For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಡಾಟ್ ಬಾಲ್ ದಾಖಲೆ: ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ ಎಸೆದ 5 ಚಾಣಕ್ಷ ಬೌಲರ್‌ಗಳು ಇವರು!

ವಿಶ್ವದ ಅಗ್ರ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಯಶಸ್ವಿಯಾಗಿ ಅಂತ್ಯ ಕಂಡಿದೆ. ಸಾಕಷ್ಟು ರಣರೋಚಕ ಪಂದ್ಯಗಳಿಗೆ ಈ ಆವೃತ್ತಿ ಸಾಕ್ಷಿಯಾಗಿದ್ದು ಅಭಿಮಾನಿಗಳು ಭರಪೂರ ಮನರಂಜನೆ ಪಡೆದುಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿಯೂ ಅನೇಕ ದಾಖಲೆಗಳು ಸೃಷ್ಟಿಯಾಗಿದ್ದು ಸಾಕಷ್ಟು ಕ್ರಿಕೆಟ್ ಆಟಗಾರರ ವೃತ್ತಿಬದುಕಿನಲ್ಲಿ ಈ ಆವೃತ್ತಿಯಿಂದ ಬದಲಾವನೆಗಳಾಗುವ ಸಾಧ್ಯತೆಗಳು ಇವೆ.

ಇನ್ನು ಐಪಿಎಲ್‌ನಂಥಾ ಟೂರ್ನಿ ಆಟಗಾರರ ವೈಯಕ್ತಿಕ ವೈಯಕ್ತಿಕ ಕ್ರಿಕೆಟ್ ಕೌಶಲ್ಯಗಳನ್ನು ಪ್ರಸ್ತುತಪಡಿಸಲು ಇರುವ ಅದ್ಭುತ ವೇದಿಕೆಯೂ ಹೌದು. ಟಿ20 ಕ್ರಿಕೆಟ್ ಬ್ಯಾಟರ್‌ಗಳ ಮಾದರಿ ಎಂಬ ಆಪಾದನೆಗಳಿದ್ದರೂ ಬೌಲರ್‌ಗಳು ಕೂಡ ಇಲ್ಲಿ ಸಾಕಷ್ಟು ಯಶಸ್ಸು ಸಾಧಿಸಿರುವುದು ಗೊತ್ತೇ ಇದೆ. ಇನ್ನು ಈ ಮಾದರಿಯಲ್ಲಿ ಬೌಲರ್‌ಗಳು ವಿಕೆಟ್ ಪಡೆಯುವುದರ ಜೊತೆಗೆ ರನ್ ನಿಯಂತ್ರಣ ಮಾಡುವುದು ಕುಡ ಬಹಳ ಮುಖ್ಯ. ಹೀಗಾಗಿ ಟಿ20 ಮಾದರಿಯಲ್ಲಿ ಡಾಟ್ ಬಾಲ್(ರನ್ ಇಲ್ಲದ ಎಸೆತಗಳು)ಗಳಿಗೆ ಬಹಳ ಮಹತ್ವವಿದೆ.

IPL records: Top 5 bowlers list who bowled maximum dot balls in a single IPL season

ಹಾಗಾಗಿ ಐಪಿಎಲ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್‌ಗಳು ಯಾರು? ಅಂಥಾ ಐವರು ಬೌಲರ್‌ಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

5. ಲಸಿತ್ ಮಲಿಂಗ - 2011ರ ಆವೃತ್ತಿಯಲ್ಲಿ 195 ಡಾಟ್ ಬಾಲ್

ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆನ್ನೆಲುಬಾಗಿದ್ದ ವೇಗದ ಬೌಲರ್. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ತಂಡಕ್ಕೆ ಪರಿಣಾಮಕಾರಿಯಾಗಿ ಪ್ರದರ್ಶನ ನೀಡುತ್ತಿದ್ದ ಆಟಗಾರ. 2011ರಲ್ಲಿ ವೃತ್ತಿ ಜೀವನದ ಉತ್ತುಂಗದಲ್ಲಿ ಅವರು ಆ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿಯೂ ಅದ್ಭುತ ಪ್ರದರ್ಶನ ನಿಡಿದ್ದರು. 2011ರ ಆವೃತ್ತಿಯಲ್ಲಿ ಮಲಿಂಗ 195 ಡಾಟ್ ಬಾಲ್‌ಗಳನ್ನು ಬಾಲ್‌ಗಳನ್ನು ಎಸೆದಿದ್ದರು.

4. ಮೊಹಮ್ಮದ್ ಶಮಿ - 2023ರ ಐಪಿಎಲ್‌ನಲ್ಲಿ 195 ಡಾಟ್ ಬಾಲ್

ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಅತ್ಯಂತ ಹೆಚ್ಚು ವಿಕೆಟ್‌ಗಳನ್ನು ಕಿತ್ತು ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನಲ್ಲಿ ಶಮಿಒ ಪಾತ್ರ ಕೂಡ ಮಹತ್ವದ್ದಾಗಿತ್ತು. ಈ ಆವೃತ್ತಿಯಲ್ಲಿ ಶಮಿ ವಿಕೆಟ್‌ಗಳನ್ನು ಪಡೆದಿದ್ದು ಮಾತ್ರವಲ್ಲದೆ ಡಾಟ್ ಬಾಲ್ ಎಸೆಯುವುದರಲ್ಲಿಯೂ ಜಿಟಿ ಪರ ದಾಖಲೆ ಮಾಡಿದ್ದಾರೆ. ಟೂರ್ನಿಯಲ್ಲಿ ಒಟ್ಟು 195 ಡಾಟ್ ಬಾಲ್‌ಗಳನ್ನು ಎಸೆದಿದ್ದು ಗುಜರಾತ್ ಟೈಟನ್ಸ್ ತಂಡಕ್ಕೆ ನೆರವಾಗಿತ್ತು.

3. ಮಿಚೆಲ್ ಜಾನ್ಸನ್ - 2013ರ ಆವೃತ್ತಿಯಲ್ಲಿ 196 ಡಾಟ್ ಬಾಲ್

2013ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೊಚ್ಚಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದಾಗ ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದು ಮಿಚೆಲ್ ಜಾನ್ಸನ್. ಆಸ್ಟ್ರೇಲಿಯಾದ ಎಡಗೈ ವೇಗಿ ಎದುರಾಳಿ ಬ್ಯಾಟರ್‌ಗಳಿಗೆ ಸಾಕಷ್ಟು ಸಂಕಷ್ಟ ನೀಡಿದ್ದು 196 ಡಾಟ್ ಬಾಲ್‌ಗಳನ್ನು ಎಸೆದಿದ್ದರು.

2. ಪ್ರಸಿದ್ಧ್ ಕೃಷ್ಣ- 2022 ಐಪಿಎಲ್‌ನಲ್ಲಿ 202 ಡಾಟ್ ಬಾಲ್

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ. ಒಂದೇ ಆವೃತ್ತಿಯಲ್ಲಿ 200ಕ್ಕೂ ಅಧಿಕ ಡಾಟ್ ಬಾಲ್ ಎಸೆದ ಪಟ್ಟಿಯಲ್ಲಿ ಕೇವಲ ಇಬ್ಬರು ಬೌಲರ್‌ಗಳು ಮಾತ್ರವೇ ಇದ್ದಾರೆ. ಅದರಲ್ಲಿ ಪ್ರಸಿದ್ಧ ಕೃಷ್ಣ ಕೂಡ ಒಬ್ಬರು. 2022ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವಾಗ 202 ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ್ದರು ಪ್ರಸಿದ್ಧ್. ಆದರೆ ಗಾಯದ ಕಾರಣದಿಂದಾಗಿ 2023ರ ಐಪಿಎಲ್ ಆವೃತ್ತಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.

1. ಡೇಲ್ ಸ್ಟೇಯ್ನ್ - 2013ರ ಐಪಿಎಲ್ ಆವೃತ್ತಿಯಲ್ಲಿ 219 ಡಾಟ್ ಬಾಲ್

ಒಂದೇ ಋತುವಿನಲ್ಲಿ ಬೌಲರ್ ಓರ್ವ ಅತಿ ಹೆಚ್ಚು ಡಾಟ್ ಬಾಲ್ ಬಾಲ್ ಎಸೆದ ದಾಖಲೆ ದಿಗ್ಗಜ ವೇಗಿ ಡೇಲ್ ಸ್ಟೇಯ್ನ್ ಹೆಸರಿನಲ್ಲಿದೆ. 2013ರ ಐಪಿಎಲ್ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದ ಸ್ಟೇಯ್ನ್ 219 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ ಈ ದಾಖಲೆ ಬರೆದಿದ್ದಾರೆ. 10 ವರ್ಷಗಳಾದರೂ ಈ ದಾಖಲೆ ಹಾಗೆಯೇ ಉಳಿದುಕೊಂಡಿದೆ.

Story first published: Thursday, June 1, 2023, 11:24 [IST]
Other articles published on Jun 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+