IPL vs PSL: ಕಪ್ ಗೆದ್ದವರಿಗೆ ಎಷ್ಟು ಹಣ ಸಿಗಲಿದೆ? ಆಟಗಾರರ ಸ್ಯಾಲರಿ ಎಷ್ಟು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ಗೆ ಸಕಲ ರೀತಿಯಲ್ಲಿ ವೇದಿಕೆ ಸಜ್ಜುಗೊಂಡಿದೆ. ಈ ಬಾರಿ 10 ತಂಡಗಳು ಕಣಕ್ಕಿಳಿಯುತ್ತಿದ್ದು, ಟೂರ್ನಿ ಮತ್ತಷ್ಟು ರೋಚಕತೆ ಹೆಚ್ಚಿಸಿದೆ. ಮನೋರಂಜನ್ ಕಾ ಬಾಪ್ ಖ್ಯಾತಿಯ ಐಪಿಎಲ್ ವಿಶ್ವದ ಪ್ರಮುಖ ಟಿ20 ಲೀಗ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ.
ವಿಶ್ವದ ಇತರೆ ಟಿ20 ಲೀಗ್‌ಗಳಾದ ಬಿಗ್ ಬ್ಯಾಷ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್, ಬಾಂಗ್ಲಾ ಪ್ರೀಮಿಯರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್ ಎಲ್ಲವೂ ಐಪಿಎಲ್‌ನ ನೆರಳಿನಲ್ಲಿ ಹುಟ್ಟಿಕೊಂಡಿವೆ. ಆದ್ರೂ ಕ್ರಿಕೆಟ್ ದೊಡ್ಡಣ್ಣ ಬಿಸಿಸಿಐ ಐಪಿಎಲ್ ಅನ್ನು ಯಶಸ್ವಿಯಾಗಿ ಬೆಳೆಸಿದ್ದು ಹಣದ ಹೊಳೆಯನ್ನೇ ಹರಿಸಿದೆ.
ಐಪಿಎಲ್‌ನ ಯಶಸ್ಸನ್ನು ಕಂಡಂತಹ ಆಸ್ಟ್ರೇಲಿಯಾ ಕೆಲವು ವರ್ಷಗಳ ಹಿಂದೆ ಬಿಗ್ ಬ್ಯಾಷ್ ಲೀಗ್ ಅನ್ನು ಹುಟ್ಟಿಹಾಕಿತು. ಅದೇ ರೀತಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ ತನ್ನದೇ ಆದ ಸ್ವದೇಶಿ ಟಿ20 ಟೂರ್ನಮೆಂಟ್ ಅನ್ನು ಶುರು ಮಾಡಿತು. ಇಷ್ಟಾದರೂ ಇಲ್ಲಿಯವರೆಗೂ ಆದಾಯ, ಆಟಗಾರರಿಗೆ ನೀಡುವ ಹಣ, ಪ್ರಶಸ್ತಿ ಮೊತ್ತವನ್ನ ನೋಡಿದ್ರೆ ಐಪಿಎಲ್ ವಿಶ್ವದ ಬೃಹತ್ ಟಿ20 ಲೀಗ್ ಆಗಿಯೇ ಉಳಿದಿದೆ.
ಐಪಿಎಲ್ ಮತ್ತು ಪಾಕಿಸ್ತಾನದ ಪಿಎಸ್‌ಎಲ್ ನಡುವಿನ ಪ್ರಮುಖ ವ್ಯತ್ಯಾಸಗಳನ್ನ ಈ ಕೆಳಗೆ ನೋಡಬಹುದು.

ಐಪಿಎಲ್‌ನಲ್ಲಿವೆ 10 ತಂಡಗಳು
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಬರೋಬ್ಬರಿ 10 ತಂಡಗಳು ಭಾಗವಹಿಸುತ್ತಿವೆ. ಇದುವರೆಗೂ ಎಂಟು ತಂಡಗಳು ಯಶಸ್ವಿಯಾಗಿ ಮುನ್ನಡೆದಿದ್ದು, ಈ ಬಾರಿ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಗೊಂಡ ಹೊಸ ತಂಡಗಳಾಗಿವೆ.
ಆದ್ರೆ 2015ರಲ್ಲಿ ಪ್ರಾರಂಭಗೊಂಡ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇದುವರೆಗೆ ಆರು ತಂಡಗಳಷ್ಟೇ ಆಡುತ್ತಿವೆ.
ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: 100 ವಿಕೆಟ್ ಪಡೆದ ವಿಶ್ವದ ಮೊಟ್ಟ ಮೊದಲ ಬೌಲರ್ ಆರ್. ಅಶ್ವಿನ್

