4ನೇ ಒಡಿಐ ಶತಕ ಗಳಿಸಿ, ಕೊಹ್ಲಿ, ಧೋನಿ ದಾಖಲೆ ಮುರಿದ ರಾಹುಲ್

ಮೌಂಟ್ ಮೌಂಗಾನುಯಿ, ಫೆಬ್ರವರಿ 11: ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಬೇ ಓವಲ್ ಮೈದಾನದಲ್ಲಿ ರಾಹುಲ್ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡದ ಮೊತ್ತ ಹೆಚ್ಚಿಸಿದರು.
ಆರಂಭಿಕ ಆಟಗಾರನಾಗಿರುವ ಕೆಎಲ್ ರಾಹುಲ್ ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಲು ಸೂಚಿಸಿದರೂ ಧೃತಿಗೆಡದೆ ರನ್ ಪೇರಿಸುತ್ತಲೇ ಇದ್ದಾರೆ. ತಂಡದ ಸಮತೋಲನ ಕಾಪಾಡಿಕೊಂಡು, ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಳ್ಳತೊಡಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಅತಿ ಹೆಚ್ಚು 224 ರನ್ ಗಳಿಸಿದ್ದ ರಾಹುಲ್, ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 113 ಎಸೆತಗಳಲ್ಲಿ 112 ರನ್ (9 ಬೌಂಡರಿ, 2 ಸಿಕ್ಸರ್) ಗಳಿಸಿದರು. ಈ ಶತಕದ ಮೂಲಕ ವೃತ್ತಿ ಬದುಕಿನ 4ನೇ ಶತಕ ಗಳಿಸಿದರು. ಈ ಮೂಲಕ ನ್ಯೂಜಿಲೆಂಡ್ ನಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎನಿಸಿಕೊಂಡರು. ಎಂಎಸ್ ಧೋನಿ ಕೂಡಾ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿರಲಿಲ್ಲ

5ನೇ ಕ್ರಮಾಂಕದಲ್ಲಿ ಆಡಿ ಶತಕ ಗಳಿಕೆ
ಕೆಎಲ್ ರಾಹುಲ್ ಅವರು 2015ರ ನಂತರ 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. 2015ರಲ್ಲಿ ಸುರೇಶ್ ರೈನಾ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಜಿಂಬಾಬ್ವೆ ವಿರುದ್ಧ 110 ರನ್ ಗಳಿಸಿದ್ದರು. 21 ವರ್ಷಗಳ ಬಳಿಕ ಏಷ್ಯಾದ ಹೊರಗೆ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಶತಕ ಗಳಿಸಿದ್ದಾರೆ. 2017ರಲ್ಲಿ ಕಟಕ್ ನಲ್ಲಿ ಧೋನಿ ಶತಕ ಗಳಿಸಿದ್ದ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಶತಕ ಗಳಿಸಿರಲಿಲ್ಲ. ಈ ಸಾಧನೆಯನ್ನು ರಾಹುಲ್ ಮಾಡಿದ್ದಾರೆ.

ತ್ವರಿತಗತಿಯಲ್ಲಿ ಶತಕ ಗಳಿಕೆ
ಅತಿ ಕಡಿಮೆ ಇನಿಂಗ್ಸ್ ಗಳಲ್ಲಿ ನಾಲ್ಕು ಏಕದಿನ ಕ್ರಿಕೆಟ್ ಶತಕ ಗಳಿಸಿದ ಆಟಗಾರರ ಪೈಕಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಕೆಎಲ್ ರಾಹುಲ್ ಅವರು 31 ಇನ್ನಿಂಗ್ಸ್ ನಲ್ಲಿ 4ನೇ ಶತಕ ಗಳಿಸಿದ್ದರೆ, ವಿರಾಟ್ ಅವರು 4 ಶತಕ ಗಳಿಸಲು 36 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ!
ಆದರೆ, ಭಾರತದ ಬ್ಯಾಟ್ಸ್ ಮನ್ ಗಳ ಪೈಕಿ ಆರಂಭಿಕ ಆಟಗಾರ ಶಿಖರ್ ಧವನ್ ಅತ್ಯಂತ ಕಡಿಮೆ ಇನ್ನಿಂಗ್ಸ್ ಗಳಲ್ಲಿ 4 ಶತಕ ಗಳಿಸಿದ್ದರು. 24 ಇನ್ನಿಂಗ್ಸ್ ಗಳಲ್ಲೇ ನಾಲ್ಕು ಶತಕಗಳನ್ನು ಗಳಿಸಿದ ಸಾಧನೆ ಮಾಡೀದ್ದಾರೆ. ಮಿಕ್ಕಂತೆ ಟಾಪ್ 5 ಪಟ್ಟಿಯಲ್ಲಿ ಗೌತಮ್ ಗಂಭೀರ್ 44 ಮತ್ತು ವೀರೇಂದ್ರ ಸೆಹ್ವಾಗ್ 50 ಇನ್ನಿಂಗ್ಸ್ ನಲ್ಲಿ 4 ಏಕದಿನ ಶತಕ ಗಳಿಸಿದ್ದಾರೆ.

ರಾಹುಲ್ ಇನ್ನಿತರ ದಾಖಲೆಗಳು
* ಕೆಎಲ್ ರಾಹುಲ್ ಅವರು 4ನೇ ಶತಕ ಗಳಿಸಿದ್ದು, ಈ ಪೈಕಿ 3 ಶತಕ ಏಷ್ಯಾದ ಹೊರಗೆ ಬಾರಿಸಿದ್ದಾಗಿದೆ.
* ಮೌಂಟ್ ಮೌನಾಗಾನುಯಿಯ ಬೇ ಓವಲ್ ನಲ್ಲಿ ಶತಕ ಗಳಿಸಿದವರು:
ನ್ಯೂಜಿಲೆಂಡ್ ವಿರುದ್ಧ ಕೆಎಲ್ ರಾಹುಲ್ (2020)
ಶ್ರೀಲಂಕಾ ವಿರುದ್ಧ ಮಾರ್ಟಿನ ಗಪ್ಟಿಲ್ (2019)
ನ್ಯೂಜಿಲೆಂಡ್ ವಿರುದ್ಧ ಥಿಸಾರಾ ಪೆರೆರಾ (2019)
ನ್ಯೂಜಿಲೆಂಡ್ ವಿರುದ್ಧ ಕುಸಲ್ ಪೆರೆರಾ (2019)
ಶ್ರೀಲಂಕಾ ವಿರುದ್ಧ ಮಾರ್ಟಿನ ಗಪ್ಟಿಲ್ (2016)
ನ್ಯೂಜಿಲೆಂಡ್ ವಿರುದ್ಧ ಹಶೀಂ ಆಮ್ಲಾ(2014)

ರಾಹುಲ್ ದ್ರಾವಿಡ್ ನಂತರ ಕೆಎಲ್ ರಾಹುಲ್
ರಾಹುಲ್ ದ್ರಾವಿಡ್(1999ರಲ್ಲಿ ಟಾಂಟಾನ್ ನಲ್ಲಿ ಶ್ರೀಲಂಕಾ ವಿರುದ್ಧ 155ರನ್) ಬಳಿಕ ಏಷ್ಯಾದಿಂದ ಹೊರಗಿನ ಮೈದಾನದಲ್ಲಿ ಶತಕ ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡಿರುವ ಕೆಎಲ್ ರಾಹುಲ್ ಅವರು ಇಂದು ಈ ಸಾಧನೆ ಮಾಡಿದ್ದಾರೆ. 350 ಪಂದ್ಯವಾಡಿದ ಎಂಎಸ್ ಧೋನಿಗೆ ಈ ಸಾಧನೆ(ಏಷ್ಯಾದ ಹೊರಗೆ ಶತಕ) ಮಾಡಲು ಸಾಧ್ಯವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications