Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ದೀಪಕ್ ಚಹಾರ್ ಬದಲಿಗೆ ಸಿಎಸ್‌ಕೆ ತಂಡದಲ್ಲಿ ಸ್ಥಾನ ಪಡೆಯಬಹುದಾದ 2 ಆಟಗಾರರು

IPL 2023: These 2 Players Can Replace Deepak Chahar In CSK Squad

2023ರ ಐಪಿಎಲ್‌ನ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವೇಗಿ ದೀಪಕ್ ಚಹಾರ್ ಗಾಯಗೊಂಡ ಕಾರಣ, ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಬಲಗೈ ವೇಗಿ ಕೇವಲ ಒಂದು ಓವರ್‌ ಬೌಲಿಂಗ್ ಮಾಡಿ ಮೈದಾನದಿಂದ ಹೊರನಡೆದರು.

ದೀಪಕ್ ಚಹಾರ್ ಅವರು ಅಪಾರ ನೋವಿನಲ್ಲಿದ್ದಂತೆ ಕಂಡುಬಂದಿದ್ದು, ಸಿಎಸ್‌ಕೆ ತಂಡದ ಮುಂದಿನ ರಾಜಸ್ಥಾನ ರಾಯಲ್ಸ್ (ಆರ್ಆರ್) ವಿರುದ್ಧದ ಪಂದ್ಯವನ್ನುತಪ್ಪಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇತ್ತೀಚಿಗಷ್ಟೆ ಗಾಯದಿಂದ ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಿದ್ದರು. 2022ರ ಸಂಪೂರ್ಣ ಐಪಿಎಲ್ ಪಂದ್ಯಾವಳಿಯನ್ನು ತಪ್ಪಿಸಿಕೊಂಡಿದ್ದರು.

ದೀಪಕ್ ಚಹಾರ್ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಆಯ್ಕೆಯಾಗುವ ಇಬ್ಬರು ಆಟಗಾರರು
ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸಾಕಷ್ಟು ಸಮತೋಲಿತ ತಂಡವನ್ನು ಹೊಂದಿದೆ. ತಂಡದಲ್ಲಿ ಪ್ರತಿಭಾನ್ವಿತ ಮತ್ತು ಯುವ ಆಟಗಾರರು ಇದ್ದು, ದೀಪಕ್ ಚಹಾರ್ ಅವರ ಸ್ಥಾನವನ್ನು ತುಂಬಬಹುದು ಎಂದು ಹೇಳಲಾಗುತ್ತದೆ.

IPL 2023: These 2 Players Can Replace Deepak Chahar In CSK Squad

ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಮೂರು ಪಂದ್ಯಗಳಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಮುಂದಿನ ಪಂದ್ಯವನ್ನು ಬುಧವಾರ, ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದ್ದಾರೆ. ಮುಂದಿನ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ದೀಪಕ್ ಚಹಾರ್ ಬದಲಿಗೆ ಆಯ್ಕೆಯಾಗುವ 2 ಆಟಗಾರರನ್ನು ತಿಳಿದುಕೊಳ್ಳೋಣ.

ಸೀಮರ್‌ಜೀತ್ ಸಿಂಗ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದೀಪಕ್ ಚಹಾರ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಸಿಎಸ್‌ಕೆ ತಂಡವು ಸೀಮರ್‌ಜೀತ್ ಸಿಂಗ್ ಅವರಿಗೆ ಅವಕಾಶವನ್ನು ನೀಡುವ ಸಾಧ್ಯತೆ ಇದೆ.

ಈ ವೇಗಿ ಕಳೆದ ಋತುವಿನಲ್ಲಿ ಸಿಎಸ್‌ಕೆ ತಂಡಕ್ಕೆ 6 ಪಂದ್ಯಗಳನ್ನು ಆಡಿ 4 ವಿಕೆಟ್‌ಗಳನ್ನು ಪಡೆದ ಕಾರಣ ಉತ್ತಮವಾಗಿದ್ದರು. ಸೀಮರ್‌ಜೀತ್ ಸಿಂಗ್ ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಇದು ಕಳೆದ ಋತುವಿನಲ್ಲಿ ಸಾಕಷ್ಟು ಸ್ಪಷ್ಟವಾಗಿ ಕಂಡಿತ್ತು. ಇದೀಗ ಸೀಮರ್‌ಜೀತ್ ಸಿಂಗ್ ಅವರು ಗಾಯಾಳು ದೀಪಕ್ ಚಹಾರ್ ಅವರ ಸ್ಥಾನವನ್ನು ತುಂಬಲು ಪರಿಪೂರ್ಣ ವ್ಯಕ್ತಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಆಕಾಶ್ ಸಿಂಗ್

ಮುಖೇಶ್ ಚೌಧರಿ ಬದಲಿಗೆ ಆಕಾಶ್ ಸಿಂಗ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ವೇಗಿ 2020ರಲ್ಲಿ ಭಾರತದ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು ಮತ್ತು ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದರು. ಎಡಗೈ ವೇಗಿ ಇದುವರೆಗೆ 9 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, ಐದು ಪ್ರಥಮ ದರ್ಜೆ ಪಂದ್ಯಗಳ ಜೊತೆಗೆ 9 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 31 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಆಕಾಶ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಬೌಲಿಂಗ್ ಲೈನ್‌ಅಪ್‌ನಲ್ಲಿ ಎಡಗೈ ಬೌಲರ್ ಎಂಬುದು ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಹೊಸ ಚೆಂಡಿನೊಂದಿಗೆ ಸ್ವಿಂಗ್ ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡಕ್ಕೆ ದೀಪಕ್ ಚಾಹರ್ ಅನುಪಸ್ಥಿತಿಯಲ್ಲಿ ಅನುಕೂಲಕರವಾಗುತ್ತದೆ.

Story first published: Monday, April 10, 2023, 21:30 [IST]
Other articles published on Apr 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+