IPL ಹರಾಜು 2022: 50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿರುವ ಭಾರತದ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಹರಾಜು ಸಮೀಪಿಸುತ್ತಿದ್ದು, ಇನ್ನು 10 ದಿನಗಳಷ್ಟೇ ಬಾಕಿ ಉಳಿದಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ತಯಾರಿ ನಡೆದಿದ್ದು, ಬಿಸಿಸಿಐ ಮಂಗಳವಾರ ಮೆಗಾ ಹರಾಜಿಗೆ ಆಟಗಾರರ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರತಿ ಸೀಸನ್‌ನಂತೆ ಕೇವಲ ಎಂಟು ತಂಡಗಳಷ್ಟೇ ಕಾದಾಟಕ್ಕೆ ಇಳಿಯುತ್ತಿಲ್ಲ. ಬದಲಾಗಿ ಈ ಬಾರಿ 10 ತಂಡಗಳು ಅಖಾಡಕ್ಕಿಳಿಯಲಿದ್ದು, ಇದುವರೆಗೂ ನಡೆಯುತ್ತಿದ್ದ ಒಟ್ಟು 60 ಪಂದ್ಯಗಳ ಬದಲಿಗೆ ಒಟ್ಟು 74 ಪಂದ್ಯಗಳು ನಡೆಯಲಿದೆ. ಹೀಗಾಗಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 10 ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ಕುತೂಹಲ ಹೆಚ್ಚುತ್ತಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ಆಟಗಾರರ ಆಯ್ಕೆ ಪಟ್ಟಿಯಲ್ಲಿ ಒಟ್ಟು 590 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಮೊದಲು ಹರಾಜು ರಿಜಿಸ್ಟರ್‌ನಲ್ಲಿರುವ 1,214 ಹೆಸರುಗಳಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರಿದ್ದರು. ಆದ್ರೀಗ ಇದನ್ನ 590ಕ್ಕೆ ಕಡಿತಗೊಳಿಸಲಾಗಿದೆ. ಇದರಲ್ಲಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು 7 ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಾಗಿದ್ದಾರೆ.

50 ಲಕ್ಷ ರೂ.ಗಳ ಮೂಲ ಬೆಲೆ ಹೊಂದಿರುವ ಆಟಗಾರರು
ಯಾವುದೇ ಆಟಗಾರ ಎಷ್ಟು ಬೆಲೆಗೆ ಬಿಡ್ ಆಗಲಿದ್ದಾರೆ ಎಂಬುದರ ಬಗ್ಗೆ ಹೇಳಲು ಸಾಧ್ಯವಿಲ್ಲ. ಆದ್ರೆ ಆ ಆಟಗಾರನ ಮೂಲ ಬೆಲೆ ತಿಳಿಯಲು ಸಾಧ್ಯವಾಗಿದೆ. ಈ ಮೆಗಾ ಹರಾಜಿನಲ್ಲಿ ಒಟ್ಟು 24 ಭಾರತೀಯ ಆಟಗಾರರು ಹರಾಜಿಗೆ ಬರುತ್ತಿದ್ದು, ಇವರ ಮೂಲ ಬೆಲೆ 50 ಲಕ್ಷ ರೂ. ನಷ್ಟಿದ್ದು, ಇವರಲ್ಲಿ ಬಹುತೇಕರು ಸದ್ಯ ಫಾರ್ಮ್‌ನಲ್ಲಿಲ್ಲ.
50 ಲಕ್ಷ ಮೂಲ ಬೆಲೆ ಹೊಂದಿರುವ ಆಟಗಾರರಲ್ಲಿ ಅನೇಕರು ಹಿರಿಯ ಆಟಗಾರರು ಆಗಿದ್ದು, ಕೆಲವು ಪ್ರಸ್ತುತ ದೇಶೀಯ ಲೀಗ್‌ಗಳಲ್ಲಿ ಆಡುತ್ತಿರುವ ಆಟಗಾರರು ಇದ್ದಾರೆ. ಸೀಮಿತ ಓವರ್ ಕ್ರಿಕೆಟ್ ಮಾತ್ರವಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವ ಆಟಗಾರರು ಹಾಗೂ ಈ ಹಿಂದೆ ಟೀಂ ಇಂಡಿಯಾ ಪರ ಆಡಿ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಆಟಗಾರರು ಮೂಲ ಬೆಲೆ 50 ಲಕ್ಷ ರೂ. ಹೊಂದಿದ್ದಾರೆ.