ಐಪಿಎಲ್ ವರ್ಸಸ್ ಪಿಎಸ್‌ಎಲ್ ಆದಾಯ
ಐಪಿಎಲ್ ಮೂಲಕ ಬಿಸಿಸಿಐ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂಪಾಯಿ ಆದಾಯವನ್ನ ಅಧಿಕೃತ ಪ್ರಸಾರಕ ಸ್ಟಾರ್‌ಸ್ಪೋರ್ಟ್ಸ್ ಮೂಲಕ ಪಡೆಯುತ್ತದೆ.
ಆದ್ರೆ ಪಿಎಸ್‌ಎಲ್ ಟೂರ್ನಿಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 900 ಮಿಲಿಯನ್ ಪಾಕಿಸ್ತಾನ ರೂಪಾಯಿ (38.46 ಕೋಟಿ) ಪಡೆಯಲಿದೆ.
ಐಪಿಎಲ್ 2022: ಮೈಕ್ ಹಿಡಿದು ಸಿಕ್ಸರ್ ಬಾರಿಸಲು ಸಜ್ಜಾದ ಸುರೇಶ್ ರೈನಾ, ರವಿ ಶಾಸ್ತ್ರಿ!

ಆಟಗಾರರ ವೇತನ
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀನಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್ ರಾಹುಲ್ ಬರೋಬ್ಬರಿ 17 ಕೋಟಿ ರೂಪಾಯಿಗೆ ಹರಾಜಾದರು. ಕೆಲವು ಭಾರತೀಯ ಆಟಗಾರರು ಮತ್ತು ವಿದೇಶಿ ಆಟಗಾರರು 10 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ತಂಡಗಳನ್ನ ಸೇರಿಕೊಂಡಿದ್ದಾರೆ.
ಅದೇ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅತಿ ಹೆಚ್ಚು ಬೆಲೆ ಬಾಳುವ ಆಟಗಾರರಿಗೆ ಪ್ಲಾಟಿನಮ್ ಕ್ಯಾಟಗರಿ ನೀಡಲಾಗಿದೆ. ಇದರಲ್ಲಿ ಗರಿಷ್ಠ USD 1,70,000 ಪಡೆಯುತ್ತಾರೆ, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 1.74 ಕೋಟಿ ರೂಪಾಯಿಗಳು. ಈ ಕ್ಯಾಟಗರಿಯಲ್ಲಿ ಬಾಬರ್ ಅಜಮ್, ಕಿರಾನ್ ಪೊಲಾರ್ಡ್‌ನಂತಹ ಆಟಗಾರರಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ಒಟ್ಟು ತಂಡಗಳ ಪರ್ಸ್ ಬರೋಬ್ಬರಿ 900 ಕೋಟಿ ರೂಪಾಯಿಗಳಷ್ಟಿತ್ತು, ಆದ್ರೆ ಪಾಕಿಸ್ತಾನ ಈಗಲೂ ಕೂಡ ಡ್ರಾಫ್ಟ್ ಸಿಸ್ಟಂ ಹೊಂದಿದೆ.


ಐಪಿಎಲ್ 2022ರ ಪ್ರಶಸ್ತಿ ಮೊತ್ತ ಎಷ್ಟು?
ಐಪಿಎಲ್ 2022ರ ಟೂರ್ನಿ ಗೆದ್ದವರಿಗೆ ಬರೋಬ್ಬರಿ 20 ಕೋಟಿ ರೂಪಾಯಿ ನೀಡಲಾಗುವುದು. ಅದೇ ಪಾಕಿಸ್ತಾನ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ 3.5 ಕೋಟಿ ರೂಪಾಯಿ ದಕ್ಕಲಿದೆ.
ಇನ್ನು ಐಪಿಎಲ್ ರನ್ನರ್ ಅಪ್ ತಂಡಕ್ಕೆ 12.5 ಕೋಟಿ ಸಿಕ್ಕಿದ್ರೆ, ಪಾಕಿಸ್ತಾನದಲ್ಲಿ ನೀಡಲಾಗುವ ಮೊತ್ತ 1.5 ಕೋಟಿ ರೂಪಾಯಿ.
ಐಪಿಎಲ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್: 10 ಲಕ್ಷ
ಪಿಎಸ್‌ಎಲ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್: 14.1 ಲಕ್ಷ
ಐಪಿಎಲ್ ಗರಿಷ್ಠ ರನ್ ಸ್ಕೋರರ್: 10 ಲಕ್ಷ
ಪಿಎಸ್‌ಎಲ್ ಗರಿಷ್ಠ ರನ್ ಸ್ಕೋರರ್: 3.75 ಲಕ್ಷ
ಐಪಿಎಲ್ ಗರಿಷ್ಠ ವಿಕೆಟ್ ಟೇಕರ್ : 10 ಲಕ್ಷ
ಪಿಎಸ್‌ಎಲ್ ಗರಿಷ್ಠ ವಿಕೆಟ್ ಟೇಕರ್: 3.75 ಲಕ್ಷ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications