ಪ್ರತಿಕ್ರಿಯೆ
ವೇಗಿ ವೇಯ್ನ್ ಪಾರ್ನೆಲ್
ವೇಗದ ಬೌಲರ್ ವೇಯ್ನ್ ಪಾರ್ನೆಲ್ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ನೀಡಿದ ಆಟಗಾರ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನೀಡಿದ ಅಮೋಘ ಪ್ರದರ್ಶನ ಸೇರಿದಂತೆ ಕೆಲ ಅದ್ಭುತ ಆಟವನ್ನು ಪಾರ್ನೆಲ್ ಪ್ರದರ್ಶಿಸಿದ್ದಾರೆ. ಹೀಗಾಗಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಪಾರ್ನೆಲ್ ದಾಳಿ ನಿರ್ಣಾಯಕ. ಬೆಂಗಳೂರಿನಲ್ಲಿ ಈ ಪಂದ್ಯ ನಡೆಯಲಿರುವ ಕಾರಣ ಜಿಟಿ ತಂಡ ಆಕ್ರಮಂಕಾರಿ ಆಟಗಾರರು ದೊಡ್ಡ ಮೊತ್ತಗಳಿಸುವತ್ತ ಚಿತ್ತ ನೆಟ್ಟಿರುತ್ತಾರೆ. ಹಾಗಾಗಿ ಅಂಥಾ ಆಟಗಾರರನ್ನು ಕಟ್ಟಿ ಹಾಕಲು ಪಾರ್ನೆಲ್ ಸೂಕ್ತ ರಣತಂತ್ರದೊಂಡಿಗೆ ಕಣಕ್ಕಿಳಿಬೇಕು.
ಮೊಹಮ್ಮದ್ ಸಿರಾಜ್
ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಮೊಹಮ್ಮದ್ ಸಿರಾಜ್ ನೀಡಿರುವ ಪ್ರದರ್ಶನ ಅಮೋಘ. ಆರಂಭದಿಂದಲೇ ಎದುರಾಳಿಗಳ ವಿರುದ್ಧ ಸಿರಾಜ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಜಿಟಿ ತಂಡದ ವಿರುದ್ಧವೂ ಅಂಥಾದ್ಧೇ ಆಕ್ರಮಣಕಾರಿ ದಾಳಿಯನ್ನು ನಿರೀಕ್ಷಿಸಲಾಗುತ್ತಿದೆ. ಸಿರಾಜ್ ಈ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಕೆಲ ಪ್ರಮುಖ ವಿಕೆಟ್‌ಗಳನ್ನು ಪಡೆದರೆ ಜಿಟಿ ತಂಡ ಒತ್ತಡಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.