50 ಲಕ್ಷಗಳ ಮೂಲ ಬೆಲೆ ಹೊಂದಿರುವ ದೇಶೀಯ ಆಟಗಾರರು
ಮೂಲ ಬೆಲೆ ಪಟ್ಟಿಯಲ್ಲಿ 50 ಲಕ್ಷ ರೂಪಾಯಿ ಹೊಂದಿರುವ ಕೀರ್ತ್ ಸಿಂಗ್, ಪವನ್ ನೇಗಿ, ರಾಹುಲ್ ಶರ್ಮಾ, ಸಂದೀಪ್ ವಾರಿಯರ್, ಖಲೀಲ್ ಅಹ್ಮದ್, ರಿಷಿ ಧವನ್, ಕರಣ್ ಶರ್ಮಾ, ವರುಣ್ ಆ್ಯರೋನ್, ಮೋಹಿತ್ ಶರ್ಮಾ ಕೂಡ ಸೇರಿದ್ದಾರೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾ ಟೆಸ್ಟ್ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಮುರಳಿ ವಿಜಯ್ ಕೂಡ ಇದ್ದಾರೆ. ಇವರಲ್ಲಿ ವಿಜಯ್ ಫಾರ್ಮ್ ಕಳೆದುಕೊಂಡು ಟೀಂ ಇಂಡಿಯಾದಿಂದ ದೂರವಾಗಿದ್ದರು. ಪೂಜಾರ ಬಹಳ ದಿನಗಳಿಂದ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಈ ಜೋಡಿ ಮಾರಾಟವಾಗದೇ ಉಳಿದರೂ ಆಶ್ಚರ್ಯವಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ್ದರೂ, ಪೂಜಾರ ಒಂದೇ ಒಂದು ಪಂದ್ಯದಲ್ಲಿ ಆಡಿರಲಿಲ್ಲ.
ಜಾಸ್ತಿ ಯೋಚನೆ ಮಾಡ್ಬೇಡ, 4 ಓವರ್ ಮುಗಿಸಿ ತಣ್ಣಗಿರು ಎಂದಿದ್ದ ಮಾಹಿ: ಯುಜವೇಂದ್ರ ಚಹಾಲ್

ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶ್ರೀಶಾಂತ್
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಏಳು ವರ್ಷಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದಿರುವ ಕೇರಳದ ವೇಗಿ ಶ್ರೀಶಾಂತ್ ಬಹುತೇಕ ಕೊನೆಯ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಆದ್ರೆ ವಿಶ್ಲೇಷಕರ ಪ್ರಕಾರ ಅವರನ್ನು ಖರೀದಿಸಲು ಯಾವ ತಂಡವೂ ಮುಂದಾಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಏಕೆಂದರೆ ಅವರ ವಯಸ್ಸು ಕೂಡ ಒಂದು ಅಂಶವಾಗಿದ್ದು, ಬಹುತೇಕ ಫಾರ್ಮ್‌ನಲ್ಲಿಲ್ಲ.
ಇದೇ ಲಿಸ್ಟ್‌ನಲ್ಲಿ ವರುಣ ಆ್ಯರೋನ್, ಮಯಾಂಕ್ ಮಾರ್ಕಾಂಡೆ, ಗುರುಕೀರ್ತ್ ಸಿಂಗ್, ಮೋಹಿತ್ ಶರ್ಮಾ ಮತ್ತು ರಾಹುಲ್ ಶರ್ಮಾ ಅವರಂತಹ ಆಟಗಾರರು ಹರಾಜಾಗುವುದು ಕಷ್ಟ ಎಂದು ಅಂದಾಜಿಸಲಾಗಿದೆ.
ಆತ ಸೆಹ್ವಾಗ್‌ನಂತೆ ವಿಧ್ವಂಸಕಾರಿ ಬ್ಯಾಟರ್: 22ರ ಹರೆಯದ ಭಾರತೀಯ ಆಟಗಾರನ ಬಗ್ಗೆ ಕ್ಲಾರ್ಕ್ ಪ್ರಶಂಸೆ

50 ಲಕ್ಷ ಮೂಲ ಬೆಲೆಯ ಜೊತೆಗೆ ಬೇಡಿಕೆ ಹೊಂದಿರುವ ಆಟಗಾರರು
ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಹನುಮ ವಿಹಾರಿ, ಕರಣ್ ಶರ್ಮಾ, ರಿಷಿ ಧವನ್, ಖಲೀಲ್ ಅಹ್ಮದ್, ಸಂದೀಪ್ ವಾರಿಯರ್ ಮತ್ತು ಪವನ್ ನೇಗಿ ಹರಾಜಿನಲ್ಲಿ ಮಾರಾಟವಾಗುವ ಸಾಧ್ಯತೆ ಹೆಚ್ಚು. ಕೆಲ ದಿನಗಳಿಂದ ದೇಶೀಯ ಪಂದ್ಯಾವಳಿಗಳಲ್ಲಿ ಮತ್ತು ದೇಶೀ ಲೀಗ್‌ಗಳಲ್ಲಿ ಮಿಂಚುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ, ವಿಜಯ್ ಶಂಕರ್, ಶಿವಂ ದುಬೆ, ಮನೋಜ್ ತಿವಾರಿ, ಚೇತನ್ ಜಕಾರಿಯಾ ಮತ್ತು ಇತರರು ಮಾರಾಟವಾಗುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications